ನವದೆಹಲಿ: ಮದುವೆ ಮನೆಯಲ್ಲಿ ಟೀಂ​ ಇಂಡಿಯಾ ಕ್ಯಾಪ್ಟನ್, ಹಿಟ್‍ಮ್ಯಾನ್ ಖ್ಯಾತಿಯ​​​ ರೋಹಿತ್ ಶರ್ಮಾ ತಮ್ಮ ಪತಿ ರಿತಿಕಾ ಸಜ್ದೇಹ್ ಜೊತೆಗೆ ಜಬರ್ದಸ್ತ್ ಡ್ಯಾನ್ಸ್ ಮಾಡಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿದೆ.


COMMERCIAL BREAK
SCROLL TO CONTINUE READING

ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯಕ್ಕೆ ಅಲಭ್ಯರಾಗಿರುವ ರೋಹಿತ್ ಶರ್ಮಾ ಸಂಬಂಧಿಕರೊಬ್ಬರ ಮದುವೆ ಸಂಭ್ರಮದಲ್ಲಿ ಪಾಲ್ಗೊಂಡಿದ್ದಾರೆ. ಸಂಬಂಧಿಕರ ಮದುವೆಯ ಕಾರಣ ರೋಹಿತ್ ಶರ್ಮಾ ಆಸೀಸ್ ವಿರುದ್ಧದ ಮೊದಲ ಏಕದಿನ ಪಂದ್ಯವನ್ನು ಮಿಸ್​ ಮಾಡಿಕೊಂಡಿದ್ದಾರೆ. ವಿವಾಹ ಸಮಾರಂಭದಲ್ಲಿ ರೋಹಿತ್ ತಮ್ಮ ಪತ್ನಿ ರಿತಿಕಾ ಜೊತೆಗೆ ಭರ್ಜರಿ ನೃತ್ಯ ಮಾಡಿ ಗಮನ ಸೆಳೆದಿದ್ದಾರೆ.


ಇದನ್ನೂ ಓದಿ: WTC ಫೈನಲ್ ತಂಡ ಪ್ರಕಟಕ್ಕೆ ದಿನಗಣನೆ ಶುರು: ಪ್ಲೇಯಿಂಗ್ 11ರಲ್ಲಿ ಈ ಡ್ಯಾಶಿಂಗ್ ಆಟಗಾರನಿಗೆ ಸಿಗುತ್ತಾ ಸ್ಥಾನ!


ಗುರುವಾರ ರಾತ್ರಿ ನಡೆದ ಭಾವನ ವಿವಾಹ ಸಮಾರಂಭದಲ್ಲಿ ರೋಹಿತ್ ಶರ್ಮಾ ಅವರು ಪತ್ನಿ ರಿತಿಕಾ ಜೊತೆ ಸಖತ್ ಆಗಿ​​ ಡ್ಯಾನ್ಸ್ ಮಾಡಿದ್ದಾರೆ. ಹಿಟ್‍ಮ್ಯಾನ್‍ ಡ್ಯಾನ್ಸ್​ಗೆ ಫ್ಯಾನ್ಸ್​ ಫಿದಾ ಆಗಿದ್ದಾರೆ. ಪತ್ನಿ ಜೊತೆಗೆ ಮಸ್ತ್ ಮಸ್ತ್ ಆಗಿ ರೋಹಿತ್ ಸ್ಟೆಪ್ಸ್ ಹಾಕಿದ್ದಾರೆ. ಪತ್ನಿಯ ಡ್ಯಾನ್ಸ್​ ನೋಡಿ ಖುಷಿಪಟ್ಟ ಅವರು ರಿತಿಕಾರ ಮೇಲೆ ಹಣ ಸುರಿಸುವಂತೆ ನೃತ್ಯ ಮಾಡಿದ್ದಾರೆ.


ಟೀಂ ಇಂಡಿಯಾದಲ್ಲಿ ಶುರುವಾಗಲಿದೆ ಈ ಮಾರಕ ಆಟಗಾರನ ಅಬ್ಬರ: ಮೊದಲ ಪಂದ್ಯದಲ್ಲಿ ಗೆಲುವು ಖಚಿತ!


ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯವಿಂದು ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿದೆ. ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಹಾರ್ದಿಕ್ ಪಾಂಡ್ಯ ನಾಯಕತ್ವ ವಹಿಸಿಕೊಂಡಿದ್ದಾರೆ. ಉಳಿದ 2 ಏಕದಿನ ಪಂದ್ಯಗಳಿಗೆ ರೋಹಿತ್ ಶರ್ಮಾ ತಂಡಕ್ಕೆ ವಾಪಸ್ ಆಗಲಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.