Rohit Sharma: ಎಂಟು T20 ವಿಶ್ವಕಪ್ ನಲ್ಲಿ ಆಡಿದ ಟೀಂ ಇಂಡಿಯಾದ ಮೊದಲ ಸ್ಟಾರ್ ಆಟಗಾರ ಈತ!
ದಕ್ಷಿಣ ಆಫ್ರಿಕಾ ವಿರುದ್ಧದ ಭಾರತದ ಮುಂದಿನ ಪಂದ್ಯದಲ್ಲಿ ರೋಹಿತ್ ತಮ್ಮ ಚೊಚ್ಚಲ ಅರ್ಧಶತಕವನ್ನು ಬಾರಿಸಿದರು ಮತ್ತು ತಂಡವು ಸೆಮಿಫೈನಲ್‌ಗೆ ಅರ್ಹತೆ ಗಳಿಸಲು ಸಹಾಯ ಮಾಡಿದರು. ಆಗಿನ 20 ವರ್ಷದ ಆಟಗಾರ ಆ ವರ್ಷ ಪಾಕಿಸ್ತಾನದ ವಿರುದ್ಧ ಭಾರತದ ವಿಜಯದ ಫೈನಲ್‌ನಲ್ಲಿ 16 ಎಸೆತಗಳಲ್ಲಿ 30 ರನ್‌ಗಳ ಅಜೇಯ ಪಾತ್ರವನ್ನು ವಹಿಸಿದ್ದರು.
ಇಂದು ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಪಂದ್ಯ ನಡೆಯುತ್ತಿದೆ. ಈ ಸೂಪರ್ 12 ಪಂದ್ಯಕ್ಕೆ ಭಾರತದ ಮುಂದಾಳತ್ವವನ್ನು ರೋಹಿತ್ ಶರ್ಮಾ ನಿರ್ವಹಿಸುತ್ತಿದ್ದಾರೆ. ಇನ್ನು ಇದರ ಜೊತೆಗೆ ಎಂಟು ಐಸಿಸಿ ಪುರುಷರ ಟಿ 20 ವಿಶ್ವಕಪ್‌ಗಳಲ್ಲಿ ಕಾಣಿಸಿಕೊಂಡ ಮೊದಲ ಆಟಗಾರನಾಗಿದ್ದಾರೆ.
ಮೊದಲ ಬಾರಿಗೆ ವಿಶ್ವಕಪ್‌ನಲ್ಲಿ ಭಾರತವನ್ನು ಮುನ್ನಡೆಸುತ್ತಿರುವ ರೋಹಿತ್, ಟಿ20 ವಿಶ್ವಕಪ್‌ನಲ್ಲಿ ತಮ್ಮ 34 ನೇ ಪಂದ್ಯವನ್ನು ಆಡಲಿದ್ದಾರೆ. ರೋಹಿತ್ ಸೆಪ್ಟೆಂಬರ್ 19, 2007 ರಂದು ಮೊದಲ ಆವೃತ್ತಿಯಲ್ಲಿ ಇಂಗ್ಲೆಂಡ್ ವಿರುದ್ಧ T20I ಪಾದಾರ್ಪಣೆ ಮಾಡಿದರು. ಅವರು ಆಟದಲ್ಲಿ ಬ್ಯಾಟಿಂಗ್ ಅಥವಾ ಬೌಲಿಂಗ್ ಮಾಡಲಿಲ್ಲ.
ದಕ್ಷಿಣ ಆಫ್ರಿಕಾ ವಿರುದ್ಧದ ಭಾರತದ ಮುಂದಿನ ಪಂದ್ಯದಲ್ಲಿ ರೋಹಿತ್ ತಮ್ಮ ಚೊಚ್ಚಲ ಅರ್ಧಶತಕವನ್ನು ಬಾರಿಸಿದರು ಮತ್ತು ತಂಡವು ಸೆಮಿಫೈನಲ್‌ಗೆ ಅರ್ಹತೆ ಗಳಿಸಲು ಸಹಾಯ ಮಾಡಿದರು. ಆಗಿನ 20 ವರ್ಷದ ಆಟಗಾರ ಆ ವರ್ಷ ಪಾಕಿಸ್ತಾನದ ವಿರುದ್ಧ ಭಾರತದ ವಿಜಯದ ಫೈನಲ್‌ನಲ್ಲಿ 16 ಎಸೆತಗಳಲ್ಲಿ 30 ರನ್‌ಗಳ ಅಜೇಯ ಪಾತ್ರವನ್ನು ವಹಿಸಿದ್ದರು.
ರೋಹಿತ್ ಟೂರ್ನಿಯಲ್ಲಿ 38.50 ಸರಾಸರಿಯಲ್ಲಿ 847 ರನ್ ಗಳಿಸಿದ್ದಾರೆ. ಅವರ ಅತ್ಯಧಿಕ ಸ್ಕೋರ್ 46 ಎಸೆತಗಳಲ್ಲಿ 79* ರನ್. ಇದನ್ನು 2010 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಬಾರಿಸಿದ್ದರು. ಇನ್ನು ರೋಹಿತ್ 31 ಸಿಕ್ಸರ್‌ಗಳೊಂದಿಗೆ ಭಾರತದ ಎರಡನೇ ಅತೀ ಹೆಚ್ಚು ಸಿಕ್ಸ್ರ್ ಗಳನ್ನು ಬಾರಿಸಿದ ಆಟಗಾರನಾಗಿದ್ದರೆ. ಯುವರಾಜ್ ಸಿಂಗ್ ಅವರ 33 ಸಿಕ್ಸರ್ ಜೊತೆ ಮೊದಲ ಸ್ಥಾನದಲ್ಲಿದ್ದಾರೆ.
ಇದನ್ನೂ ಓದಿ: Virat Kohli Records: ಆಸ್ಟ್ರೇಲಿಯಾ ನೆಲದಲ್ಲಿ ಕೊಹ್ಲಿಯದ್ದೇ ಕಾರಿಬಾರು: ಈ ದಾಖಲೆ ಮುರಿಯಲು ಸಾಧ್ಯವೇ!
ಬಾಂಗ್ಲಾದೇಶದ ನಾಯಕ ಶಕೀಬ್ ಅಲ್ ಹಸನ್ ಅವರು ಸೋಮವಾರ ನೆದರ್ಲ್ಯಾಂಡ್ಸ್ ವಿರುದ್ಧ ಆಟವಾಡಿದ್ದು, ಎಂಟು ಆವೃತ್ತಿಗಳಲ್ಲಿ ಕಾಣಿಸಿಕೊಂಡ ಎರಡನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ