Rohit Sharma : ಮ್ಯಾಚ್ ವಿನ್ನರ್ ಅವೇಶ್ ಖಾನ್ ಹಾಡಿಹೊಗಳಿದ ಕ್ಯಾಪ್ಟನ್ ರೋಹಿತ್!
ಪಂದ್ಯದ ನಂತರ, ಕ್ಯಾಪ್ಟನ್ ರೋಹಿತ್ ಶರ್ಮಾ ತುಂಬಾ ಸಂತೋಷದಿಂದ ಕಾಣುತ್ತಿದ್ದರು ಮತ್ತು ಅನೇಕ ಆಟಗಾರರನ್ನು ಹಾಡಿ ಹೊಗಳಿದ್ದಾರೆ.
India Win T20 Series : ಶನಿವಾರ ರಾತ್ರಿ ನಡೆದ ನಾಲ್ಕನೇ ಟಿ20 ಪಂದ್ಯದಲ್ಲಿ ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡ ವೆಸ್ಟ್ ಇಂಡೀಸ್ ಅನ್ನು 59 ರನ್‌ಗಳಿಂದ ಸೋಲಿಸಿ 5 ಪಂದ್ಯಗಳ ಸರಣಿಯಲ್ಲಿ 3-1 ಮುನ್ನಡೆ ಸಾಧಿಸಿದೆ. ಪಂದ್ಯದ ನಂತರ, ಕ್ಯಾಪ್ಟನ್ ರೋಹಿತ್ ಶರ್ಮಾ ತುಂಬಾ ಸಂತೋಷದಿಂದ ಕಾಣುತ್ತಿದ್ದರು ಮತ್ತು ಅನೇಕ ಆಟಗಾರರನ್ನು ಹಾಡಿ ಹೊಗಳಿದ್ದಾರೆ.
ಪಂದ್ಯದ ನಂತರ ಮಾತನಾಡುವಾ ರೋಹಿತ್ ಶರ್ಮಾಗೆ ತಮ್ಮ ನಗುವನ್ನು ಮರೆಮಾಡಲು ಸಾಧ್ಯವಾಗಲಿಲ್ಲ. ಇದು ರೋಹಿತ್ ನಾಯಕತ್ವದಲ್ಲಿ ಟೀಂ ಇಂಡಿಯಾದ ಸತತ 8ನೇ ಸರಣಿ ಜಯವಾಗಿದೆ.
ಇದನ್ನೂ ಓದಿ : IND vs WI: ಮುಂದುವರೆದ ರೋ‘ಹಿಟ್’ ಪಾರುಪತ್ಯ! ಮತ್ತೊಂದು ಸರಣಿ ಗೆದ್ದ ಟೀಂ ಇಂಡಿಯಾ
ಕ್ಯಾಪ್ಟನ್ ರೋಹಿತ್ ಹೇಳಿದ್ದು ಹೀಗೆ
ಪಂದ್ಯದ ನಂತರ ಮಾತನಾಡಿದ ನಾಯಕ ರೋಹಿತ್ ಶರ್ಮಾ, 'ನಾವು ಅಮೋಘ ಆಟ ಆಡಿದ್ದು ಚೆನ್ನಾಗಿದೆ ಎಂದು ಭಾವಿಸುತ್ತೇನೆ. ಮ್ಯಾಚ್ ಗೆಲ್ಲುವುದು ಸುಲಭವಾಗಿರಲಿಲ್ಲ, ಆದರೆ ನಾವು ಉತ್ತಮ ಅಂಕ ಗಳಿಸಿದ್ದೇವೆ. ನಾವು ಹೇಗೆ ಬ್ಯಾಟಿಂಗ್ ಮಾಡಿದ್ದೇವೆ ಎಂಬುದರ ಕುರಿತು ಬಹಳಷ್ಟು ಚಿಂತನೆ ನಡೆಸಲಾಗಿತ್ತು ಮತ್ತು ಅದನ್ನು ನೋಡಲು ಸಂತೋಷವಾಯಿತು. ನಾವು ಸರಣಿ ಗೆಲ್ಲಲು ಪ್ರಬಲ ಸ್ಪರ್ಧಿಗಳಾಗಿದ್ದೇವೆ. ಪಿಚ್ ತುಂಬಾ ನಿಧಾನವಾಗಿದ್ದು ನಮ್ಮ ಬೌಲರ್‌ಗಳು ಇದರ ಲಾಭ ಪಡೆದರು ಎಂದರು.
ಈ ಆಟಗಾರರನ್ನು ಶ್ಲಾಘಿಸಿ ರೋಹಿತ್
ಪಂದ್ಯದ ಬಳಿಕ ಮಾತನಾಡಿದ ನಾಯಕ ರೋಹಿತ್ ಶರ್ಮಾ, 'ಇಂದು ನಾವು ಅವೇಶ್ ಖಾನ್ ಪ್ರತಿಭೆಯನ್ನು ಕಂಡು ಶಾಕ್ ಆಗಿದ್ದೇವೆ. ಯಾರಾದರೂ ಒಂದು ಅಥವಾ ಎರಡು ಪಂದ್ಯಗಳನ್ನು ಕಳೆದುಕೊಳ್ಳಬಹುದು. ನಾವು ಯುವ ಆಟಗಾರರಿಗೆ ಪಂದ್ಯಗಳನ್ನು ಆಡಲು ಸಾಕಷ್ಟು ನೀಡಲು ಬಯಸುತ್ತೇವೆ. ಮೊದಲ ಭಾರಿ ಅವೇಶ್ ಪ್ರದರ್ಶನ ನೋಡಲು ಅದ್ಭುತವಾಗಿತ್ತು. ಅವೇಶ್ ಖಾನ್ ಪಂದ್ಯದಲ್ಲಿ ಅದ್ಭುತ ಆಟ ತೋರಿದರು. ಅವರು ತಮ್ಮ ನಾಲ್ಕು ಓವರ್‌ಗಳ ಕೋಟಾದಲ್ಲಿ 17 ರನ್‌ಗಳಿಗೆ 2 ಪ್ರಮುಖ ವಿಕೆಟ್‌ಗಳನ್ನು ಪಡೆದರು. ಅವರ ಅಪಾಯಕಾರಿ ಪ್ರದರ್ಶನವನ್ನು ಗಮನದಲ್ಲಿಟ್ಟುಕೊಂಡು ಅವರಿಗೆ 'ಪಂದ್ಯ ಶ್ರೇಷ್ಠ' ಪ್ರಶಸ್ತಿ ನೀಡಲಾಯಿತು ಎಂದರು.
ಬ್ಯಾಟ್ಸ್‌ಮನ್‌ಗಳಿಗೆ ರೋಹಿತ್ ಕಿವಿ ಮಾತು
ಮುಂದುವರಿದು ಮಾತನಾಡಿದ ರೋಹಿತ್ ಶರ್ಮಾ, ಇಂದು ನಾವು ಗೆಲ್ಲಲು ಉತ್ತಮ ಕ್ರಿಕೆಟ್ ಆಡಿದ್ದೇವೆ. ಬ್ಯಾಟ್ಸ್‌ಮನ್‌ಗಳು ನಿಜವಾಗಿಯೂ ಬ್ರಿಲಿಯಂಟ್ ಪ್ರದರ್ಶನ ನೀಡಿದರು ಮತ್ತು ಬೌಲರ್‌ಗಳು ವಿಕೆಟ್‌ಗಳನ್ನು ಪಡೆಯಲು ಜೋಡಿಯಾಗಿ ಬೌಲ್ ಮಾಡಿದರು. ಇದು ಅವರ ಸ್ಕೋರಿಂಗ್‌ಗೆ ಬ್ರೇಕ್ ಹಾಕಿತು. ನಾಲ್ಕನೇ ಟಿ20 ಪಂದ್ಯದಲ್ಲಿ ಅಕ್ಷರ್ ಪಟೇಲ್ ಆಲ್ ರೌಂಡರ್ ಪ್ರದರ್ಶನದಿಂದ ಎಲ್ಲರ ಗಮನ ಸೆಳೆದಿದ್ದರು. ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಭಾರತ ಅಜೇಯ ಮುನ್ನಡೆ ಸಾಧಿಸಿದೆ.
ಇದನ್ನೂ ಓದಿ : IND vs WI 4ನೇ ಟಿ20 ಮ್ಯಾಚ್ ರೋಹಿತ್ ಆಡುವುದು ಡೌಟ್ : ಬಿಸಿಸಿಐ ಸ್ಪಷ್ಟನೆ
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.