“ಇದು ನನಗೆ ಹೊಸದೇನೂ ಅಲ್ಲ...” ಮುಂಬೈ ನಾಯಕತ್ವ ಕಳೆದುಕೊಂಡ ಬಗ್ಗೆ ಮೊದಲ ಬಾರಿ ನೋವು ವ್ಯಕ್ತಪಡಿಸಿದ ರೋಹಿತ್ ಶರ್ಮಾ
T20 World cup 2024: ಐಪಿಎಲ್’ನಲ್ಲಿ ಐದು ಬಾರಿ ಮುಂಬೈ ಇಂಡಿಯನ್ಸ್‌ಗೆ ಪ್ರಶಸ್ತಿ ತಂದುಕೊಟ್ಟಿರುವ ರೋಹಿತ್ ಶರ್ಮಾ ಈ ಋತುವಿನಲ್ಲಿ ತಂಡವನ್ನು ಮುನ್ನಡೆಸುತ್ತಿಲ್ಲ. ಇವರಿಂದ ನಾಯಕತ್ವವನ್ನು ಕಿತ್ತು ಹಾರ್ದಿಕ್ ಪಾಂಡ್ಯಗೆ ಹಸ್ತಾಂತರಿಸಲಾಯಿತು.
T20 World cup 2024: T20 ವಿಶ್ವಕಪ್’ಗೆ ಭಾರತ ತಂಡವನ್ನು ಘೋಷಿಸಿದ 2 ದಿನಗಳ ನಂತರ, ನಾಯಕ ರೋಹಿತ್ ಶರ್ಮಾ ಮತ್ತು ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಪತ್ರಿಕಾಗೋಷ್ಠಿಯಲ್ಲಿ ನಡೆಸಿದ್ದಾರೆ. ಅಂದಹಾಗೆ ಈ ಸಂದರ್ಭದಲ್ಲಿ ರೋಹಿತ್ ಮತ್ತು ಅಗರ್ಕರ್ ತಂಡದ ಸಂಯೋಜನೆಯ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಇದನ್ನೂ ಓದಿ: ಸುನಿಲ್ ಗವಾಸ್ಕರ್ ಸಹೋದರಿಯನ್ನೇ ಪಟಾಯಿಸಿ ಮದುವೆಯಾದ ಭಾರತದ ಶ್ರೇಷ್ಠ ಬಲಗೈ ಬ್ಯಾಟರ್ ಇವರೇ! ಈತ ಕನ್ನಡಿಗನೂ ಹೌದು…
ಇನ್ನು ರಿಂಕು ಸಿಂಗ್ ಮತ್ತು ಕೆಎಲ್ ರಾಹುಲ್ ಅವರಂತಹ ಆಟಗಾರರನ್ನು 15 ಸದಸ್ಯರ ತಂಡದಲ್ಲಿ ಏಕೆ ಸೇರಿಸಲಾಗಿಲ್ಲ ಎಂಬುದರ ಬಗ್ಗೆಯೂ ಮಾಹಿತಿ ನೀಡಿದರು. ಇದಾದ ಬಳಿಕ ಐಪಿಎಲ್’ನಲ್ಲಿ ನಾಯಕತ್ವವನ್ನು ಕಸಿದುಕೊಂಡ ಬಗ್ಗೆ ರೋಹಿತ್ ಮೊದಲ ಬಾರಿಗೆ ಮಾತನಾಡಿದ್ದಾರೆ
ಐಪಿಎಲ್’ನಲ್ಲಿ ಐದು ಬಾರಿ ಮುಂಬೈ ಇಂಡಿಯನ್ಸ್‌ಗೆ ಪ್ರಶಸ್ತಿ ತಂದುಕೊಟ್ಟಿರುವ ರೋಹಿತ್ ಶರ್ಮಾ ಈ ಋತುವಿನಲ್ಲಿ ತಂಡವನ್ನು ಮುನ್ನಡೆಸುತ್ತಿಲ್ಲ. ಇವರಿಂದ ನಾಯಕತ್ವವನ್ನು ಕಿತ್ತು ಹಾರ್ದಿಕ್ ಪಾಂಡ್ಯಗೆ ಹಸ್ತಾಂತರಿಸಲಾಯಿತು. ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ರೋಹಿತ್ ಅವರನ್ನು ಪ್ರಶ್ನಿಸಿದಾಗ, “ಇದು ನನಗೆ ಹೊಸದೇನಲ್ಲ. ಈ ಹಿಂದೆಯೂ ಹಲವು ನಾಯಕರ ಅಡಿಯಲ್ಲಿ ಆಡಿದ್ದೇನೆ” ಎಂದು ಹಿಟ್‌ಮ್ಯಾನ್ ಹೇಳಿದ್ದಾರೆ.
‘‘ಇದು ಜೀವನದ ಭಾಗ. ಎಲ್ಲವೂ ನಿಮ್ಮ ಪ್ರಕಾರ ನಡೆಯುವುದಿಲ್ಲ. ಇದು ನನಗೆ ಅದ್ಭುತ ಅನುಭವ. ನನ್ನ ವೃತ್ತಿ ಜೀವನದಲ್ಲಿ ಹಲವು ಆಟಗಾರರ ನಾಯಕತ್ವದಲ್ಲಿ ಆಡಿದ್ದೇನೆ. ಇದೇನೂ ಹೊಸದಲ್ಲ. ಆಟಗಾರನಾಗಿ ನೀವು ನಿಮ್ಮ ತಂಡಕ್ಕಾಗಿ ಆಡಬೇಕು. ಕಳೆದ ಒಂದು ತಿಂಗಳಲ್ಲಿ ನಾನು ಅದೇ ರೀತಿ ಮಾಡಲು ಪ್ರಯತ್ನಿಸಿದೆ” ಎಂದರು.
ಇದನ್ನೂ ಓದಿ: ಹಾಲಿನಲ್ಲಿ ಈ ಪುಡಿ ಬೆರೆಸಿ ಕುಡಿಯಿರಿ: ದೇಹಕ್ಕೆ ಸಿಗುತ್ತೆ ಈ 6 ಪ್ರಯೋಜನಗಳು
ನಾಯಕತ್ವದ ಬಗ್ಗೆ ಅಜಿತ್ ಅಗರ್ಕರ್‌ಗೆ ಪ್ರಶ್ನೆ ಕೇಳಿದಾಗ, ರೋಹಿತ್ ನಮ್ಮ ಅತ್ಯುತ್ತಮ ನಾಯಕ. ಏಕದಿನ ವಿಶ್ವಕಪ್‌ನಲ್ಲಿ ಅವರು ಅದ್ಭುತ ಪ್ರದರ್ಶನ ನೀಡಿದ್ದಾರೆ. ಏಕದಿನ ವಿಶ್ವಕಪ್ ನಂತರ ಆರು ತಿಂಗಳ ಸಮಯ ಸಿಕ್ಕಿತು. ಈ ನಡುವೆ ಹಾರ್ದಿಕ್ ಕೆಲವು ಸರಣಿಗಳ ನಾಯಕತ್ವ ವಹಿಸಿರುವುದು ನನಗೆ ತಿಳಿದಿದೆ, ಆದರೆ ರೋಹಿತ್ ನಮ್ಮ ಅತ್ಯುತ್ತಮ ನಾಯಕ” ಎಂದಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.