Rohit sharma: ನವೆಂಬರ್ 19, 2023ರ ದಿನವನ್ನು ಭಾರತೀಯ ಕ್ರಿಕೆಟ್ ಅಭಿಮಾನಿಗಳು ಅಷ್ಟು ಸುಲಭವಾಗಿ ಮರೆಯಲು ಸಾಧ್ಯವಿಲ್ಲ. ಆ ದಿನದಂದು ಭಾರತ ತಂಡ ಆಸಿಸ್‌ ಎದುರು ಕದನಕ್ಕಿಳಿದಿತ್ತು, ಫೈನಲ್‌ನಲ್ಲಿ ಆಸಿಸ್‌ ವಿರುದ್ಧ ಸೋಲನುಭವಿಸಿತ್ತು. ಆ ಪಂದ್ಯದಲ್ಲಿ ರೋಹಿತ್ ಶರ್ಮಾ ಅಥವಾ ವಿರಾಟ್ ಕೊಹ್ಲಿ ಔಟಾಗದೇ ಇದ್ದಿದ್ದರೆ ಪರಿಸ್ಥಿತಿ ಬೇರೆಯಾಗುತ್ತಿತ್ತು ಎಂದು ಅಭಿಮಾನಿಗಳು ಭಾವಿಸಿದ್ದರು. ಅದು ಎಷ್ಟು ಸತ್ಯ ಎಂಬುದನ್ನು ಹಿಟ್‌ಮ್ಯಾನ್‌ ಇದೀಗ ಟಿ20 ವಿಶ್ವಕಪ್‌ 2024ರಲ್ಲಿ ಸಾಬೀತುಪಡಿಸಿದ್ದಾರೆ.


COMMERCIAL BREAK
SCROLL TO CONTINUE READING

ಸೋಮವಾರ ನಡೆದ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ ವಿಧ್ವಂಸಕ ದಾಖಲೆಯನ್ನು ಬರೆದಿದ್ದಾರೆ. ಆಸಿಸ್‌ ವಿರುದ್ದ ಸೇಡು ತೀರಿಸಿಕೊಳ್ಳಲು ಸಮಯಕಾಗಿ ಕಾದು ಕೂತಿದ್ದ ರೋಹಿತ್‌ ಸೋಮವಾರ, ಜೂನ್‌ 24ರಂದು ಆಸಿಸ್‌ ಬೌಲರ್‌ಗಳ ಬೆವರಿಳಿಸಿದರು. ಸೇಡನ್ನೊತ್ತು ಫೀಲ್ಡ್‌ಗೆ ಎಂಟ್ರಿ ಕೊಟ್ಟ ರೋಹಿತ್‌ ಆಸಿಸ್‌ ಬೌಲರ್‌ಗಳ ಬೌಲಿಂಗ್‌ಗೆ ತಮ್ಮ ಬ್ಯಾಟ್‌ ಬೀಸಲು ಶುರುಮಾಡಿದ್ದರು. ಬ್ಯಾಟಿಂಗ್‌ ಶುರುಮಾಡಿದ್ದೇ ತಡ. ಸಿಕ್ಸರ್‌ ಹಾಗೂ ಬೌಂಡರಿಗಳ ಸುರಿಮಳೆಯನ್ನು ಹರಿಸಿದ್ದಾರೆ ಹಿಟ್‌ಮ್ಯಾನ್‌. 


ಇದನ್ನೂ ಓದಿ: ರೋಹಿತ್ ಶರ್ಮಾ ಸಿಕ್ಸರ್ ಸುರಿಮಳೆ… ಹಿಟ್’ಮ್ಯಾನ್ ಬ್ಯಾಟಿಂಗ್ ಅಬ್ಬರಕ್ಕೆ ಸ್ಟೇಡಿಯಂ ದಾಟಿ ಹೊರಹೋದ ಬಾಲ್!



ಮೊದಲು ಬ್ಯಾಟಿಂಗ್ ಮಾಡಿದ ಭಾರತ ಐದು ವಿಕೆಟ್‌ಗೆ 205 ರನ್ ಗಳಿಸಿತು. ರೋಹಿತ್ ಶರ್ಮಾ 41 ಎಸೆತಗಳನ್ನಾಡಿ 7 ಬೌಂಡರಿ, 8 ಸಿಕ್ಸರ್‌ ಭಾರಿಸುವ ಮೂಲಕ 92 ರನ್‌ ಗಳಿಸಿ ಅಬ್ಬರಿಸಿದರು. ಸೂರ್ಯ ಕುಮಾರ್‌ ಯಾದವ್‌ 16 ಎಸೆತಗಳನ್ನಾಡಿ 3 ಬೌಂಡರಿ ಎರಡು ಸಿಕ್ಸರ್‌ ಸಿಡಿಸುವ ಮೂಲಕ 31 ರನ್‌ ಕಲೆಹಾಕಿದರು.


ಇನ್ನೂ, ಪಂದ್ಯದಲ್ಲಿ ಅಬ್ಬರಿಸಿದ ರೋಹಿತ್ ಶರ್ಮಾ ಪಂದ್ಯ ಶ್ರೇಷ್ಟ ಪ್ರಶಸ್ತಿ ಪಡೆದರು.  ಅದಷ್ಟೇ ಅಲ್ಲದೆ ಒಂದೇ ಪಂದ್ಯದಲ್ಲಿ ರೋಹಿತ್‌ ಮೂರು ದಾಖಲೆಗಳನ್ನು ಬರೆದಿದ್ದಾರೆ.


ಟಿ20 ವಿಶ್ವಕಪ್ ಇತಿಹಾಸದಲ್ಲಿ ಪಂದ್ಯ ಶ್ರೇಷ್ಟ ಪ್ರಶಸ್ತಿ ಪಡೆದ ಮೊದಲ ಭಾರತೀಯ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಟಿ20 ವಿಶ್ವಕಪ್‌ನಲ್ಲಿ ಇನ್ನಿಂಗ್ಸ್‌ನಲ್ಲಿ ರೋಹಿತ್ 8 ಸಿಕ್ಸರ್ ಬಾರಿಸುವ ಮೂಲಕ ಈ ಮುಂಚೆ ಅತಿ ಹೆಚ್ಚು ಸಿಕ್ಸರ್‌ಗಳನ್ನು ಸಿಡಿಸಿದ ಯುವರಾಜ್ ಸಿಂಗ್ ದಾಖಲೆಯನ್ನು ಹಿಟ್ ಮ್ಯಾನ್ ಮುರಿದರು. 


ಅಂತರಾಷ್ಟ್ರೀಯ ಟಿ20ಯಲ್ಲಿ 200 ಸಿಕ್ಸರ್‌ಗಳನ್ನು ಸಿಡಿಸಿದ ಏಕೈಕ ಆಟಗಾರನಾಗಿ ರೋಹಿತ್ ಇತಿಹಾಸ ನಿರ್ಮಿಸಿದ್ದಾರೆ. ಅಂತಾರಾಷ್ಟ್ರೀಯ ಟಿ20ಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ದಾಖಲೆಯನ್ನು ಕೂಡ ರೋಹಿತ್‌ ಬರೆದಿದ್ದಾರೆ. ರೋಹಿತ್ 4165 ರನ್ ಗಳಿಸಿದ್ದು, 4145 ರನ್‌ಗಳ ದಾಖಲೆಯನ್ನು ಮುರಿದಿದ್ದಾರೆ. ಈ ವಿಶ್ವಕಪ್‌ನಲ್ಲಿ ಅತಿವೇಗದ ಅರ್ಧಶತಕ  ಗಳಿಸಿದ ಆಟಗಾರ ಎನಿಸಿಕೊಂಡರು. ಪವರ್‌ಪ್ಲೇನಲ್ಲಿ 50 ರನ್ ಗಳಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.