Rohit Sharma Sofia Hayat : ರೋಹಿತ್‌ ಶರ್ಮಾ 2015ರ ಡಿಸೆಂಬರ್ 13ರಂದು ರಿತಿಕಾ ಸಜ್ದೇಹ್ (Ritika Sajdeh) ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇವರದ್ದು ಪ್ರೇಮ ವಿವಾಹ. ಆದರೆ, ರಿತಿಕಾ ಅವರನ್ನು ಮದುವೆಯಾಗುವುದಕ್ಕೂ ಮುನ್ನ ರೋಹಿತ್‌ 2013ರಲ್ಲಿ ಬಾಲಿವುಡ್ ನಟಿ ಸೋಫಿಯಾ ಹಯಾತ್ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದರು.


COMMERCIAL BREAK
SCROLL TO CONTINUE READING

ಹೌದು.. ಇದು ನಿಜ, ರೋಹಿತ್‌ ಹಾಗು ಸೋಫಿಯಾ ಲವ್‌ ಸ್ಟೋರಿ ಜಗಜ್ಜಾಹೀರವಾಗಿತ್ತು. ಇಬ್ಬರ ಡೇಟಿಂಗ್ ಸುದ್ದಿಯ ನಡುವೆ ಸೋಫಿಯಾ ಮಾಡಿದ ಟ್ವೀಟ್ ಒಂದು ಅವರ ಅಭಿಮಾನಿಗಳು ಸೇರಿದಂತೆ ಕ್ರಿಕೆಟ್‌ ಜಗತ್ತನ್ನೇ ಬೆಚ್ಚಿ ಬೀಳಿಸಿತ್ತು. ಸೋಫಿಯಾ ಹಯಾತ್ (Sofia Hayat) ರೋಹಿತ್​ ಜೊತೆ ಡೇಟಿಂಗ್​ ನಡೆಸಿದ್ದರ ಕುರಿತು ಅಧಿಕೃತವಾಗಿ ಟ್ವಿಟರ್​​ನಲ್ಲಿ ಪೋಸ್ಟ್ ಮಾಡಿದ್ದರು. 


ಇದನ್ನೂ ಓದಿ: ವಿರಾಟ್‌ ಕೊಹ್ಲಿ, ಎಬಿಡಿ ಅಲ್ಲ, ಈ ಸ್ಟಾರ್‌ ಬ್ಯಾಟ್ಸ್‌ಮನ್‌ ಕಂಡ್ರೆ ಗೌತಮ್‌ ಗಂಭೀರ್‌ಗೆ ಭಯ..!


ವಿಚಿತ್ರ ಅಂದ್ರೆ ಇರುವರೆಗೂ ಸಹ ರೋಹಿತ್​ ಶರ್ಮಾ ಈ ಕುರಿತು ಎಲ್ಲಿಯೂ ಹೇಳಿಕೊಂಡಿಲ್ಲ. ಉತ್ತಮ ಸಂಬಂಧ ಹೊಂದಿದ್ದ ಜೋಡಿ ದಿಢೀರ್ ದೂರವಾಗಿತ್ತು, ಇಂದಿಗೂ ಈ ಜೋಡಿಯ ಬ್ರೇಕ್‌ ಅಪ್‌ಗೆ ಕಾರಣ ಗೊತ್ತಿಲ್ಲ. ಬ್ರೇಕಪ್​ ಅಪ್‌ ಬಗ್ಗೆ ಸೋಫಿಯಾ ಮಾಹಿತಿ ನೀಡಿದ್ದರು. 


ಅಷ್ಟೇ ಅಲ್ಲದೆ, ಸ್ಪಾಟ್‌ಬಾಯ್‌ಗೆ ನೀಡಿದ ಸಂದರ್ಶನವೊಂದರಲ್ಲಿ ಸೋಫಿಯಾ, ಲಂಡನ್‌ನ ಕ್ಲಬ್‌ ಇಬ್ಬರು ಫಸ್ಟ್‌ ಟೈಮ್‌ ಮೀಟ್‌ ಆಗಿದ್ದು, ಮೊದಲ ಭೇಟಿಯಲ್ಲೇ ರೋಹಿತ್ ತನ್ನನ್ನು ಚುಂಬಿಸಿದ್ದರು ಅಂತ ಹೇಳಿಕೊಂಡಿದ್ದರು. ʼʼನಮ್ಮ ಸ್ನೇಹಿತರೊಬ್ಬರು ರೋಹಿತ್‌ನನ್ನು ಪರಿಚಯ ಮಾಡಿಕೊಟ್ಟಿದ್ದರು. ನಾನು ಹೆಚ್ಚಾಗಿ ಕ್ರಿಕೆಟ್‌ ನೋಡದ ಕಾರಣ ರೋಹಿತ್ ಶರ್ಮಾ ಬಗ್ಗೆ ಹೆಚ್ಚಾಗಿ ನನಗೆ ತಿಳಿದಿರಲಿಲ್ಲ. ಆ ಬಳಿಕ ಇಬ್ಬರು ರಸ್ಪರ ಮಾತುಕತೆ ನಡೆಸಿದ್ದೆವು. ನಂತರ ನಾನು ಅವರು ಬೇರೆ ಸ್ಥಳಕ್ಕೆ ತೆರಳಿದೇವು ಆಗ ರೋಹಿತ್​ ನನ್ನನ್ನು ಚುಂಬಿಸಿದ್ದರುʼʼ ಅಂತ ಹಯಾತ್‌ ಹೇಳಿಕೊಂಡಿದ್ದಾರೆ.


ಇದನ್ನೂ ಓದಿ:"ಧೋನಿ ನನ್ನ ಪಾಲಿಗೆ ಚಿಕ್ಕಪ್ಪನಿದ್ದಂತೆ", ಹೀಗಂತ Anushka MSD ಕುರಿತು ಹೇಳಿದ್ಯಾಕೆ?


ಇಷ್ಟೇ ಅಲ್ಲ, 2014ರಲ್ಲಿ ರೋಹಿತ್ ಶರ್ಮಾ ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಶ್ರೀಲಂಕಾ ವಿರುದ್ಧ 264 ರನ್ ಬಾರಿಸಿದ್ದರು. ಈ ವೇಳೆ ಅವರ ಮೇಲೆ ಪ್ರೀತಿ ತೋರಿಸಲು ಹಯಾತ್ ತನ್ನ ಬೆತ್ತಲೆಯ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಈ ಪೋಸ್ಟ್‌ ಕ್ರಿಕೆಟ್‌ ವಲಯದಲ್ಲಿ ಸಂಚಲನ ಮೂಡಿಸಿತ್ತು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.