Rohit Sharma: ಧೋನಿಯ ಶ್ರೇಷ್ಠ ದಾಖಲೆ ಬ್ರೇಕ್: ಇನ್ಮುಂದೆ ಭಾರತದ ಅತ್ಯಂತ ಯಶಸ್ವಿ T20 ನಾಯಕ ರೋಹಿತ್ ಶರ್ಮಾ
Rohit Sharma: ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಮೂರನೇ ಟಿ20 ಪಂದ್ಯ ಟೈ ಆಗಿದ್ದು, ಪಂದ್ಯ ಸೂಪರ್ ಓವರ್ ತಲುಪಿತ್ತು. ಮುಖೇಶ್ ಕುಮಾರ್ ಬೌಲಿಂಗ್ ಮಾಡಲು ಬಂದ ಮೊದಲ ಸೂಪರ್ ಓವರ್’ನಲ್ಲಿ ಅಫ್ಘಾನಿಸ್ತಾನ ಒಂದು ವಿಕೆಟ್ ನಷ್ಟಕ್ಕೆ 16 ರನ್ ಗಳಿಸಿತು. ರೋಹಿತ್ ಅವರ ಎರಡು ಸಿಕ್ಸರ್’ಗಳಿಂದಾಗಿ ಭಾರತ ಒಂದು ವಿಕೆಟ್ ಕಳೆದುಕೊಂಡು 16 ರನ್ ಗಳಿಸಿತು.
IND vs AFG T20I: ಬೆಂಗಳೂರಿನಲ್ಲಿ ಬುಧವಾರ ನಡೆದ ಡಬಲ್ ಸೂಪರ್ ಓವರ್ T20 ಇಂಟರ್ನ್ಯಾಷನಲ್ ಪಂದ್ಯದಲ್ಲಿ ಭಾರತವು ಅಫ್ಘಾನಿಸ್ತಾನ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ. ಮೂರು ಪಂದ್ಯಗಳ T20 ಸರಣಿಯನ್ನು 3-0 ರಿಂದ ಕ್ಲೀನ್ ಸ್ವೀಪ್ ಮಾಡಿದೆ.
ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಮೂರನೇ ಟಿ20 ಪಂದ್ಯ ಟೈ ಆಗಿದ್ದು, ಪಂದ್ಯ ಸೂಪರ್ ಓವರ್ ತಲುಪಿತ್ತು. ಮುಖೇಶ್ ಕುಮಾರ್ ಬೌಲಿಂಗ್ ಮಾಡಲು ಬಂದ ಮೊದಲ ಸೂಪರ್ ಓವರ್’ನಲ್ಲಿ ಅಫ್ಘಾನಿಸ್ತಾನ ಒಂದು ವಿಕೆಟ್ ನಷ್ಟಕ್ಕೆ 16 ರನ್ ಗಳಿಸಿತು. ರೋಹಿತ್ ಅವರ ಎರಡು ಸಿಕ್ಸರ್’ಗಳಿಂದಾಗಿ ಭಾರತ ಒಂದು ವಿಕೆಟ್ ಕಳೆದುಕೊಂಡು 16 ರನ್ ಗಳಿಸಿತು. ಅದಾದ ನಂತರ ಸ್ಕೋರ್ ಮತ್ತೆ ಸಮವಾಯಿತು. ಬಳಿಕ ಭಾರತ ತಂಡ ಎರಡನೇ ಸೂಪರ್ ಓವರ್’ಗೆ ಹೋಗುವ ಮೂಲಕ ಪಂದ್ಯವನ್ನು ಗೆದ್ದುಕೊಂಡಿತು.
ಬೆಂಗಳೂರಿನಲ್ಲಿ ಗೆಲುವಿನೊಂದಿಗೆ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಇತಿಹಾಸ ನಿರ್ಮಿಸಿದ್ದಾರೆ. ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಶ್ರೇಷ್ಠ ದಾಖಲೆ ಮುರಿಯುವ ಮೂಲಕ ಭಾರತದ ಅತ್ಯಂತ ಯಶಸ್ವಿ ಟಿ20 ನಾಯಕ ಎನಿಸಿಕೊಂಡಿದ್ದಾರೆ. ರೋಹಿತ್ ಶರ್ಮಾ ಅವರ ನಾಯಕತ್ವದಲ್ಲಿ ಇದುವರೆಗೆ 42 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಭಾರತ ಗೆಲುವು ಸಾಧಿಸಿದೆ. ಧೋನಿ ನಾಯಕತ್ವದಲ್ಲಿ ಭಾರತ ತಂಡ 72 ಟಿ20 ಪಂದ್ಯಗಳಲ್ಲಿ 41 ಪಂದ್ಯಗಳನ್ನು ಗೆದ್ದಿದೆ. ಮಹೇಂದ್ರ ಸಿಂಗ್ ಧೋನಿ ಅವರನ್ನು ಹಿಂದಿಕ್ಕಿ ರೋಹಿತ್ ಶರ್ಮಾ ಈಗ ಭಾರತದ ಅತ್ಯಂತ ಯಶಸ್ವಿ T20 ನಾಯಕರಾಗಿದ್ದಾರೆ.
ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತದ ದಾಖಲೆ ಅತ್ಯುತ್ತಮವಾಗಿದೆ. ಭಾರತ ಟಿ20 ಅಂತರಾಷ್ಟ್ರೀಯ ಸ್ವರೂಪದಲ್ಲಿ 75 ಕ್ಕೂ ಹೆಚ್ಚು ಗೆಲುವಿನ ಶೇಕಡಾವಾರು ಹೊಂದಿದೆ. 2024ರ ಟಿ 20 ವಿಶ್ವಕಪ್’ನಲ್ಲಿ ರೋಹಿತ್ ಶರ್ಮಾ ಭಾರತ ತಂಡದ ನಾಯಕನಾಗಬೇಕೆಂದು ಅನೇಕರು ಇಚ್ಛಿಸುತ್ತಿದ್ದಾರೆ. ಅಂದಹಾಗೆ 2024 ರ ಟಿ20 ವಿಶ್ವಕಪ್ ಜೂನ್ 1 ರಿಂದ ಜೂನ್ 29 ರವರೆಗೆ ವೆಸ್ಟ್ ಇಂಡೀಸ್ ಮತ್ತು ಅಮೆರಿಕದ ನೆಲದಲ್ಲಿ ನಡೆಯಲಿದೆ.
ಅಂತಾರಾಷ್ಟ್ರೀಯ ಟಿ20ಯಲ್ಲಿ ಭಾರತದ ಯಶಸ್ವಿ ನಾಯಕ
1. ರೋಹಿತ್ ಶರ್ಮಾ- 42 ಪಂದ್ಯಗಳಲ್ಲಿ ಗೆಲುವು
2. ಮಹೇಂದ್ರ ಸಿಂಗ್ ಧೋನಿ- 41 ಪಂದ್ಯಗಳಲ್ಲಿ ಗೆಲುವು
3. ವಿರಾಟ್ ಕೊಹ್ಲಿ- 30 ಪಂದ್ಯಗಳಲ್ಲಿ ಗೆಲುವು
4. ಹಾರ್ದಿಕ್ ಪಾಂಡ್ಯ - 10 ಪಂದ್ಯಗಳಲ್ಲಿ ಗೆಲುವು
ಇದನ್ನೂ ಓದಿ: ಇಂದು ಪ್ರಬಲ ಸಿದ್ಧಯೋಗ ರಚನೆ: ಈ ರಾಶಿಗಳಿಗೆ ಶುಭದಿನ, ಕೈಯಿಟ್ಟ ಪ್ರತಿ ಕೆಲಸದಲ್ಲೂ ಸಕ್ಸಸ್
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.