ಟೀಂ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸ..! ಡೇ/ನೈಟ್ ಟೆಸ್ಟ್ ಸರಣಿಗೆ ವೇಳಾಪಟ್ಟಿ ರಿಲೀಸ್
IND vs AUS: ಭಾರತ ತಂಡ ಶ್ರೀಲಂಕಾ ಪ್ರವಾಸವನ್ನು ಮುಗಸಿ ಸದ್ಯಕ್ಕೆ ವಿಶ್ರಾಂತಿ ಪಡೆಯುತ್ತಿದೆ. ಶ್ರೀಲಂಕಾ ವಿರುದ್ಧ ಯುವ ಆಟಗಾರರ ತಂಡ ಟಿ20 ಪಂದ್ಯವನ್ನು ಆಡಿ ಕ್ಲೀನ್ ಸ್ವೀಪ್ ಮಾಡುವ ಮೂಲಕ ಸರನಿಯನ್ನು ವಶಪಡಿಸಿಕೊಂಡಿತ್ತು, ಆದರೆ ಹಿಟಿಯ ಆಟಗಾರರೊಂದಿಗೆ ನಡೆದ ODI ಸರಣಿಯಲ್ಲಿ ಟೀಂ ಇಂಡಿಯಾ ಒಂದು ಪಂದ್ಯವನ್ನು ಗೆಲ್ಲದೆ ಮುಖಭಂಗ ಅನುಭವಿಸಿ ತವರಿಗೆ ವಾಪಸ್ ಆಗಿದೆ.
IND vs AUS: ಭಾರತ ತಂಡ ಶ್ರೀಲಂಕಾ ಪ್ರವಾಸವನ್ನು ಮುಗಸಿ ಸದ್ಯಕ್ಕೆ ವಿಶ್ರಾಂತಿ ಪಡೆಯುತ್ತಿದೆ. ಶ್ರೀಲಂಕಾ ವಿರುದ್ಧ ಯುವ ಆಟಗಾರರ ತಂಡ ಟಿ20 ಪಂದ್ಯವನ್ನು ಆಡಿ ಕ್ಲೀನ್ ಸ್ವೀಪ್ ಮಾಡುವ ಮೂಲಕ ಸರನಿಯನ್ನು ವಶಪಡಿಸಿಕೊಂಡಿತ್ತು, ಆದರೆ ಹಿಟಿಯ ಆಟಗಾರರೊಂದಿಗೆ ನಡೆದ ODI ಸರಣಿಯಲ್ಲಿ ಟೀಂ ಇಂಡಿಯಾ ಒಂದು ಪಂದ್ಯವನ್ನು ಗೆಲ್ಲದೆ ಮುಖಭಂಗ ಅನುಭವಿಸಿ ತವರಿಗೆ ವಾಪಸ್ ಆಗಿದೆ.
ಅದೇ ವೇಗದೊಂದಿಗೆ ರೋಹಿತ್ ಸೇನಾ ಈ ವರ್ಷದ ಕೊನೆಯಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ. ಗವಾಸ್ಕರ್ ಟ್ರೋಫಿಯ ಭಾಗವಾಗಿ ಟೀಂ ಈಮಡಿಯಾ ಐದು ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಇದರ ಅಧಿಕೃತ ವೇಳಾಪಟ್ಟಿಯನ್ನು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಖಚಿತಪಡಿಸಿದೆ. ಸರಣಿಯ ದಿನಾಂಕಗಳು, ಆರಂಭದ ಸಮಯಗಳು ಮತ್ತು ಸ್ಥಳಗಳನ್ನು ಅಂತಿಮಗೊಳಿಸಲಾಗಿದೆ.
ಇದನ್ನೂ ಓದಿ: ತಾಯಿ ಇಲ್ಲ..ತಂದೆ ಇಲ್ಲ..ಕುಸ್ತಿಯಲ್ಲಿ ಈತನಿಗೆ ಸರಿಸಾಟಿ ಇಲ್ಲ: ಅಮನ್ ಏಕ್ ನಿರಂಜನ್
ನವೆಂಬರ್ 22 ರಂದು ಮೊದಲ ಟೆಸ್ಟ್ ಪಂದ್ಯ ನಡೆಯಲಿದೆ. ಇದನ್ನು ಪರ್ತ್ನಲ್ಲಿ ಆಯೋಜಿಸಲಾಗಿದ್ದು, ಭಾರತೀಯ ಕಾಲಮಾನದ ಪ್ರಕಾರ ಪಂದ್ಯ ಮಧ್ಯಾಹ್ನ 2:20ಕ್ಕೆ ಆರಂಭವಾಗಲಿದೆ. ಎರಡನೇ ಟೆಸ್ಟ್ -ಡಿಸೆಂಬರ್ 6 ರಂದು ಅಡಿಲೇಡ್‌ನಲ್ಲಿ ನಡೆಯಲಿದ್ದು, ಮೂರನೇ ಪಂದ್ಯ 14 ರಂದು ಬ್ರಿಸ್ಬೇನ್ ಮತ್ತು 4 ನೇ ಪಂದ್ಯ - 26 ರಂದು ಮೆಲ್ಬೋರ್ನ್ ನಲ್ಲಿ ನಡೆಯಲಿದೆ. ಕೊನೆಯ ಟೆಸ್ಟ್ ಪಂದ್ಯ ಮುಂದಿನ ವರ್ಷ ಜನವರಿ 3 ರಂದು ನಡೆಯಲಿದ್ದು, ಸಿಡ್ನಿ ಇದಕ್ಕೆ ವೇದಿಕೆಯಾಗಿದೆ.
ಈ ಸರಣಿಯ ಭಾಗವಾಗಿ ಭಾರತ ತಂಡ ಆಸ್ಟ್ರೇಲಿಯದ ಪ್ರಧಾನ ಮಂತ್ರಿಗಳ ಇಲೆವೆನ್ ವಿರುದ್ಧ ಹಗಲು/ರಾತ್ರಿ ಅಭ್ಯಾಸ ಪಂದ್ಯವನ್ನು ಆಡಲಿದೆ. ಇದು ಪಿಂಕ್ ಬಾಲ್ ಪಂದ್ಯವಾಗಿದ್ದು, ಈ ಅಪರೂಪದ ಪಂದ್ಯಕ್ಕೆ ಕ್ಯಾನ್ ಬೆರ್ರಾ ಸ್ಟೇಡಿಯಂ ಆತಿಥ್ಯ ವಹಿಸಲಿದೆ. ಈ ಪಂದ್ಯಗಳು ಮೊದಲ ಎರಡು ಟೆಸ್ಟ್ ಪಂದ್ಯಗಳ ನಡುವಿನ ಅಂತರದಲ್ಲಿ ಅಂದರೆ ನವೆಂಬರ್ 30 ಮತ್ತು ಡಿಸೆಂಬರ್ 1 ರ ಅಂತರದಲ್ಲಿ ನಡೆಯಲಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ