ನವದೆಹಲಿ: ದಿನೇಶ್ ಕಾರ್ತಿಕ್ ಮತ್ತು ಶಹಬಾಜ್ ಅಹ್ಮದ್ ಅವರ ಭರ್ಜರಿ ಬ್ಯಾಟಿಂಗ್ ಪ್ರದರ್ಶನದ ನೆರವಿನಿಂದ ರಾಜಸ್ಥಾನ್ ರಾಯಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಭರ್ಜರಿ ಗೆಲುವು ಸಾಧಿಸಿತು. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಐಪಿಎಲ್ ಟೂರ್ನಿಯ 13ನೇ ಪಂದ್ಯದಲ್ಲಿ ಆರ್‌ಸಿಬಿ 4 ವಿಕೆಟ್ ಗಳಿಂದ ಜಯ ಸಾಧಿಸಿತು.


COMMERCIAL BREAK
SCROLL TO CONTINUE READING

ಟಾಸ್ ಗೆದ್ದ ಆರ್‌ಸಿಬಿ ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ರಾಜಸ್ಥಾನ್ ನಿಗದಿಗ 20 ಓವರ್‍ಗಳಲ್ಲಿ ಕೇವಲ 3 ವಿಕೆಟ್‍ಗಳನ್ನು ಕಳೆದುಕೊಂಡು 169 ರನ್‍ಗಳ ಸವಾಲಿನ ಮೊತ್ತವನ್ನು ಪೇರಿಸಿತು. 170 ರನ್‍ಗಳ ಗೆಲುವಿನ ಗುರಿ ಬೆನ್ನತ್ತಿದ ಆರ್‌ಸಿಬಿ ಟೂರ್ನಿಯಲ್ಲಿ 2ನೇ ಗೆಲುವು ಸಾಧಿಸಿ ಸಂಭ್ರಮಿಸಿತು.


ಇದನ್ನೂ ಓದಿ: ಸತತ 3 ಸೋಲಿನಿಂದ ಐಪಿಎಲ್ ನಲ್ಲಿ ಇತಿಹಾಸ ನಿರ್ಮಿಸಿದ CSK ತಂಡ!


ಜೋಸ್ ಬಟ್ಲರ್ ಅರ್ಧಶತಕ ವ್ಯರ್ಥ!


ಗೆಲುವಿನ ಉತ್ಸಾಹದಲ್ಲಿಯೇ ಕಣಕ್ಕಿಳಿದ ರಾಜಸ್ಥಾನ್ ಆರಂಭಿಕ ಆಘಾತ ಅನುಭವಿಸಿತು. ತಂಡದ ಮೊತ್ತ 6 ರನ್ ಆದಾಗ ಡೇವಿಡ್ ವಿಲ್ಲಿ ಬೌಲಿಂಗ್‍ನಲ್ಲಿ ಸ್ಫೋಟಕ ಬ್ಯಾಟ್ಸ್‍ಮನ್ ಯಶಸ್ವಿ ಜೈಸ್ವಾಲ್(4) ಔಟಾದರು. ಬಳಿಕ ಬಂದ ದೇವದತ್ತ ಪಡಿಕ್ಕಲ್ ಆರಂಭಿಕ ಜೋಸ್ ಬಟ್ಲರ್‌ ಜೊತೆಗೂಡಿ ಉತ್ತಮವಾಗಿ ಆಡಿದರು. ಈ ಜೋಡಿ 2ನೇ ವಿಕೆಟ್‍ಗೆ 70 ರನ್‍ಗಳ ಜೊತೆಯಾಟವಾಡಿತು. ಈ ವೇಳೆ ಹರ್ಷಲ್‌ ಪಟೇಲ್‌ ಬೌಲಿಂಗ್‌ನಲ್ಲಿ 37 ರನ್‌ ಗಳಿಸಿದ್ದ ಪಡಿಕ್ಕಲ್‌ ಔಟಾದರು. ಬಳಿಕ ಬಂದ ನಾಯಕ ಸಂಜು ಸ್ಯಾಮ್ಸನ್‌ (8) ಹೆಚ್ಚು ಹೊತ್ತು ನಿಲ್ಲಲಿಲ್ಲ.


ಸ್ಯಾಮ್ಸನ್‌ ವಿಕೆಟ್ ಬಳಿಕ ಬಂದ ಶಿಮ್ರಾನ್ ಹೆಟ್ಮೆಯರ್‌, ಬಟ್ಲರ್ ಜೊತೆಗೂಡಿ ಸ್ಫೋಟಕ ಆಟವಾಡಿದರು. ಈ ಜೋಡಿ ಮುರಿಯದ 4ನೇ ವಿಕೆಟ್‌ ಜೊತೆಯಾಟದಲ್ಲಿ 83 ರನ್ ಕಲೆಹಾಕಿ ತಂಡದ ಮೊತ್ತವನ್ನು 150ರ ಗಡಿ ದಾಟಿಸಿತು. ಬಟ್ಲರ್ 47 ಎಸೆಗಳಲ್ಲಿ 6 ಸಿಕ್ಸರ್ ಇದ್ದ 70 ರನ್ ಚಚ್ಚಿದರೆ, ಹೆಟ್ಮೆಯರ್ 31 ಎಸೆಗಳಲ್ಲಿ 4 ಬೌಂಡರಿ ಮತ್ತು 2 ಸಿಕ್ಸರ್ ಇದ್ದ 42 ರನ್ ಗಳಿಸಿದರು. ಆರ್ ಸಿಬಿ ಪರ ಹರ್ಷಲ್‌ ಪಟೇಲ್, ವನಿಂದು ಹಸರಂಗ ಮತ್ತು ಡೇವಿಡ್ ವಿಲ್ಲಿ ತಲಾ ಒಂದೊಂದು ವಿಕೆಟ್‌ ಪಡೆದರು.


ಇದನ್ನೂ ಓದಿ: IPL 2022: ಸಿಎಸ್‌ಕೆ ತಂಡದ ನಿರಂತರ ಸೋಲಿಗೆ 3 ದೊಡ್ಡ ಕಾರಣಗಳು


ಡಿಕೆ & ಶಹಬಾಜ್ ಸ್ಫೋಟಕ ಬ್ಯಾಟಿಂಗ್!


170 ರನ್ ಗಳ ಗೆಲುವಿನ ಗುರಿ ಬೆನ್ನಟ್ಟಿದ ಆರ್ ಸಿಬಿ ಪರ ನಾಯಕ ಫಾಫ್ ಡು ಪ್ಲೆಸಿಸ್(29), ಅಂಜು ರಾವತ್(26) ಮೊದಲ ವಿಕೆಟ್‍ಗೆ 55 ರನ್‍ಗಳ ಜೊತೆಯಾಟವಾಡಿದರು. ಬಳಿಕ ಬಂದ ಕೊಹ್ಲಿ(5), ಡೇವಿಡ್ ವಿಲ್ಲಿ(0) ಮತ್ತು ಶೆರ್ಫೇನ್ ರುದರ್ಫೋರ್ಡ್(5) ಬಹುಬೇಗನೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು. ದಿನೇಶ್ ಕಾರ್ತಿಕ್ ಮತ್ತು ಶಹಬಾಜ್ ಅಹ್ಮದ್ ಸೇರಿ ರಾಜಸ್ಥಾನ್ ಬೌಲರ್‍ಗಳ ಬೆವರಿಳಿಸಿದರು.


ಶಹಬಾಜ್ 26 ಎಸೆತಗಳಲ್ಲಿ 4 ಬೌಂಡರಿ ಮತ್ತು 3 ಸಿಕ್ಸರ್ ಇದ್ದ 44 ರನ್ ಗಳಿಸಿ ತಂಡದ ಗೆಲುವಿಗೆ ಅಮೂಲ್ಯ ಕಾಣಿಕೆ ನೀಡಿದರು. ದಿನೇಶ್ ಕಾರ್ತಿಕ್ 23 ಎಸೆಗಳಲ್ಲಿ 7 ಬೌಂಡರಿ ಹಾಗೂ 1 ಸಿಕ್ಸರ್ ಇದ್ದ 44 ರನ್ ಗಳಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು. ಕೊನೆಯಲ್ಲಿ ಬಂದ ಹರ್ಷಲ್ ಪಟೇಲ್(ಅಜೇಯ 9) ರನ್ ಗಳಿಸಿದರು. ರಾಜಸ್ಥಾನ್ ಪರ ಬೌಲಿಂಗ್ ನಲ್ಲಿ ಟ್ರೆಂಟ್ ಬೌಲ್ಟ್ ಮತ್ತು ಯಜುವೇಂದ್ರ ಚಹಾಲ್ ತಲಾ 2 ವಿಕೆಟ್ ಪಡೆದರೆ, ನವದೀಪ್ ಸೈನಿ 1 ವಿಕೆಟ್ ಕಬಳಿಸಿದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.