ಸ್ವಿಟ್ಜರ್ಲ್ಯಾಂಡ್:ಮಹತ್ವದ ಬೆಳವಣಿಗೆಯೊಂದರಲ್ಲಿ ಸೋಮವಾರ ಡೋಪಿಂಗ್ ಹಗರಣಕ್ಕೆ ಸಂಬಂಧಿಸಿದಂತೆ ವಿಶ್ವ ಡೋಪಿಂಗ್ ವಿರೋಧಿ ಸಂಸ್ಥೆ (WADA), ರಷ್ಯಾ ಅನ್ನು ನಾಲ್ಕು ವರ್ಷಗಳ ಕಾಲ 2020ರ ಒಲಿಂಪಿಕ್ಸ್ ಕ್ರೀಡಾಕೂಟ  ಸೇರಿದಂತೆ ಎಲ್ಲ ಅಂತರ್ರಾಷ್ಟ್ರೀಯ ಕ್ರೀಡೆಗಳಿಂದ ನಿಷೇಧಿಸಿದೆ.


COMMERCIAL BREAK
SCROLL TO CONTINUE READING

ಪ್ರಯೋಗಾಲಯದಲ್ಲಿನ  ಡೋಪಿಂಗ್ ಡೇಟಾವನ್ನು ರಷ್ಯಾ ಕುಶಲತೆಯಿಂದ ನಿರ್ವಹಿಸುತ್ತಿದ್ದು, ರಷ್ಯಾದ ಆಂಟಿ-ಡೋಪಿಂಗ್ ಏಜೆನ್ಸಿ ಕ್ರೀಡಾಪಟುಗಳ ಪರೀಕ್ಷಾ ಫಲಿತಾಂಶಗಳ ಪ್ರಮುಖ ಡೇಟಾಬೇಸ್ ನಲ್ಲಿ ವಿಸಂಗತಿಗಳನ್ನು ಹೊಂದಿದೆ ಎಂದು WADA ನ ಅನುಸರಣೆ ಪರಿಶೀಲನಾ ಸಮೀತಿ(CRC) 2019 ರಲ್ಲಿ ವರದಿ ನೀಡಿತ್ತು. 


ಬಿಬಿಸಿ ನೀಡಿರುವ ವರದಿಯೊಂದರ ಪ್ರಕಾರ, ಡೋಪಿಂಗ್ ವಿರೋಧಿ ಸಂಸ್ಥೆ ಈ ಸರ್ವಾನುಮತದ ನಿರ್ಧಾರವನ್ನು ತೆಗೆದುಕೊಂಡಿದ್ದು, ರಷ್ಯಾವು ರಾಷ್ಟ್ರ-ಚಾಲಿತ ಡೋಪಿಂಗ್ ಕಾರ್ಯಕ್ರಮದ ಫಲಾನುಭವಿಗಳನ್ನು ಮರೆಮಾಚುವ, ಅಸ್ಪಷ್ಟಗೊಳಿಸುವ ಉದ್ದೇಶದಿಂದ ಈ ರೀತಿ ಮಾಡುತ್ತಿದೆ ಎಂದಿದೆ.


2014ರ ಸೋಚಿ ಒಲಿಂಪಿಕ್ಸ್‌ನಲ್ಲಿ ಈ ಕುರಿತು ಮೊದಲ ವರದಿ ಬಹಿರಂಗಗೊಂಡ  ನಾಲ್ಕು ವರ್ಷಗಳ ಬಳಿಕ  ಸ್ವಿಟ್ಜರ್‌ಲ್ಯಾಂಡ್‌ನ ಲೌಸನ್ನಲ್ಲಿರುವ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಪ್ರಧಾನ ಕಚೇರಿಯಲ್ಲಿ ನಡೆದ ವಿಶ್ವ ಆಂಟಿ-ಡೋಪಿಂಗ್ ಏಜೆನ್ಸಿಯ ವಿಶೇಷ ಮಂಡಳಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.


ಮಂಡಳಿಯ ಈ ನಿರ್ಧಾರದ ಬಳಿಕ ರಶಿಯನ್ ಕ್ರೀಡೆ ಮತ್ತು ಸರ್ಕಾರಿ ಪ್ರಾಧಿಕಾರವನ್ನು ಯಾವುದೇ ಅಂತಾರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ನಿಷೇಧಿಸಲಾಗುತ್ತಿದೆ ಎಂದು ವರದಿಯಾಗಿದೆ.


ಅಷ್ಟೇ ಅಲ್ಲ ಆಂಟಿ-ಡೋಪಿಂಗ್ ಮಂಡಳಿಯ ಈ ನಿರ್ಧಾರದಿಂದ ರಷ್ಯಾದ ಹಲವಾರು ಅಥ್ಲೀಟ್ ಗಳು ಜಪಾನ್ ನ ಟೋಕಿಯೋ ನಗರದಲ್ಲಿ ನಡೆಸಲು ಉದ್ದೇಶಿಸಲಾಗಿರುವ ಒಲಿಂಪಿಕ್ಸ್ 2020ಯಿಂದ ವಂಚಿತರಾಗಲಿದ್ದಾರೆ.