IND vs ZIM: ಟಿ20 ವಿಶ್ವಕಪ್‌’ನಲ್ಲಿ ಪ್ರಶಸ್ತಿ ಗೆಲುವಿನ ನಂತರ ಟೀಂ ಇಂಡಿಯಾದ ಯುವಕರು ಹೊಸ ಗೆಲುವಿನ ತಯಾರಿಯಲ್ಲಿ ನಿರತರಾಗಿದ್ದಾರೆ. ಯುವ ಆಟಗಾರರಿಂದ ತುಂಬಿರುವ ಟೀಂ ಇಂಡಿಯಾ ಜಿಂಬಾಬ್ವೆ ವಿರುದ್ಧ ಸೆಣಸಲು ಸಜ್ಜಾಗಿದೆ.


COMMERCIAL BREAK
SCROLL TO CONTINUE READING

ಮೊದಲ ಟಿ20 ಪಂದ್ಯ ಜುಲೈ 6 ರಂದು ನಡೆಯಲಿದೆ. 5 ಪಂದ್ಯಗಳ ಈ ಸರಣಿಯಲ್ಲಿ ಹಲವು ಯುವ ಆಟಗಾರರಿಗೆ ಅವಕಾಶ ಸಿಕ್ಕಿದೆ. ಇದರಲ್ಲಿ ಐಪಿಎಲ್ 2024 ರಲ್ಲಿ ಸದ್ದು ಮಾಡಿದ ರಿಯಾನ್ ಪರಾಗ್ ಮತ್ತು ಅಭಿಷೇಕ್ ಶರ್ಮಾ ಹೆಸರು ಸಹ ಸೇರಿವೆ.


ಇದನ್ನೂ ಓದಿ: ಬಿಳಿಕೂದಲನ್ನು 10 ನಿಮಿಷದಲ್ಲಿ ನೈಸರ್ಗಿಕವಾಗಿ ಕಪ್ಪಾಗಿಸುತ್ತೆ ತೆಂಗಿನ ನಾರು! ಈ ಎಣ್ಣೆಯಲ್ಲಿ ಮಿಶ್ರಣ ಮಾಡಿ ಹಚ್ಚಿದರೆ ಪರ್ಮನೆಂಟ್ ಸೊಲ್ಯೂಷನ್!


ಇನ್ನು ರಿಯಾನ್ ಪರಾಗ್ ಅವರು ತಮ್ಮ ಮೊದಲ ಪ್ರವಾಸದಲ್ಲಿಯೇ ದೊಡ್ಡ ತಪ್ಪು ಮಾಡಿದ್ದಾರಂತೆ! ಬಿಸಿಸಿಐ ಶೇರ್ ಮಾಡಿರುವ ವಿಡಿಯೋದಲ್ಲಿ ರಿಯಾನ್ ಈ ರಹಸ್ಯವನ್ನು ಬಹಿರಂಗಪಡಿಸಿದ್ದಾರೆ.


ರೋಹಿತ್ ಶರ್ಮಾ ಮೈದಾನದಲ್ಲಾಗಲಿ ಅಥವಾ ಮೈದಾನದ ಹೊರಗಾಗಲಿ ವಿಭಿನ್ನ ಸ್ವಭಾವಕ್ಕೆ ಹೆಸರುವಾಸಿ. ವಿರಾಟ್ ಕೊಹ್ಲಿ ಕೂಡ ಅನೇಕ ಬಾರಿ ರೋಹಿತ್ ಮರೆವಿನ ಬಗ್ಗೆ ಕಾರ್ಯಕ್ರಮಗಳಲ್ಲಿ ಬಹಿರಂಗಪಡಿಸಿದ್ದಾರೆ. ಕೆಲವೊಮ್ಮೆ ಪಾಸ್‌ಪೋರ್ಟ್, ಕೆಲವೊಮ್ಮೆ ಫೋನ್, ರೋಹಿತ್ ಒಮ್ಮೆ ಮದುವೆಯ ಉಂಗುರವನ್ನು ಸಹ ಮರೆತಿದ್ದರು ಎಂಬುದನ್ನು ರಿವೀಲ್ ಮಾಡಿದ್ದರು. ಇದೀಗ ರಿಯಾನ್ ಪರಾಗ್ ಕೂಡ ಇಂತಹದ್ದೇ ಮರೆವಿನ ಸಮಸ್ಯೆಗೆ ಒಳಗಾಗಿದ್ದಾರೆ.


ಬಿಸಿಸಿಐ ಶೇರ್ ಮಾಡಿರುವ ವಿಡಿಯೋದಲ್ಲಿ ರಿಯಾನ್ ಪರಾಗ್, 'ಈ ರೀತಿ ಪ್ರಯಾಣಿಸುವುದು ನನ್ನ ಬಾಲ್ಯದ ಕನಸಾಗಿತ್ತು. ನಾವು ಪಂದ್ಯಗಳನ್ನು ಆಡುತ್ತೇವೆ. ಆದರೆ ಟೀಮ್ ಇಂಡಿಯಾದ ಜೆರ್ಸಿ ಧರಿಸಿ ತಂಡದೊಂದಿಗೆ ಪ್ರಯಾಣಿಸುವುದು ನಿಜಕ್ಕೂ ವಿಭಿನ್ನ. ನಾನು ತುಂಬಾ ಉತ್ಸುಕನಾಗಿದ್ದೆ, ಅದೇ ಉತ್ಸಾಹದಲ್ಲಿ ನನ್ನ ಪಾಸ್‌ಪೋರ್ಟ್ ಮತ್ತು ಫೋನ್ ಅನ್ನು ಮರೆತಿದ್ದೆ. ಬಳಿಕ ಹೋಗಿ ಪಡೆದುಕೊಂಡೆ. ಈಗ ನನ್ನ ಬಳಿ ಇದೆ” ಎಂದು ಹೇಳಿದ್ದಾರೆ.


ಇದನ್ನೂ ಓದಿ:  ರೋಹಿತ್, ಕೊಹ್ಲಿ, ಜಡೇಜಾ ಮಾತ್ರವಲ್ಲ! ಟೀಂ ಇಂಡಿಯಾದ ಈ ಕ್ರಿಕೆಟಿಗರೂ ಸಹ ನಿವೃತ್ತಿ…


ಜಿಂಬಾಬ್ವೆ ವಿರುದ್ಧ ಭಾರತ ತಂಡ:


ಶುಭ್ಮನ್ ಗಿಲ್ (ನಾಯಕ), ಯಶಸ್ವಿ ಜೈಸ್ವಾಲ್, ರಿಯಾನ್ ಪರಾಗ್, ರುತುರಾಜ್ ಗಾಯಕ್ವಾಡ್, ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಧ್ರುವ್ ಜುರೆಲ್ (ವಿಕೆಟ್ ಕೀಪರ್), ರಿಂಕು ಸಿಂಗ್, ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಅವೇಶ್ ಖಾನ್, ಖಲೀಲ್ ಅಹ್ಮದ್, ತುಷಾರ್ ದೇಶಪಾಂಡೆ, ರವಿ ಬಿಷ್ಣೋಯ್, ಮುಖೇಶ್ ಕುಮಾರ್


 


ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ