Rohit Sharma Records, Asia Cup 2023: ಸೋಮವಾರ ನಡೆದ ಏಷ್ಯಾ ಕಪ್-2023 ಗುಂಪು ಪಂದ್ಯದಲ್ಲಿ ಟೀಮ್ ಇಂಡಿಯಾ ನೇಪಾಳವನ್ನು ಡಿಎಲ್‌ಎಸ್ ಅಡಿಯಲ್ಲಿ 10 ವಿಕೆಟ್‌’ಗಳಿಂದ ಸೋಲಿಸಿದೆ. ಈ ಗೆಲುವಿನೊಂದಿಗೆ ಭಾರತ ಕೂಡ ಸೂಪರ್-4 ಸುತ್ತು ಪ್ರವೇಶಿಸಿದೆ. ಈ ಪಂದ್ಯದಲ್ಲಿ, ನಾಯಕ ರೋಹಿತ್ ಶರ್ಮಾ ಅದ್ಭುತವಾಗಿ ಬ್ಯಾಟಿಂಗ್ ಮಾಡಿದ್ದಲ್ಲದೆ, ‘ಪಂದ್ಯ ಪುರುಷ ಪ್ರಶಸ್ತಿ’ಗೆ ಭಾಜನರಾದರು. ಇನ್ನು ಈ ಒಂದು ಪಂದ್ಯದಲ್ಲಿ 5 ದಾಖಲೆಗಳನ್ನು ಬ್ರೇಕ್ ಮಾಡಿದ್ದಾರೆ.  


COMMERCIAL BREAK
SCROLL TO CONTINUE READING

ಇದನ್ನೂ ಓದಿ: “ಕಳಪೆ ಫೀಲ್ಡಿಂಗ್, ಇನ್ನಿಂಗ್ಸ್’ನಿಂದ ಸಂತೋಷವಾಗಿಲ್ಲ”: ಗೆದ್ದರೂ ಅಸಮಾಧಾನ ಹೊರಹಾಕಿದ ರೋಹಿತ್ ಶರ್ಮ


ಭಾರತ ತಂಡ ಏಷ್ಯಾಕಪ್‌’ನಲ್ಲಿ ಸೂಪರ್-4 ಸುತ್ತಿಗೆ ಪ್ರವೇಶಿಸಿದೆ. ಅನುಭವಿ ಆರಂಭಿಕ ಆಟಗಾರ ರೋಹಿತ್ ಶರ್ಮಾ ನಾಯಕತ್ವದ ಟೀಮ್ ಇಂಡಿಯಾ, ಪಲ್ಲೆಕಲೆನಲ್ಲಿ ನಡೆದ ಗ್ರೂಪ್-ಎ ಪಂದ್ಯದಲ್ಲಿ ಡಿಎಲ್‌ಎಸ್ ಅಡಿಯಲ್ಲಿ ನೇಪಾಳವನ್ನು 10 ವಿಕೆಟ್‌ಗಳಿಂದ ಸೋಲಿಸಿತು. 59 ಎಸೆತಗಳಲ್ಲಿ 6 ಬೌಂಡರಿ ಮತ್ತು 5 ಸಿಕ್ಸರ್‌’ಗಳ ನೆರವಿನಿಂದ ಅಜೇಯ 74 ರನ್ ಗಳಿಸಿದ ರೋಹಿತ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ಶುಭಮನ್ ಗಿಲ್ ಅವರೊಂದಿಗೆ 147 ರನ್‌’ಗಳ ಅಜೇಯ ಜೊತೆಯಾಟವನ್ನು ಆಡಿದರು. ಇನ್ನೊಂದೆಡೆ ಶುಭಮನ್ ಗಿಲ್ 62 ಎಸೆತಗಳಲ್ಲಿ 8 ಬೌಂಡರಿ ಹಾಗೂ 1 ಸಿಕ್ಸರ್‌ ಸಹಾಯದಿಂದ 67 ರನ್ ಕಲೆ ಹಾಕಿದ್ದಾರೆ.  


ಇನ್ನಿಂಗ್ಸ್‌’ನಲ್ಲಿ ಅತಿ ಹೆಚ್ಚು ಸಿಕ್ಸರ್‌:


ಸ್ಟಾರ್ ಓಪನರ್ ರೋಹಿತ್ ಶರ್ಮಾ ಏಷ್ಯಾಕಪ್ (ODI ಸ್ವರೂಪ) ಇನ್ನಿಂಗ್ಸ್‌’ನಲ್ಲಿ ಅತಿ ಹೆಚ್ಚು ಸಿಕ್ಸರ್‌’ಗಳನ್ನು ಬಾರಿಸಿದ ಆಟಗಾರರ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ. ವೀರೇಂದ್ರ ಸೆಹ್ವಾಗ್ ಮತ್ತು ಸುರೇಶ್ ರೈನಾ ಕ್ರಮವಾಗಿ ಪಾಕಿಸ್ತಾನದ ವಿರುದ್ಧ ಕರಾಚಿಯಲ್ಲಿ (2008) ಮತ್ತು ಹಾಂಗ್ ಕಾಂಗ್ ವಿರುದ್ಧ ಕರಾಚಿಯಲ್ಲಿ (2008) ನಡೆದ ಇನ್ನಿಂಗ್ಸ್‌’ನಲ್ಲಿ ತಲಾ 5 ಸಿಕ್ಸರ್‌’ಗಳನ್ನು ಬಾರಿಸಿದ್ದರು. ಇದೀಗ ರೋಹಿತ್ ಶರ್ಮಾ ಇವರ ದಾಖಲೆಯನ್ನು ಸರಿಗಟ್ಟಿದ್ದಾರೆ.


ಇನ್ನೊಂದೆಡೆ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಕರಾಚಿಯಲ್ಲಿ ಒಂದೇ ಇನ್ನಿಂಗ್ಸ್‌’ನಲ್ಲಿ 6 ಸಿಕ್ಸರ್‌ಗ’ಳನ್ನು ಬಾರಿಸಿ ದಾಖಲೆ ಬರೆದಿದ್ದರು. ಅನುಭವಿ ಸೌರವ್ ಗಂಗೂಲಿ (ಬಾಂಗ್ಲಾದೇಶ ವಿರುದ್ಧ, ಢಾಕಾ 2000) ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಅವರು ತಮ್ಮ ಇನ್ನಿಂಗ್ಸ್‌’ನಲ್ಲಿ 7 ಸಿಕ್ಸರ್‌’ಗಳನ್ನು ಸಿಡಿಸಿದ್ದಾರೆ.


ಬೆಸ್ಟ್ ಪಾರ್ಟ್’ನರ್ಶಿಪ್:


ಪಾರ್ಟ್’ನರ್ಶಿಪ್ ಆರಂಭಿಕರು ಎದುರಾಳಿ ತಂಡ ಎಲ್ಲಿ ಯಾವಾಗ
201 ನಾಟೌಟ್ ವೀರೇಂದ್ರ ಸೆಹ್ವಾಗ್ ಮತ್ತು ಗೌತಮ್ ಗಂಭೀರ್ ನ್ಯೂಜಿಲೆಂಡ್ ಹ್ಯಾಮಿಲ್ಟನ್ 2009
197 ನಾಟೌಟ್ ಸಚಿನ್ ತೆಂಡೂಲ್ಕರ್ ಮತ್ತು ಸೌರವ್ ಗಂಗೂಲಿ ಜಿಂಬಾಬ್ವೆ ಶಾರ್ಜಾ 1998
192 ನಾಟೌಟ್ ಶಿಖರ್ ಧವನ್ ಮತ್ತು ಶುಬ್ಮನ್ ಗಿಲ್ ಜಿಂಬಾಬ್ವೆ ಹರಾರೆ 2022
ಔಟಾಗದೆ 147 ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ ನೇಪಾಳ ಪಲ್ಲೆಕೆಲೆ 2023

 


ಕೊಹ್ಲಿ ರೆಕಾರ್ಡ್ ಬ್ರೇಕ್:


ಇನ್ನೊಂದೆಡೆ ರೋಹಿತ್ ಶರ್ಮಾ ವಿರಾಟ್ ಕೊಹ್ಲಿಯ ದಾಖಲೆಯನ್ನೂ ಸಹ ಮುರಿದಿದ್ದಾರೆ. ರೋಹಿತ್, ಕೊಹ್ಲಿ ಅವರ 1046 ರನ್‌’ಗಳನ್ನು ದಾಟಿದ್ದಲ್ಲದೆ, ಕಾಂಟಿನೆಂಟಲ್ ಟೂರ್ನಿಯಲ್ಲಿ ಸಾರ್ವಕಾಲಿಕ ಬ್ಯಾಟಿಂಗ್ ಪಟ್ಟಿಯಲ್ಲಿ ಶ್ರೀಲಂಕಾದ ಕುಮಾರ ಸಂಗಕ್ಕಾರ ಅವರ 1075 ರನ್‌’ಗಳ ಮೊತ್ತವನ್ನು ಹಿಂದಿಕ್ಕಿ 2 ನೇ ಸ್ಥಾನಕ್ಕೆ ಏರಿದ್ದಾರೆ.


49ನೇ ಅರ್ಧಶತಕ:


246ನೇ ಏಕದಿನ ಪಂದ್ಯವನ್ನಾಡಿದ ರೋಹಿತ್ ಈ ಮಾದರಿಯಲ್ಲಿ 49ನೇ ಅರ್ಧಶತಕ ಬಾರಿಸಿದ್ದಾರೆ. ಇನ್ನೊಂದೆಡೆ ರೋಹಿತ್ ಈಗ ವಿಶ್ವ ಏಕದಿನ ಇನ್ನಿಂಗ್ಸ್‌’ನಲ್ಲಿ 15 ಕ್ಕೂ ಹೆಚ್ಚು ಬಾರಿ 5 ಪ್ಲಸ್ ಸಿಕ್ಸರ್‌’ಗಳನ್ನು ಸಿಡಿಸಿದ ಮೂವರು ಬ್ಯಾಟರ್‌ಗಳಲ್ಲಿ ಒಬ್ಬರಾಗಿದ್ದಾರೆ.


ಅತಿ ಹೆಚ್ಚು 50 ಪ್ಲಸ್ ಸ್ಕೋರರ್:


ಏಷ್ಯಾ ಕಪ್‌ ಕ್ರಿಕೆಟ್’ನಲ್ಲಿ (ಒಡಿಐ ಮತ್ತು ಟಿ 20ಐಗಳು ಸೇರಿ) ಅತಿ ಹೆಚ್ಚು ಬಾರಿ 50 ಪ್ಲಸ್ ಸ್ಕೋರ್‌ಗಳನ್ನು (10) ಕಲೆಹಾಕಿದ ಭಾರತೀಯರ ಪಟ್ಟಿಯಲ್ಲಿ ರೋಹಿತ್ ಶರ್ಮಾ ಸೇರ್ಪಡೆಗೊಂಡಿದ್ದಾರೆ. ಅಷ್ಟೇ ಅಲ್ಲದೆ, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಈ ಪಟ್ಟಿಯಲ್ಲಿ 9 ಬಾರಿ 50 + ಸ್ಕೋರ್ ಮಾಡಿದ್ದು, ಇದೀಗ ಅವರನ್ನು ಸಹ ಹಿಂದಿಕ್ಕಿದ್ದಾರೆ.


ಭಾರತದ ಗೆಲುವು…


ಪಲ್ಲೆಕೆಲೆಯಲ್ಲಿ ಕಳೆದ ದಿನ ನಡೆದ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದರೂ ಕೂಡ ಟೀಂ ಇಂಡಿಯಾ ಡಿಎಲ್’ಎಸ್ ನಿಯಮದಡಿ ಗೆಲುವು ಸಾಧಿಸಿದೆ. ಟಾಸ್ ಗೆದ್ದು ನೇಪಾಳವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದ ಟೀಂ ಇಂಡಿಯಾ, ಕಳಪೆ ಫೀಲ್ಡಿಂಗ್‌ ಮಾಡಿತ್ತು. ಇದರ ಲಾಭ ಪಡೆದ ನೇಪಾಳದ ಬ್ಯಾಟ್ಸ್‌’ಮನ್‌’ಗಳು ಭಾರತದ ಅತ್ಯುತ್ತಮ ಬೌಲಿಂಗ್‌’ನ ವಿರುದ್ಧ 48.2 ಓವರ್‌’ಗಳಲ್ಲಿ 230 ರನ್ ಗಳಿಸಿದರು. ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಆಸಿಫ್ ಶೇಖ್ 97 ಎಸೆತಗಳಲ್ಲಿ 8 ಬೌಂಡರಿಗಳ ನೆರವಿನಿಂದ 58 ರನ್ ಗಳಿಸಿದರು. ಇವರಲ್ಲದೆ ಸೋಂಪಾಲ್ ಕಾಮಿ 48 ರನ್ ಕೊಡುಗೆ ನೀಡಿದರು. ವೇಗಿ ಮೊಹಮ್ಮದ್ ಸಿರಾಜ್ ಮತ್ತು ಆಲ್ ರೌಂಡರ್ ರವೀಂದ್ರ ಜಡೇಜಾ ತಲಾ 3 ವಿಕೆಟ್ ಪಡೆದರು. ನಾಯಕ ರೋಹಿತ್ ಮತ್ತು ಶುಭಮನ್ ಗಿಲ್ ಯಾವುದೇ ವಿಕೆಟ್ ನಷ್ಟವಿಲ್ಲದೆ 147 ರನ್ ಗಳಿಸಿದರು, ನಂತರ ಮಳೆಯಿಂದಾಗಿ ಪಂದ್ಯವನ್ನು ಆಡಲಾಗಲಿಲ್ಲ. DLS ಅಡಿಯಲ್ಲಿ ಭಾರತ 10 ವಿಕೆಟ್‌ಗಳಿಂದ ಗೆದ್ದಿತು.


ಇದನ್ನೂ ಓದಿ: ಫ್ಯಾನ್ಸ್ “ಕೊಹ್ಲಿ…ಕೊಹ್ಲಿ” ಎನ್ನುತ್ತಿದ್ದಂತೆ ಮಧ್ಯದ ಬೆರಳು ತೋರಿಸಿದ ಗಂಭೀರ್! ವಿಡಿಯೋ ನೋಡಿ


 


ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ