IND vs IRE, Team India Squad for Ireland Tour: ಭಾರತ ಮತ್ತು ಐರ್ಲೆಂಡ್ ನಡುವಿನ 3 ಪಂದ್ಯಗಳ T20 ಸರಣಿಯ ಮೊದಲ ಪಂದ್ಯ ಆಗಸ್ಟ್ 18 ರಂದು ರಾತ್ರಿ 7.30 ರಿಂದ ಡಬ್ಲಿನ್‌’ನಲ್ಲಿ ನಡೆಯಲಿದೆ. ಈ ಟಿ20 ಪಂದ್ಯದಲ್ಲಿ ಪ್ಲೇಯಿಂಗ್ 11 ಆಯ್ಕೆ ಅಷ್ಟು ಸುಲಭವಲ್ಲ. ಈ ಟಿ20 ಸರಣಿಯಲ್ಲಿ ಹಾರ್ದಿಕ್ ಪಾಂಡ್ಯಗೆ ವಿಶ್ರಾಂತಿ ನೀಡಲಾಗಿದ್ದು, ಜಸ್ಪ್ರೀತ್ ಬುಮ್ರಾ ಟೀಮ್ ಇಂಡಿಯಾದ ನಾಯಕತ್ವವನ್ನು ಪಡೆದಿದ್ದಾರೆ. ಇದರ ಜೊತೆಗೆ ಕತ್ತಿಯಂತೆ ಬ್ಯಾಟ್ ಬೀಸುವ ಟೀಂ ಇಂಡಿಯಾದಲ್ಲಿ ಅಪಾಯಕಾರಿ ಬ್ಯಾಟ್ಸ್ ಮನ್ ಪ್ರವೇಶಿಸಿದ್ದಾರೆ. ಟೀಂ ಇಂಡಿಯಾಗೆ ಈ ಆಟಗಾರನ ಆಗಮನದಿಂದ ಐರ್ಲೆಂಡ್ ತಂಡವೂ ತಲ್ಲಣಗೊಳ್ಳಲಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ನಿವೃತ್ತಿ ಹಿಂಪಡೆದು ವಿಶ್ವಕಪ್’ನಲ್ಲಿ ಸ್ಥಾನ ಪಡೆದ ಜಗತ್ತಿನ ಶ್ರೇಷ್ಠ ಆಲ್’ರೌಂಡರ್! ಈತ ಧೋನಿಗೆ ಗೆಳೆಯ-ಕೊಹ್ಲಿಗೆ ಶತ್ರು!


ಐರ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಬಲಗೈ ಬ್ಯಾಟ್ಸ್‌ಮನ್ ರುತುರಾಜ್ ಗಾಯಕ್ವಾಡ್, ಯಶಸ್ವಿ ಜೈಸ್ವಾಲ್ ಅವರೊಂದಿಗೆ ಬ್ಯಾಟಿಂಗ್ ಆರಂಭಿಸಲಿದ್ದಾರೆ. ರಿತುರಾಜ್ ಗಾಯಕ್ವಾಡ್ ಪಂದ್ಯಗಳನ್ನು ಕ್ಷಣಾರ್ಧದಲ್ಲಿ ತಿರುಗಿಸುವುದರಲ್ಲಿ ಪರಿಣತಿ ಹೊಂದಿದ್ದಾರೆ. ಐಪಿಎಲ್‌’ನಲ್ಲಿ ರಿತುರಾಜ್ ಗಾಯಕ್ವಾಡ್ ಅವರು ಚೆನ್ನೈ ಸೂಪರ್ ಕಿಂಗ್ಸ್‌ ಪರ ಬ್ಯಾಟ್ ಬೀಸಿದ್ದು  ಆರಂಭದಿಂದ ಫೈನಲ್’ವರೆಗೆ ಅಬ್ಬರಿಸಿದ್ದು ಅಷ್ಟಿಷ್ಟಲ್ಲ.


ರುತುರಾಜ್ ಗಾಯಕ್ವಾಡ್ ಬಿರುಸಿನ ಬ್ಯಾಟಿಂಗ್‌ನಲ್ಲಿ ಪರಿಣತಿ ಹೊಂದಿದ್ದಲ್ಲದೆ, ಕೆಲವೇ ಎಸೆತಗಳಲ್ಲಿ ಪಂದ್ಯದ ದಿಕ್ಕನ್ನು ಬದಲಾಯಿಸಬಲ್ಲ ಕಿಲಾಡಿ ಆಟಗಾರ. ಒಂದು ವೇಳೆ ರುತುರಾಜ್ ಗಾಯಕ್ವಾಡ್ ಅವರನ್ನು ಪ್ಲೇಯಿಂಗ್ ಇಲೆವೆನ್‌’ಗೆ ಸೇರಿಸಿಕೊಂಡರೆ, ಟೀಮ್ ಇಂಡಿಯಾ ಓಪನಿಂಗ್‌’ನಲ್ಲಿ ಅದ್ಭುತ ಪ್ರಯೋಜನ ಪಡೆಯುವುದು ಖಂಡಿತ. ಬಲಗೈ ಬ್ಯಾಟ್ಸ್‌ಮನ್ ಆಗಿರುವ ರುತುರಾಜ್ ಗಾಯಕ್ವಾಡ್ ಆಯ್ಕೆ ಬಹುತೇಕ ಖಚಿತವಾಗಿದೆ. ಇನ್ನು ಐರ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಗಾಯಕ್ವಾಡ್ ಟೀಂ ಇಂಡಿಯಾದ ಉಪನಾಯಕರಾಗಿಯೂ ಕಾರ್ಯನಿರ್ವಹಿಸಲಿದ್ದಾರೆ.


ಭಾರತ vs ಐರ್ಲೆಂಡ್ T20 ಸರಣಿ ವೇಳಾಪಟ್ಟಿ (ಭಾರತೀಯ ಕಾಲಮಾನ):


1ನೇ ಟಿ20 ಪಂದ್ಯ, ಆಗಸ್ಟ್ 18, ರಾತ್ರಿ 7.30, ಡಬ್ಲಿನ್


2ನೇ ಟಿ20 ಪಂದ್ಯ, ಆಗಸ್ಟ್ 20, ರಾತ್ರಿ 7.30, ಡಬ್ಲಿನ್


3ನೇ ಟಿ20 ಪಂದ್ಯ, ಆಗಸ್ಟ್ 23, ರಾತ್ರಿ 7.30, ಡಬ್ಲಿನ್


ಇದನ್ನೂ ಓದಿ: 32ರ ಹರೆಯದಲ್ಲೇ ನಿವೃತ್ತಿ ಘೋಷಿಸಿದ ಟೀಂ ಇಂಡಿಯಾದ ಸ್ಟಾರ್ ಬೌಲರ್!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ