ನವದೆಹಲಿ: ಐ‌ಪಿ‌ಎಲ್ ನಲ್ಲಿ ಆದ ಗಾಯದ ಹಿನ್ನಲೆಯಲ್ಲಿ ಆಸ್ಟ್ರೇಲಿಯಾದ ಪ್ರವಾಸಕ್ಕೆ ತಮ್ಮನ್ನು ಆಯ್ಕೆ ಮಾಡದಿರುವ ವಿಚಾರವಾಗಿ ರೋಹಿತ ಶರ್ಮಾ ಕೊನೆಗೂ ಬಾಯಿಬಿಟ್ಟಿದ್ದಾರೆ.


COMMERCIAL BREAK
SCROLL TO CONTINUE READING

ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ರೋಹಿತ್ ಶರ್ಮಾ 'ಪ್ರಾಮಾಣಿಕವಾಗಿ ಹೇಳಬೇಕೆಂದರೆ ಏನೂ ನಡೆಯುತ್ತಿದೆ ಎಂದು ನನಗೆ ತಿಳಿದಿರಲಿಲ್ಲ. ನಾನು ನಿರಂತರವಾಗಿ ಬಿಸಿಸಿಐ ಮತ್ತು ಮುಂಬೈ ಇಂಡಿಯನ್ಸ್ ಜೊತೆ ಸಂವಹನ ನಡೆಸುತ್ತಿದ್ದೇ" ಎಂದು ರೋಹಿತ್ ಹೇಳಿದ್ದಾರೆ.ರೋಹಿತ್ ಪ್ರಸ್ತುತ ಆಸ್ಟ್ರೇಲಿಯಾಕ್ಕೆ ತೆರಳುವ ಮೊದಲು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್‌ಸಿಎ) ಶಕ್ತಿ ಮತ್ತು ಕಂಡೀಷನಿಂಗ್ ಕೆಲಸವನ್ನು ಮಾಡುತ್ತಿದ್ದಾರೆ.


ಆಸ್ಟ್ರೇಲಿಯಾ ಪ್ರವಾಸ: ರೋಹಿತ್ ಶರ್ಮಾಗಿಲ್ಲ ಸ್ಥಾನ ! ಅಚ್ಚರಿ ವ್ಯಕ್ತಪಡಿಸಿದ ಅಭಿಮಾನಿಗಳು


'ನಾನು ಅವರಿಗೆ (ಮುಂಬೈ ಇಂಡಿಯನ್ಸ್) ಹೇಳಿದ್ದೇನೆಂದರೆ, ಈ ಕ್ಷೇತ್ರವು ಕಡಿಮೆ ಸ್ವರೂಪದ್ದಾಗಿರುವುದರಿಂದ ನಾನು ಅದನ್ನು ಎದುರಿಸಬಹುದು ಮತ್ತು ಪರಿಸ್ಥಿತಿಯನ್ನು ಸಾಕಷ್ಟು ಚೆನ್ನಾಗಿ ನಿರ್ವಹಿಸಲು ನನಗೆ ಸಾಧ್ಯವಾಗುತ್ತದೆ. ಒಮ್ಮೆ ನಾನು ನನ್ನ ಮನಸ್ಸನ್ನು ಸ್ಪಷ್ಟಪಡಿಸಿದ ನಂತರ, ನಾನು ಏನು ಮಾಡಬೇಕೆಂಬುದನ್ನು ಕೇಂದ್ರೀಕರಿಸುವುದಷ್ಟೇ ಕೆಲಸ ಎಂದು ಅವರು ಹೇಳಿದರು.


ಕ್ರಿಕೆಟರ್ ರೋಹಿತ್ ಶರ್ಮಾ ಸೇರಿ ಐವರು ಕ್ರೀಡಾಪಟುಗಳಿಗೆ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ


"ಮಂಡಿರಜ್ಜು ಸಂಪೂರ್ಣವಾಗಿ ಉತ್ತಮವಾಗಿದೆ.ಈಗ ದೀರ್ಘ ಸ್ವರೂಪದ ಕ್ರಿಕೆಟ್ ಆಡುವ ಸಂದರ್ಭದಲ್ಲಿ ಯಾವುದೇ ಗೊಂದಲಗಳು ಇರಬಾರದು ಎನ್ನುವ ಕಾರಣಕ್ಕಾಗಿ ನಾನು ಈಗ ಎನ್ಸಿಎನಲ್ಲಿ ಇದ್ದೇನೆ ಎಂದು ರೋಹಿತ್ ಶರ್ಮಾ ಹೇಳಿದರು.