ನವದೆಹಲಿ: ವಿರಾಟ್ ಕೊಹ್ಲಿ ಮೂರು ಸ್ವರೂಪದ ಕ್ರಿಕೆಟ್ ನಲ್ಲಿ ಮುನ್ನಡೆಸುವುದು ಭಾರವೆನಿಸಿದ್ದರೆ ರೋಹಿತ್ ಶರ್ಮಾ ಅವರನ್ನು ಟಿ 20 ನಾಯಕತ್ವಕ್ಕೆ ಪರಿಗಣಿಸಬಹುದು ಎಂದು ಭಾರತದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಸೂಚಿಸಿದ್ದಾರೆ.


COMMERCIAL BREAK
SCROLL TO CONTINUE READING

ಭಾರತದ ಸೀಮಿತ ಓವರ್‌ಗಳ ಉಪನಾಯಕ ರೋಹಿತ್ ಐಪಿಎಲ್‌ನಲ್ಲಿ ಅತ್ಯಂತ ಯಶಸ್ವಿ ನಾಯಕನಾಗಿದ್ದು, ಅವರ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ ತಂಡ ನಾಲ್ಕು ಪ್ರಶಸ್ತಿ ಗೆದ್ದಿದೆ ಮತ್ತು ಯುವರಾಜ್ ಅವರು ವಿಶ್ವದ ಅತ್ಯುತ್ತಮ ಬ್ಯಾಟ್ಸ್‌ಮನ್‌ನ ಕೆಲಸದ ಹೊರೆ ಕಡಿಮೆ ಮಾಡಲು ತಂಡದ ನಾಯಕತ್ವವನ್ನು ವಿಭಜಿಸುವುದು ಕೆಟ್ಟದ್ದೇನಲ್ಲ ಎಂದು ಹೇಳಿದರು.


ಈ ಮೊದಲು ಕ್ರಿಕೆಟ್ ನಲ್ಲಿ  ಕೇವಲ ಎರಡು ಸ್ವರೂಪಗಳಿದ್ದವು - ಏಕದಿನ ಮತ್ತು ಟೆಸ್ಟ್, ಆದ್ದರಿಂದ ಆಗ ಒಬ್ಬ ನಾಯಕನನ್ನು ಹೊಂದಿರುವುದು ಸೂಕ್ತವಾಗಿತ್ತು. ಆದರೆ ಈಗ ಮೂರು ಸ್ವರೂಪಗಳಿವೆ ಮತ್ತು ವಿರಾಟ್ ಕೊಹ್ಲಿಗೆ  ಓವರ್‌ಲೋಡ್ ಆಗಿದ್ದರೆ, ಅವರು ಟಿ 20 ಫಾರ್ಮ್ಯಾಟ್‌ಗಾಗಿ ಬೇರೊಬ್ಬರನ್ನು ಪ್ರಯತ್ನಿಸಬೇಕು. ರೋಹಿತ್ ಅತ್ಯಂತ ಯಶಸ್ವಿ ನಾಯಕ ಎಂದು ಯುವಿ ಹೇಳಿದರು.


'ನನಗೆ ನಿಜವಾಗಿಯೂ ಗೊತ್ತಿಲ್ಲ. ವಿರಾಟ್ ಎಷ್ಟು ಕೆಲಸದ ಹೊರೆ ತೆಗೆದುಕೊಳ್ಳಬಹುದು ಎಂಬುದನ್ನು ಟೀಮ್ ಮ್ಯಾನೆಜ್ ಮೆಂಟ್ ನಿರ್ಧರಿಸಬೇಕು. ಅವರು ಟಿ 20 ಗಾಗಿ ಬೇರೊಬ್ಬರನ್ನು ಪ್ರಯತ್ನಿಸಬೇಕೇ? ಇದು ಭವಿಷ್ಯಕ್ಕಾಗಿ ಅವರು ಹೇಗೆ ಹೋಗಬೇಕೆಂಬುದನ್ನು ಸಂಪೂರ್ಣವಾಗಿ ಅವಲಂಬಿಸಿರುತ್ತದೆ. ವಿರಾಟ್ ಅವರು ಅತ್ಯುತ್ತಮ ಬ್ಯಾಟ್ಸ್‌ಮನ್. ಅವರ ಕೆಲಸದ ಹೊಣೆಯನ್ನು ಹೇಗೆ ನಿರ್ವಹಿಸುವುದು? ಎನ್ನುವುದನ್ನು ಸಂಪೂರ್ಣವಾಗಿ ತಂಡದ ಮ್ಯಾನೇಜ್ಮೆಂಟ್ ನಿರ್ಧರಿಸಬೇಕು ' ಎಂದು ತಿಳಿಸಿದರು.