Rohith Sharma Says Good Bye To MI: ಭಾರತೀಯ ಕ್ರಿಕೇಟಿಗ ರೋಹಿತ್‌ ಶರ್ಮಾ ಮುಂದಿನ ವರ್ಷ ಮುಂಬೈ ಇಂಡಿಯನ್ಸ್ ತಂಡಕ್ಕೆ ಗುಡ್‌ ಬೈ ಹೇಳಲಿದ್ದಾರಂತೆ.  ಐಪಿಎಲ್‌ ಲೀಗ್‌ ಮುಗಿಯುವ  ಮುಂಚೆಯೇ ರೋಹಿತ್ ಶರ್ಮಾನನ್ನು ನಾಯಕತ್ವದಿಂದ ಕೆಳಗಿಳಿಸಿ, ಪಾಂಡ್ಯರನ್ನು ನಾಯಕನ್ನನ್ನಾಗಿ ಮಾಡಿತು. ಐಪಿಎಲ್ 2024 ರಲ್ಲಿ ಹಾರ್ದಿಕ್‌ ಪಾಂಡ್ಯ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್‌ 14 ಪಂದ್ಯಗಳಲ್ಲಿ 4ರಲ್ಲಿ ಮಾತ್ರ ಗೆದ್ದಿತು.


COMMERCIAL BREAK
SCROLL TO CONTINUE READING

ಐಪಿಎಲ್ 2024ರ ಸೀಸನ್‌ನಲ್ಲಿ ಹಾರ್ದಿಕ್ ಪಾಂಡ್ಯ ವಿಶೇಷ ಏನನ್ನೂ ಮಾಡಲು ಸಾಧ್ಯವಾಗಲಿಲ್ಲ. ಆದರೆ ಮುಂಬೈ ಇಂಡಿಯನ್ಸ್ ಕಳಪೆ ಪ್ರದರ್ಶನದ ನಂತರ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ಅವರ ಬಗ್ಗೆ ಸಾಕಷ್ಟು ಊಹಾಪೋಹಗಳು ಹರಿದಾಡುತ್ತಿದೆ. ಆದರಿಂದ ರೋಹಿತ್ ಶರ್ಮಾ ಮುಂದಿನ ವರ್ಷ ಮುಂಬೈ ಇಂಡಿಯನ್ಸ್ ತಂಡವನ್ನು ತೊರೆಯಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇತ್ತೀಚೆಗೆ ಇದರ ಬಗ್ಗೆ ಸ್ವತಃ ಎಂಐ ಕೋಚ್ ಮಾರ್ಕ್ ಬೌಚರ್ ಹೇಳಿಕೆ ನೀಡಿದ್ದಾರೆ.


ಇದನ್ನೂ ಓದಿ: IPL 2024, CSK vs RCB: ಅಂಪೈರ್​​ಗಳ ಜೊತೆ ವಿರಾಟ್‌ ಕೊಹ್ಲಿ ವಾಗ್ವಾದ, ಕಾರಣವೇನು?


ಮಾರ್ಕ್ ಬೌಚರ್ ರೋಹಿತ್‌ ಶರ್ಮಾ ಬಗ್ಗೆ ಮಾತನಾಡುತ್ತಾ, "ನಿಜ ಹೇಳಬೇಕೆಂದರೆ, ಅದರ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಹಿಂದಿನ ರಾತ್ರಿ ನಾನು ಅವನೊಂದಿಗೆ ಈ ಬಗ್ಗೆ ಮಾತನಾಡಿದ್ದೆ. ರೋಹಿತ್ ಮುಂದಿನ ಯೋಜನೆ ಏನು ಎಂದು ನಾನು ಅವರನ್ನು ಕೇಳಿದೆ. ಅವರು ಟಿ 20 ವಿಶ್ವಕಪ್ ಎನ್ನುವುದು ನನ್ನ ಮುಂದಿನ ಗುರಿಯಾಗಿದೆ ಎಂದು ಹೇಳಿದರು. ನನ್ನ ಪ್ರಕಾರ, ರೋಹಿತ್ ತನ್ನ ಸ್ವಂತ ಇಚ್ಛೆ ಮೇಲೆ ಎಲ್ಲವೂ ನಿಂತಿದೆ." ಎಂದು ಹೇಳಿದ್ದಾರೆ. 


ಮುಂಬೈ ತಂಡ ಇದುವರೆಗೆ ಗೆದ್ದಿರುವ 5 ಪ್ರಶಸ್ತಿಗಳೂ ರೋಹಿತ್ ಶರ್ಮಾ ನಾಯಕತ್ವದಲ್ಲಿ ಬಂದಿವೆ. ಐಪಿಎಲ್‌ನಲ್ಲಿ 2013, 2015, 2017, 2019 ಮತ್ತು 2020 ರಲ್ಲಿ ರೋಹಿತ್‌ ಶರ್ಮಾ ನಾಯಕತ್ವದಲ್ಲಿ ತಂಡವನ್ನು ಐಪಿಎಲ್ ಚಾಂಪಿಯನ್ ಆಗಿ ಮಾಡಿದ್ದರು. ಪ್ರತಿ ಐಪಿಎಲ್ ತಂಡವು ರೋಹಿತ್ ಅವರನ್ನು ನಾಯಕನನ್ನಾಗಿ ಖರೀದಿಸಲು ಖಂಡಿತವಾಗಿಯೂ ಬಯಸುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.