“ಟಿ20 ವಿಶ್ವಕಪ್’ನೊಂದಿಗೆ ನನ್ನ ಇಬ್ಬರು ಪುತ್ರರು...” ರೋಹಿತ್ ಶರ್ಮಾ ತಾಯಿಯ ಪೋಸ್ಟ್ ವೈರಲ್!
Rohit Sharma Mother Post: ಭಾರತ ಚಾಂಪಿಯನ್ ಆಗುತ್ತಿದ್ದಂತೇ ಟೀಂ ಇಂಡಿಯಾದ ಪ್ರತಿಯೊಬ್ಬ ಆಟಗಾರನಿಗೂ ಪ್ರಶಂಸೆ ಸುರಿಮಳೆ ಹರಿದುಬಂದಿದೆ. ಇವೆಲ್ಲದರ ಮಧ್ಯೆ ರೋಹಿತ್ ಶರ್ಮಾ ತಾಯಿ ಪೂರ್ಣಿಮಾ ಕೂಡ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ.
Rohit Sharma Mother Post: ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ತಂಡವು 2024ರ ಟಿ20 ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. 11 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ಭಾರತ ವಿಶ್ವ ಚಾಂಪಿಯನ್ ಆಗಿದ್ದು, ಅಂತಿಮ ಪಂದ್ಯದಲ್ಲಿ ಭಾರತ 7 ರನ್’ಗಳಿಂದ ದಕ್ಷಿಣ ಆಫ್ರಿಕಾವನ್ನು ಸೋಲಿಸಿತು.
ಇದನ್ನೂ ಓದಿ: ಸ್ಯಾಂಡಲ್ವುಡ್’ನಲ್ಲಿ 1 ಕೋಟಿ ಸಂಭಾವನೆ ಪಡೆದ ಮೊದಲ ನಟ ಯಾರು ಗೊತ್ತಾ? ಕಿಚ್ಚ, ದರ್ಶನ್, ಯಶ್.. ಇವರ್ಯಾರು ಅಲ್ಲ!
ಭಾರತ ಚಾಂಪಿಯನ್ ಆಗುತ್ತಿದ್ದಂತೇ ಟೀಂ ಇಂಡಿಯಾದ ಪ್ರತಿಯೊಬ್ಬ ಆಟಗಾರನಿಗೂ ಪ್ರಶಂಸೆ ಸುರಿಮಳೆ ಹರಿದುಬಂದಿದೆ. ಇವೆಲ್ಲದರ ಮಧ್ಯೆ ರೋಹಿತ್ ಶರ್ಮಾ ತಾಯಿ ಪೂರ್ಣಿಮಾ ಕೂಡ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ.
“ಭುಜದ ಮೇಲೆ ಮಗಳು, ಬೆನ್ನ ಹಿಂದೆ ದೇಶ, ಪಕ್ಕದಲ್ಲೇ ಸಹೋದರ” ಎಂದು ಬರೆದಿರುವ ಫೋಟೋವೊಂದನ್ನು ಪೂರ್ಣಿಮಾ ಶರ್ಮಾ ಹಂಚಿಕೊಂಡಿದ್ದಾರೆ. ಈ ಮೂಲಕ ಕೊಹ್ಲಿಯನ್ನೂ ಸಹ ತನ್ನ ಮಗನೆಂದೇ ಭಾವಿಸಿ ಪೂರ್ಣಿಮಾ ಪೋಸ್ಟ್ ಬರೆದುಕೊಂಡಿದ್ದಾರೆ.
ವಿಶ್ವಕಪ್ ಗೆದ್ದ ಟೀಂ ಇಂಡಿಯಾದ ಹಿಂದಿದೆ ಕನ್ನಡಿಗನ ಕೈಚಳಕ: ಕೊಹ್ಲಿ-ರೋಹಿತ್’ಗೆ ಬ್ಯಾಟಿಂಗ್ ಟ್ರಿಕ್ಸ್ ಹೇಳಿಕೊಟ್ಟಿದ್ದು ಇವರೇ!
2007 ರಲ್ಲಿ T20 ಅಂತರಾಷ್ಟ್ರೀಯ ಕ್ರಿಕೆಟ್’ಗೆ ಪಾದಾರ್ಪಣೆ ಮಾಡಿದ ರೋಹಿತ್, ಇಲ್ಲಿಯವರೆಗೆ ಪ್ರತಿ T20 ವಿಶ್ವಕಪ್’ನಲ್ಲಿ ಆಡಿದ ಏಕೈಕ ಭಾರತೀಯ ಕ್ರಿಕೆಟಿಗ ಎಂಬ ವಿಶಿಷ್ಟ ಹಿರಿಮೆಯನ್ನು ಹೊಂದಿದ್ದಾರೆ. ರೋಹಿತ್ 2024ರ ಟಿ 20 ವಿಶ್ವಕಪ್’ನ 8 ಪಂದ್ಯಗಳಲ್ಲಿ 257 ರನ್ ಗಳಿಸಿದ್ದು, ಇದು ಭಾರತೀಯ ಆಟಗಾರನ ಗರಿಷ್ಠ ದಾಖಲೆಯಾಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ