Rohit Sharma: ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯ ರಾಂಚಿಯಲ್ಲಿ ನಡೆಯುತ್ತಿದೆ. ಈ ಪಂದ್ಯದ ಮೂರನೇ ದಿನ ಟೀಂ ಇಂಡಿಯಾ ಗೆಲುವಿಗೆ 192 ರನ್‌'ಗಳ ಗುರಿ ಪಡೆದಿದೆ. ಭಾರತ ಯಾವುದೇ ವಿಕೆಟ್ ನಷ್ಟವಿಲ್ಲದೆ 40 ರನ್ ಗಳಿಸಿದೆ. ಇದೇ ವೇಳೆ ನಾಯಕ ರೋಹಿತ್ ಶರ್ಮಾ ಹೆಸರಿನಲ್ಲಿ ದೊಡ್ಡ ಸಾಧನೆಯೊಂದು ದಾಖಲಾಗಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Jahnvi Kapoor: ಬಾಲಿವುಡ್ ಸುಂದರಿ ಜಾನ್ವಿ ಕಪೂರ್’ಗೆ RCBಯ ಆ ಇಬ್ಬರು ಆಟಗಾರರೇ ಫೇವರೇಟ್ ಕ್ರಿಕೆಟರ್ಸ್!


ರೋಹಿತ್ ಶರ್ಮಾ ಇಂದು ರಾಂಚಿಯಲ್ಲಿ 4000 ಟೆಸ್ಟ್ ರನ್ ಪೂರೈಸಿ, ಟೆಸ್ಟ್ ಕ್ರಿಕೆಟ್’ನಲ್ಲಿ ವಿಶೇಷ ದಾಖಲೆ ಬರೆದಿದ್ದಾರೆ. ನಾಯಕ ರೋಹಿತ್ ಶರ್ಮಾ ಅವರ ಅತ್ಯುತ್ತಮ ಪ್ರದರ್ಶನ ಭಾರತದ ಕೊನೆಯ ಇನ್ನಿಂಗ್ಸ್‌ನಲ್ಲಿ ಕಂಡುಬಂದಿದೆ. ಶರ್ಮಾ 27 ಎಸೆತಗಳಲ್ಲಿ 24 ರನ್ ಗಳಿಸಿ ಅಜೇಯರಾಗಿ ಉಳಿದ್ದು, ಮೂರನೇ ದಿನದಂತ್ಯಕ್ಕೆ ಭಾರತ 40/0 ತಲುಪಲು ನೆರವಾಗಿದ್ದಾರೆ. ಇದರೊಂದಿಗೆ ಭಾರತ ಪರ ಟೆಸ್ಟ್‌’ನಲ್ಲಿ ನಾಲ್ಕು ಸಾವಿರ ರನ್ ಪೂರೈಸಿದ 17ನೇ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ.


ಒಟ್ಟಿನಲ್ಲಿ ಟೆಸ್ಟ್ ಪಂದ್ಯದ ಮೂರನೇ ದಿನ ಭಾರತ ತಂಡದ ನಾಯಕನಿಗೆ ಶುಭ ದಿನವಾಗಿತ್ತು. ಧ್ರುವ್ ಜುರೆಲ್ ಅವರ 90 ರನ್‌’ಗಳ ಅದ್ಭುತ ಇನ್ನಿಂಗ್ಸ್‌ನ ನಂತರ ಭಾರತವು ಇಂಗ್ಲೆಂಡ್ ಅನ್ನು ಕೇವಲ 145 ರನ್‌’ಗಳಿಗೆ ಆಲೌಟ್ ಮಾಡಿತು. ರೋಹಿತ್ ಶರ್ಮಾ ಅವರು ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಅವರಿಗೆ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಹೊಸ ಚೆಂಡಿನೊಂದಿಗೆ ಆರಂಭ ನೀಡಿದರು. ಈ ಸಂದರ್ಭದಲ್ಲಿ, ಆಕಾಶ್ ದೀಪ್ ಮೊದಲ ದಿನದ ಬೆಳಗಿನ ಅವಧಿಯಲ್ಲಿ ಮೊದಲ ಇನ್ನಿಂಗ್ಸ್‌’ನ ಅದ್ಭುತ ಸ್ಪೆಲ್‌’ನಲ್ಲಿ ಮೂರು ವಿಕೆಟ್‌ಗಳನ್ನು ಪಡೆದರು.


ಇದನ್ನೂ ಓದಿ: Haris Rauf: PSLನಿಂದ ಫಾಸ್ಟ್‌ ಬೌಲರ್ ಹ್ಯಾರಿಸ್ ರೌಫ್ ಔಟ್‌!


ಅಶ್ವಿನ್ ಕೂಡ ಈ ಅವಧಿಯಲ್ಲಿ ಅಬ್ಬರಿಸಿ, ಮೊದಲ 20 ಓವರ್‌’ಗಳಲ್ಲಿ ಬೆನ್ ಡಕೆಟ್, ಒಲ್ಲಿ ಪೋಪ್ ಮತ್ತು ಜೋ ರೂಟ್ ಅವರನ್ನು ಔಟ್ ಮಾಡಿದರು. ಇದು ಅಂತಿಮವಾಗಿ ಇಂಗ್ಲೆಂಡ್‌’ನ ಬ್ಯಾಟಿಂಗ್ ಕುಸಿತಕ್ಕೆ ಕಾರಣವಾಯಿತು, ಕುಲದೀಪ್ ಯಾದವ್ ಕೂಡ ಇಂಗ್ಲೆಂಡ್‌’ನ ಉಳಿದ ಬ್ಯಾಟಿಂಗ್ ಕ್ರಮಾಂಕವನ್ನು ಕೆಡವಿದರು. ಮೂರನೇ ದಿನದಾಟದಲ್ಲಿ ಟೀಂ ಇಂಡಿಯಾ ಗೆಲುವಿನ ಹಾದಿಯಲ್ಲಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.