ನವದೆಹಲಿ: ಪಾಕಿಸ್ತಾನ ಮತ್ತು ಶ್ರೀಲಂಕಾ ವಿರುದ್ಧ ಸೋಲು ಕಾಣುವ ಮೂಲಕ ಟೀಂ ಇಂಡಿಯಾ ಏಷ್ಯಾಕಪ್ ಟೂರ್ನಿಯಿಂದ ಹೊರಬಿದ್ದಿದೆ. ಇದರಿಂದ ಕೋಟ್ಯಂತರ ಭಾರತೀಯ ಅಭಿಮಾನಿಗಳಿಗೆ ದೊಡ್ಡ ನಿರಾಸೆಯುಂಟಾಗಿದೆ. ಗೆಲ್ಲಲೇಬೇಕಾದ ಮಹತ್ವದ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಭಾರತ ತಂಡವು 6 ವಿಕೆಟ್‌ಗಳ ಸೋಲು ಕಂಡಿತು.


COMMERCIAL BREAK
SCROLL TO CONTINUE READING

ಏಷ್ಯಾಕಪ್‌ ಗೆಲ್ಲುವ ನೆಚ್ಚಿನ ತಂಡವೆನಿಸಿಕೊಂಡಿದ್ದ ಟೀಂ ಇಂಡಿಯಾ ಸತತ 2 ಸೋಲು ಕಂಡಿದ್ದು ವಿಶ್ವದ ಕ್ರಿಕೆಟ್ ದಿಗ್ಗಜರಿಗೆ ಶಾಕ್ ಆಗಿದೆ. ಬ್ಯಾಟಿಂಗ್-ಬೌಲಿಂಗ್ ಮತ್ತು ಫೀಲ್ಡಿಂಗ್‍ನಲ್ಲಿ ಕಳಪೆ ಪ್ರದರ್ಶನ ತೋರಿದ ಟೀಂ ಇಂಡಿಯಾ ಆಟಗಾರರ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಕಿಡಿಕಾರಿದ್ದಾರೆ. ಪಾಕಿಸ್ತಾನ ತಂಡದ ಮಾಜಿ ನಾಯಕ ಇಂಜಮಾಮ್ ಉಲ್ ಹಕ್ ಕೂಡ ಟೀಂ ಇಂಡಿಯಾ ಹಿರಿಯ ಆಟಗಾರರ ವಿರುದ್ಧ ಅಸಮಧಾನ ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿ: Team India : ಏಷ್ಯಾಕಪ್ ಸೋಲಿನ ನಂತರ, ಟೀಂ ಇಂಡಿಯಾದಲ್ಲಿ ಮಾಡಬೇಕು ಈ 3 ಬದಲಾವಣೆಗಳು!


ಕೊಹ್ಲಿ ಬ್ಯಾಟಿಂಗ್ ಪ್ರಶ್ನಿಸಿದ ಪಾಕ್ ಮಾಜಿ ನಾಯಕ   


ಭಾರತ ತಂಡದ ಸೋಲಿನ ಬಗ್ಗೆ ಕೆಲವು ವಿಷಯಗಳನ್ನು ಪ್ರಸ್ತಾಪಿಸಿರುವ ಇಂಜಮಾಮ್ ಉಲ್ ಹಕ್, ವಿರಾಟ್ ಕೊಹ್ಲಿ ಬ್ಯಾಟಿಂಗ್ ಬಗ್ಗೆ ಪ್ರಶ್ನಿಸಿದ್ದಾರೆ. ಕೊಹ್ಲಿ ಬ್ಯಾಟಿಂಗ್ ನೋಡಿ ನನಗೆ ನಿಜಕ್ಕೂ ಆಶ್ಚರ್ಯವಾಯಿತು. ಕೇವಲ 4 ಬಾಲ್ ಡಾಟ್ ಮಾಡಿದ ನಂತರ ಕೊಹ್ಲಿ ಈ ರೀತಿ ಒತ್ತಡಕ್ಕೆ ಒಳಗಾಗಿ ಔಟಾಗುತ್ತಾರೆ ಅಂತಾ ನಾನು ಅಂದುಕೊಂಡಿರಲಿಲ್ಲ. ಅಂದಿನ ಪಂದ್ಯದಲ್ಲಿ ಕೊಹ್ಲಿ ಔಟಾಗದೆ ಚೆನ್ನಾಗಿ ಬ್ಯಾಟಿಂಗ್ ಮಾಡಿದ್ದರೆ ತಂಡ ಗೆಲ್ಲುತ್ತಿತ್ತು ಎಂದು ಅವರು ಹೇಳಿದ್ದಾರೆ.


 ಒತ್ತಡದಲ್ಲಿ ರೋಹಿತ್ ಶರ್ಮಾ


ಆರಂಭಿಕ ಆಟಗಾರ ಕೆ.ಎಲ್.ರಾಹುಲ್ ಔಟಾದ ಬಳಿಕ ನಾಯಕ ರೋಹಿತ್ ಶರ್ಮಾ ಪ್ರತಿಕ್ರಿಯಿಸಿದ್ದು ಟೀಂ ಇಂಡಿಯಾವನ್ನು ಒತ್ತಡಕ್ಕೆ ಸಿಲುಕಿಸಿತು. ಇಂತಹ ಕಷ್ಟದ ಸಂದರ್ಭದಲ್ಲಿ ಅನುಭವಿ ಆಟಗಾರ ಕೊಹ್ಲಿ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಆಡಬೇಕಿತ್ತು. ಆದರೆ ಕ್ರೀಸ್‍ಗೆ ಬಂದ ಕೂಡಲೇ ಕೊಹ್ಲಿ ದೊಡ್ಡ ತಪ್ಪು ಮಾಡಿದರು. ಹಿರಿಯ ಆಟಗಾರರೇ ಈ ರೀತಿ ಒತ್ತಡಕ್ಕೆ ಸಿಲುಕಿದರೆ ಕಿರಿಯ ಆಟಗಾರರು ಹೇಗೆ ಉತ್ತಮ ಪ್ರದರ್ಶನ ನೀಡಲು ಸಾಧ‍್ಯವಾಗುತ್ತದೆ ಅಂತಾ ಇಂಜಮಾಮ್ ಉಲ್ ಹಕ್ ಹೇಳಿದ್ದಾರೆ.


ಇದನ್ನೂ ಓದಿ: ಮೈದಾನದಲ್ಲಿ ಕೂಗಾಡುವುದು, ಕಿರುಚುವುದರಿಂದ ಪ್ರಯೋಜನವಿಲ್ಲ: ರೋಹಿತ್ ವರ್ತನೆಗೆ ಶೋಯೆಬ್ ಅಖ್ತರ್ ಬೇಸರ


ತಂಡದ ಸಮತೋಲನ ಹಾಳಾಗ್ತಿದೆ


ಹಿರಿಯ ಆಟಗಾರರು ತಮ್ಮ ಒತ್ತಡವನ್ನು ಮೈದಾನದಲ್ಲಿ ತೋರಿಸಿಕೊಳ್ಳಬಾರದು. ಹಿರಿಯ ಆಟಗಾರರಿಂದಾಗಿ ಇಡೀ ತಂಡದ ಸಮತೋಲನವೇ ಹಾಳಾಯಿತು. ಪಾಕಿಸ್ತಾನ ಮತ್ತು ಶ್ರೀಲಂಕಾ ಎದುರು ಟೀಂ ಇಂಡಿಯಾಗೆ ಕೊನೆ ಓವರ್‍ವರೆಗೂ ಗೆಲ್ಲುವ ಅವಕಾಶವಿತ್ತು. ಆದರೆ ಒತ್ತಡದಲ್ಲಿ ಸಿಲುಕಿ ಆಡಿದ್ದರಿಂದ ಸೋಲು ಕಾಣಬೇಕಾಯಿತು ಎಂದು ಪಾಕ್‍ನ ಮಾಜಿ ಕ್ಯಾಪ್ಟನ್ ಹೇಳಿದ್ದಾರೆ. ರವೀಂದ್ರ ಜಡೇಜಾ ಸೇರಿದಂತೆ ಕೆಲವು ಅನುಭವಿ ಆಟಗಾರರ ಕೊರತೆಯಿಂದಲೂ ಭಾರತ ತಂಡ ಸೋಲು ಕಾಣಬೇಕಾಯಿತು ಅಂತಾ ಇದೇ ವೇಳೆ ಅವರು ಉಲ್ಲೇಖಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.