Indian Cricket Team Border Gavaskar Trophy: ನ್ಯೂಜಿಲೆಂಡ್ ವಿರುದ್ಧದ 3 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಭಾರತ ಕ್ರಿಕೆಟ್ ತಂಡ 0-3 ಅಂತರದಿಂದ ಸೋತಿದೆ. ಬೆಂಗಳೂರು, ಪುಣೆ ಬಳಿಕ ಇದೀಗ ಮುಂಬೈನಲ್ಲೂ ತಂಡ ಕಳಪೆ ಸೋಲನ್ನು ಎದುರಿಸಬೇಕಾಯಿತು. ಇದೀಗ ಟೀಂ ಇಂಡಿಯಾ ನವೆಂಬರ್ 22 ರಿಂದ ಆಸ್ಟ್ರೇಲಿಯಾ ವಿರುದ್ಧ 5 ಟೆಸ್ಟ್ ಪಂದ್ಯಗಳ ಸರಣಿಯನ್ನು ಆಡಲಿದೆ. ಮೊದಲ ಪಂದ್ಯ ಪರ್ತ್‌ನಲ್ಲಿ ನಡೆಯಲಿದ್ದು, ಆ ಪಂದ್ಯಕ್ಕೆ 19 ದಿನಗಳ ಮೊದಲು ಭಾರತ ದೊಡ್ಡ ಹಿನ್ನಡೆ ಅನುಭವಿಸಿದೆ. ಅಷ್ಟೇ ಅಲ್ಲದೆ, ನಾಯಕ ರೋಹಿತ್ ಶರ್ಮಾ ಮೊದಲ ಟೆಸ್ಟ್‌ʼನಿಂದ ಹೊರಗುಳಿಯುವ ಸಾಧ್ಯತೆ ಇದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಎಷ್ಟೊಂದು ಮುದ್ದಾಗಿದ್ದಾಳೆ ದೀಪಿಕಾ ಪಡುಕೋಣೆ ಪುತ್ರಿ! ಕೊನೆಗೂ ಮಗಳ ಹೆಸರಿನ ಸಮೇತ ಫೋಟೋ ರಿವೀಲ್‌ ಮಾಡಿದ ದೀಪ್‌ವೀರ್‌!‌ ಪುಟಾಣಿ ‘ದೀಪ್ಸ್’ ಹೆಸರೇನು ಗೊತ್ತಾ?


ವೈಯಕ್ತಿಕ ಕಾರಣಗಳಿಂದಾಗಿ ರೋಹಿತ್ ಶರ್ಮಾ ಅವರು ಆಸ್ಟ್ರೇಲಿಯ ವಿರುದ್ಧ ಬಾರ್ಡರ್-ಗವಾಸ್ಕರ್ ಟ್ರೋಫಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಹೊರಗುಳಿಯುವ ಸಾಧ್ಯತೆ ಇದೆ.


ರೋಹಿತ್ ಶರ್ಮಾ ಆಸ್ಟ್ರೇಲಿಯಾದ ಮೊದಲ ಟೆಸ್ಟ್ ಪಂದ್ಯ ಮಿಸ್‌ ಮಾಡಿಕೊಳ್ಳುತ್ತೀರಾ ಎಂದು ಕೇಳಿದಾಗ, "ನಾನು ಹೋಗಬೇಕಿದೆ... ಆದರೆ ಅದರ ನನಗೆ ಖಚಿತವಿಲ್ಲ" ಎಂದು ಹೇಳಿದ್ದಾರೆ.


ರೋಹಿತ್ ಶರ್ಮಾ ತಂದೆಯಾಗಲಿದ್ದಾರೆ ಎಂದು ಜಿಯೋ ಸಿನಿಮಾದ ಮ್ಯಾಚ್ ನಿರೂಪಕ ಮತ್ತು ಭಾರತದ ಮಾಜಿ ಕ್ರಿಕೆಟಿಗ ಅಭಿನವ್ ಮುಕುಂದ್ ಹೇಳಿದ್ದಾರೆ. ಈ ಕಾರಣದಿಂದ ಅವರು ಮೊದಲ ಟೆಸ್ಟ್‌ನಲ್ಲಿ ಆಡುವುದು ಕಷ್ಟಕರ ಅನಿಸುತ್ತದೆ. ಇನ್ನು ಆರಂಭಿಕ ಆಟಗಾರ ಅಭಿಮನ್ಯು ಈಶ್ವರನ್ ಮೊದಲ ಟೆಸ್ಟ್‌ನಲ್ಲಿ ರೋಹಿತ್ ಶರ್ಮಾ ಬದಲಿಗೆ ಆಡಲಿದ್ದಾರೆ ಎಂದು ಹೇಳಲಾಗುತ್ತಿದೆ.


ಇನ್ನು ಕೀವೀಸ್‌ ವಿರುದ್ಧ ಸರಣಿ ಸೋಲಿನ ಬಗ್ಗೆ ಮಾತನಾಡಿದ ರೋಹಿತ್, "ನಾವು ಸಾಕಷ್ಟು ತಪ್ಪುಗಳನ್ನು ಮಾಡಿದ್ದೇವೆ. ನಾವು ಅದನ್ನು ಒಪ್ಪಿಕೊಳ್ಳಬೇಕು. ನಾವು ಮೊದಲ ಇನಿಂಗ್ಸ್‌ನಲ್ಲಿ (ಬೆಂಗಳೂರು ಮತ್ತು ಪುಣೆಯಲ್ಲಿ) ಸಾಕಷ್ಟು ರನ್ ಗಳಿಸಲಿಲ್ಲ. ನಾವು ಉತ್ತಮ ಪ್ರದರ್ಶನ ನೀಡಬೇಕಾಗಿತ್ತು" ಎಂದಿದ್ದಾರೆ.


ಇದನ್ನೂ ಓದಿ: ಭನ್ಯಾ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗು ನಂದೆ..!! ಕಿಚ್ಚನ ಬಳಿ ಒಪ್ಪಿಕೊಂಡ ತ್ರಿವಿಕ್ರಮ್! ಬಿಗ್‌ ಬಾಸ್‌ ಮನೆಯಲ್ಲಿ ಇಷ್ಟೆಲ್ಲಾ ನಡೀತಾ!?‌


ಪರ್ತ್ ನಂತರ ಎರಡನೇ ಟೆಸ್ಟ್ ಅಡಿಲೇಡ್ ಓವಲ್‌ನಲ್ಲಿ ಡಿಸೆಂಬರ್ 6 ರಿಂದ 10 ರವರೆಗೆ ನಡೆಯಲಿದೆ. ಈ ಪಂದ್ಯ ಹಗಲು-ರಾತ್ರಿ ನಡೆಯಲಿದೆ. ಪಿಂಕ್ ಚೆಂಡಿನೊಂದಿಗೆ ಟೆಸ್ಟ್ ಪಂದ್ಯಗಳನ್ನು ಆಡಲು ಭಾರತೀಯ ಆಟಗಾರರು ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಾರೆ. ಈ ಮೈದಾನದಲ್ಲಿ 2021 ರಲ್ಲಿ ನಡೆದ ಪಿಂಕ್ ಬಾಲ್ ಟೆಸ್ಟ್ ವೇಳೆ ಭಾರತ ತಂಡ 36 ರನ್‌ಗಳಿಗೆ ಆಲೌಟ್ ಆಗಿತ್ತು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ