Rohit Sharma: ಸರ್ಫರಾಜ್-ಗಿಲ್ ಇವರ್ಯಾರೂ ಅಲ್ಲ.. ಈ ಇಬ್ಬರೂ ಆಟಗಾರರೇ ಟೀಂ ಇಂಡಿಯಾದ ಹೀರೋಗಳು ಎಂದ ರೋಹಿತ್ ಶರ್ಮಾ!
Rohit Sharma`s statement: ಭಾರತ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯ ಮೂರನೇ ಪಂದ್ಯವನ್ನು ಗೆದ್ದು ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದೆ. ರಾಜ್ಕೋಟ್ನಲ್ಲಿ ಇಂಗ್ಲೆಂಡ್ ವಿರುದ್ಧದ ಗೆಲುವಿನ ನಂತರ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ದೊಡ್ಡ ಹೇಳಿಕೆ ನೀಡಿದ್ದಾರೆ..
IND VS ENG: ರಾಜ್ ಕೋಟ್ ನಲ್ಲಿ ನಡೆದ ಐದು ಪಂದ್ಯಗಳ ಟೆಸ್ಟ್ ಸರಣಿಯ ಮೂರನೇ ಪಂದ್ಯದಲ್ಲಿ ಭಾರತ ತಂಡ ಇಂಗ್ಲೆಂಡ್ ತಂಡವನ್ನು 434 ರನ್ ಗಳಿಂದ ಸೋಲಿಸಿ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದೆ. ಇದು ಭಾರತದ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ರನ್‌ಗಳ ದೃಷ್ಟಿಯಿಂದ ಅತಿ ದೊಡ್ಡ ಗೆಲುವಾಗಿದೆ. ಟೀಂ ಇಂಡಿಯಾ ಇಂಗ್ಲೆಂಡ್‌ಗೆ 557 ರನ್‌ಗಳ ಗೆಲುವಿನ ಗುರಿ ನೀಡಿತ್ತು, ಇದಕ್ಕೆ ಉತ್ತರವಾಗಿ ಇಂಗ್ಲೆಂಡ್ 39.4 ಓವರ್‌ಗಳಲ್ಲಿ 122 ರನ್‌ಗಳಿಗೆ ಆಲೌಟ್ ಆಗಿತ್ತು. ಭಾರತದ ಪರ ರವೀಂದ್ರ ಜಡೇಜಾ 5 ವಿಕೆಟ್, ಕುಲದೀಪ್ ಯಾದವ್ 2 ವಿಕೆಟ್, ರವಿಚಂದ್ರನ್ ಅಶ್ವಿನ್ ಮತ್ತು ಜಸ್ಪ್ರೀತ್ ಬುಮ್ರಾ ತಲಾ 1 ವಿಕೆಟ್ ಪಡೆದರು.
ಭಾರತ ಮೊದಲ ಇನಿಂಗ್ಸ್‌ನಲ್ಲಿ 445 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಇಂಗ್ಲೆಂಡ್ ಆಕ್ರಮಣಕಾರಿ ಬ್ಯಾಟಿಂಗ್ ನಡೆಸಿತು. ಎರಡನೇ ದಿನದಾಟದ ಅಂತ್ಯಕ್ಕೆ ಬೇಸ್ ಬಾಲ್ ತಂತ್ರಗಾರಿಕೆಯಿಂದ ಭಾರತದ ಬೌಲರ್ ಗಳು ಇಂಗ್ಲೆಂಡ್ ತಂಡಕ್ಕೆ ಬೆವರಿಳಿಸಿದರು.. ಆದರೆ ಮೂರನೇ ದಿನದಲ್ಲಿ ಟೀಂ ಇಂಡಿಯಾ ಭರ್ಜರಿ ಕಮ್ ಬ್ಯಾಕ್ ಮಾಡಿ ಇಡೀ ಇಂಗ್ಲೆಂಡ್ ತಂಡವನ್ನು 319 ರನ್ ಗಳಿಗೆ ಪೆವಿಲಿಯನ್ ಗೆ ಕಳುಹಿಸಿ 126 ರನ್ ಗಳ ಮುನ್ನಡೆ ಸಾಧಿಸಿತು. ಅಲ್ಲದೆ, ಎರಡನೇ ಇನ್ನಿಂಗ್ಸ್‌ನಲ್ಲಿ ಆರಂಭಿಕ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್ ಅಜೇಯ 214* ರನ್ ಗಳಿಸಿದರು. ಇದರಿಂದಾಗಿ ಟೀಂ ಇಂಡಿಯಾ ದೊಡ್ಡ ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾಗಿದೆ. ನಾಲ್ಕನೇ ದಿನದಂತ್ಯಕ್ಕೆ 4 ವಿಕೆಟ್‌ಗೆ 430 ರನ್ ಗಳಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿ ಗೆಲುವಿಗೆ 556 ರನ್ ಗಳ ಗುರಿ ನೀಡಿದ್ದರು, ಆದರೆ ಇಡೀ ಇಂಗ್ಲೆಂಡ್ ತಂಡ ಕೇವಲ 122 ರನ್ ಗಳಿಗೆ ಪೆವಿಲಿಯನ್ ಗೆ ಮರಳಿತು. ಭಾರತ ಐತಿಹಾಸಿಕ ಜಯ ದಾಖಲಿಸಿತು. ಇದಾದ ನಂತರ ನಾಯಕ ರೋಹಿತ್ ಶರ್ಮಾ ದೊಡ್ಡ ಹೇಳಿಕೆ ನೀಡಿ ಈ ಗೆಲುವನ್ನು ಎತ್ತಿ ತೋರಿಸಿದ್ದಾರೆ.
ಇದನ್ನೂ ಓದಿ-ಮದ್ಯ ಸೇವಿಸಿ ಮಹಿಳಾ ಕ್ರಿಕೆಟಿಗರೊಂದಿಗೆ ಅನುಚಿತವಾಗಿ ವರ್ತಿಸಿದ ಕೋಚ್..!
ಇಂಗ್ಲೆಂಡ್ ವಿರುದ್ಧದ ಗೆಲುವಿನ ನಂತರ ರೋಹಿತ್ ಶರ್ಮಾ ದೊಡ್ಡ ಹೇಳಿಕೆ ನೀಡಿದ್ದಾರೆ:
“ಇಂಗ್ಲೆಂಡ್ ತಂಡ ಎರಡನೇ ದಿನ ಆಕ್ರಮಣಕಾರಿಯಾಗಿ ಆಡುವ ಮೂಲಕ ಒತ್ತಡವನ್ನು ಹೇರಿದರು.. ಆದರೆ ನಾನು ಬೌಲರ್‌ಗಳಿಗೆ ಅದನ್ನು ಸುಲಭವಾಗಿ ತೆಗೆದುಕೊಳ್ಳುವಂತೆ ಸಲಹೆ ನೀಡಿದ್ದೇ... ಇದಾದ ಮೂರನೆ ದಿನಕ್ಕೆ ಮರಳಿ ಬಂದಿದ್ದು ನಮಗೆ ಖುಷಿ ತಂದಿದೆ. ಐದನೇ ಕ್ರಮಾಂಕದಲ್ಲಿ ರವೀಂದ್ರ ಜಡೇಜಾ ಅವರನ್ನು ಬ್ಯಾಟಿಂಗ್‌ಗೆ ಕಳುಹಿಸುವ ಉದ್ದೇಶವೂ ಇತ್ತು. ಏಕೆಂದರೆ ಅವರಿಗೆ ಉತ್ತಮ ಅನುಭವವಿದೆ. ಇನ್ನೂ ಸರ್ಫರಾಜ್ ಖಾನ್ ಕೂಡ ಉತ್ತಮ ಇನಿಂಗ್ಸ್ ಆಡಿದರು..
"ಟಾಸ್ ಗೆಲ್ಲುವುದು ನಿಜವಾಗಿಯೂ ಮುಖ್ಯವಾಗಿದೆ.. ಆದರೆ ಪಂದ್ಯದಲ್ಲಿ ತಿರುಗೇಟು ನೀಡುವಲ್ಲಿ ಬೌಲರ್‌ಗಳ ಪಾತ್ರ ದೊಡ್ಡದು. ಇದನ್ನು ಮರೆಯಲು ಆಗುವುದಿಲ್ಲ. ನಮ್ಮ ಅನುಭವಿ ಬೌಲರ್ ಮಧ್ಯದಲ್ಲಿ ಇರಲಿಲ್ಲ, ಆದ್ದರಿಂದ ಜಡೇಜಾ ಉತ್ತಮವಾಗಿ ಬೌಲಿಂಗ್ ಮಾಡಿದರು. ಬ್ಯಾಟ್‌ನಲ್ಲೂ ಅತ್ಯುತ್ತಮ ಪ್ರದರ್ಶನ ನೀಡಿದರು. ಯಶಸ್ವಿ ಜೈಸ್ವಾಲ್ ಸಹ ದೊಡ್ಡ ಆಟಗಾರ. ಅವರ ಬಗ್ಗೆ ಹೆಚ್ಚು ಹೇಳುವ ಅಗತ್ಯವಿಲ್ಲ. ನಾವು ಹೀಗೆ ಉತ್ತಮ ಪ್ರದರ್ಶನವನ್ನು ಮುಂದುವರಿಸಬೇಕು” ಎಂದು ಹೇಳಿದ್ದಾರೆ..
ಇದನ್ನೂ ಓದಿ-7 ಪಂದ್ಯ, 7 ಶತಕ… ಕೇನ್ ವಿಲಿಯಮ್ಸನ್ ಆಟಕ್ಕೆ 92 ವರ್ಷಗಳ ಬಳಿಕ ಇತಿಹಾಸವೇ ಸೃಷ್ಟಿ, ದಾಖಲೆಗಳೆಲ್ಲಾ ಉಡೀಸ್
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ