IND vs NZ: ಅಂತ್ಯವಾಯಿತು ರೋಹಿತ್- ಕೊಹ್ಲಿ ಸುವರ್ಣಯುಗ: ಇನ್ಮುಂದೆ ಟೀಂ ಇಂಡಿಯಾ ಕ್ಯಾಪ್ಟನ್ ಈ ಆಟಗಾರ!
India Squad for New Zealand T20 Series: ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ 3-3 ಏಕದಿನ ಮತ್ತು ಟಿ20 ಸರಣಿಯನ್ನು ತವರಿನಲ್ಲಿ ಆಡಲಿದೆ. ಏಕದಿನ ಸರಣಿಯ ಮೊದಲ ಪಂದ್ಯ ಜನವರಿ 18 ರಂದು ಹೈದರಾಬಾದ್‌ನಲ್ಲಿ ನಡೆಯಲಿದೆ. ಜನವರಿ 27ರಿಂದ ರಾಂಚಿಯಲ್ಲಿ ಟಿ20 ಸರಣಿ ಆರಂಭವಾಗಲಿದೆ. ಸರಣಿಯ ಎರಡನೇ ಟಿ20 ಜನವರಿ 29 ರಂದು ಲಕ್ನೋದಲ್ಲಿ ನಡೆಯಲಿದ್ದು, ಕೊನೆಯ ಟಿ20 ಪಂದ್ಯ ಫೆಬ್ರವರಿ 1 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ.
India Squad for New Zealand T20 Series: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಶುಕ್ರವಾರ ರಾತ್ರಿ ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಗೆ ತಂಡವನ್ನು ಪ್ರಕಟಿಸಿದೆ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯನ್ನು ತಂಡದಿಂದ ಹೊರಗಿಟ್ಟಿರುವುದು ಈ ತಂಡದ ಅಭಿಮಾನಿಗಳನ್ನು ಹೆಚ್ಚು ಆಶ್ಚರ್ಯಗೊಳಿಸಿದೆ. ಈ ಇಬ್ಬರೂ ಅನುಭವಿಗಳನ್ನು ಟಿ20 ಸರಣಿಗೆ ತಂಡದಿಂದ ಹೊರಗಿಡಲಾಗಿದೆ. ಟಿ20 ತಂಡದ ನಾಯಕತ್ವವನ್ನು ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರಿಗೆ ವಹಿಸಲಾಗಿದೆ.
ಇದನ್ನೂ ಓದಿ: ನ್ಯೂಜಿಲೆಂಡ್ ಸರಣಿ: ಟೀಮ್ ಇಂಡಿಯಾ ಇಲೆವನ್ ಸದಸ್ಯರ ಪಟ್ಟಿ ಪ್ರಕಟ
ಜನವರಿ 27 ರಿಂದ ಟಿ20 ಸರಣಿ:
ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ 3-3 ಏಕದಿನ ಮತ್ತು ಟಿ20 ಸರಣಿಯನ್ನು ತವರಿನಲ್ಲಿ ಆಡಲಿದೆ. ಏಕದಿನ ಸರಣಿಯ ಮೊದಲ ಪಂದ್ಯ ಜನವರಿ 18 ರಂದು ಹೈದರಾಬಾದ್‌ನಲ್ಲಿ ನಡೆಯಲಿದೆ. ಜನವರಿ 27ರಿಂದ ರಾಂಚಿಯಲ್ಲಿ ಟಿ20 ಸರಣಿ ಆರಂಭವಾಗಲಿದೆ. ಸರಣಿಯ ಎರಡನೇ ಟಿ20 ಜನವರಿ 29 ರಂದು ಲಕ್ನೋದಲ್ಲಿ ನಡೆಯಲಿದ್ದು, ಕೊನೆಯ ಟಿ20 ಪಂದ್ಯ ಫೆಬ್ರವರಿ 1 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ.
ಹಾರ್ದಿಕ್ ನಾಯಕತ್ವ:
ಟಿ20 ಸರಣಿಗೆ ಹಾರ್ದಿಕ್ ಪಾಂಡ್ಯಗೆ ಟೀಂ ಇಂಡಿಯಾ ನಾಯಕತ್ವವನ್ನು ಬಿಸಿಸಿಐ ಹಸ್ತಾಂತರಿಸಿದೆ. ಆಯ್ಕೆ ಸಮಿತಿಯು 16 ಸದಸ್ಯರ ತಂಡವನ್ನು ಆಯ್ಕೆ ಮಾಡಿದೆ. ಸ್ಟಾರ್ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ ತಂಡದ ಉಪನಾಯಕರಾಗಿರುತ್ತಾರೆ. ಮೊದಲ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ರೋಹಿತ್ ಶರ್ಮಾ ನಾಯಕತ್ವವನ್ನು ವಹಿಸಿಕೊಳ್ಳಲಿದ್ದಾರೆ. ಇದರ ನಂತರ ಟೀಂ ಇಂಡಿಯಾ ಫೆಬ್ರವರಿ 9 ರಿಂದ ಮಾರ್ಚ್ 22 ರವರೆಗೆ ಆಸ್ಟ್ರೇಲಿಯಾ ವಿರುದ್ಧ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ ಮತ್ತು ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಬೇಕಾಗಿದೆ.
ರೋಹಿತ್ ಮತ್ತು ವಿರಾಟ್ ಗೆ ಟಿ20 ತಂಡದಲ್ಲಿಲ್ಲ ಸ್ಥಾನ:
ಅನುಭವಿ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಗೆ ಟಿ20 ತಂಡದಲ್ಲಿ ಸ್ಥಾನ ಸಿಕ್ಕಿಲ್ಲ. ಇದರಿಂದಾಗಿ ಇವರಿಬ್ಬರು ಕ್ರಿಕೆಟ್‌ನ ಶಾರ್ಟ್ ಫಾರ್ಮೆಟ್‌ನಲ್ಲಿ ಕಾಣಿಸಿಕೊಳ್ಳುವುದು ಅಪರೂಪ ಎಂದು ಮಂಡಳಿ ಸೂಚಿಸಿದೆ. ಐಸಿಸಿ ಏಕದಿನ ವಿಶ್ವಕಪ್ ಈ ವರ್ಷ ಭಾರತ ಆತಿಥ್ಯ ವಹಿಸಲಿದ್ದು, 12 ವರ್ಷಗಳ ನಂತರ ಭಾರತ ಈ ಪಂದ್ಯಾವಳಿಯನ್ನು ಗೆಲ್ಲಬೇಕು ಎಂಬುದು ಮಂಡಳಿಯ ಗಮನ. ಇದಕ್ಕೂ ಮೊದಲು ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಭಾರತ 2011ರಲ್ಲಿ ಏಕದಿನ ವಿಶ್ವಕಪ್ ಗೆದ್ದಿತ್ತು. ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವಿರಾಟ್ 115 ಪಂದ್ಯಗಳನ್ನು ಆಡಿದ್ದರೆ, ರೋಹಿತ್ 148 ಪಂದ್ಯಗಳನ್ನು ಆಡಿದ್ದಾರೆ. ಇಬ್ಬರೂ ಐಸಿಸಿ ಟಿ20 ವಿಶ್ವಕಪ್-2022ರಲ್ಲಿ ಕೊನೆಯ ಬಾರಿಗೆ ಈ ಮಾದರಿಯಲ್ಲಿ ಆಡುತ್ತಿರುವುದು ಕಂಡುಬಂದಿದೆ.
ಇದನ್ನೂ ಓದಿ: IND vs SL: 3ನೇ ODIಗೆ ಸೂರ್ಯಕುಮಾರ್ ಇನ್; ಈ ಫ್ಲಾಪ್ ಆಟಗಾರ ಔಟ್: ಮಿ.360 ಅಬ್ಬರ ಗ್ಯಾರಂಟಿ
ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಗೆ ಟೀಂ ಇಂಡಿಯಾ:
ಹಾರ್ದಿಕ್ ಪಾಂಡ್ಯ (ನಾಯಕ), ಸೂರ್ಯಕುಮಾರ್ ಯಾದವ್ (ಉಪನಾಯಕ), ಇಶಾನ್ ಕಿಶನ್ (ವಿಕೆಟ್ ಕೀಪರ್), ರಿತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಯುಜ್ವೇಂದ್ರ ಚಾಹಲ್, ಅರ್ಶ್ದೀಪ್ ಸಿಂಗ್, ಉಮ್ರಾನ್ ಮಲಿಕ್, ಶಿವಂ ಮಾವಿ, ಪೃಥ್ವಿ ಶಾ ಮತ್ತು ಮುಖೇಶ್ ಕುಮಾರ್
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.