ನವದೆಹಲಿ: ಈ ವರ್ಷ ರಣಜಿ ಟ್ರೋಫಿಯಲ್ಲಿ ತಮ್ಮ ಮೊದಲ ಪ್ರಥಮ ದರ್ಜೆಯ ಋತುವಿಗೆ ಮರಳಿದ ಎಸ್ ಶ್ರೀಶಾಂತ್ (S.Sreesanth) ಅವರು ಎಲ್ಲಾ ರೀತಿಯ ಕ್ರಿಕೆಟ್ ಮಾದರಿಯಿಂದ ನಿವೃತ್ತಿ ಘೋಷಿಸಿದ್ದಾರೆ. ಟ್ವಿಟರ್‌ನಲ್ಲಿ ನಿವೃತ್ತಿ ಘೋಷಿಸಿದ ಅವರು ಟೀಂ ಇಂಡಿಯಾವನ್ನು ಪ್ರತಿನಿಧಿಸುವುದು ಗೌರವದ ಸಂಗತಿ ಎಂದು ಹೇಳಿದ್ದಾರೆ.


ಐಪಿಎಲ್‌ಗೆ ಮರಳಲು ಸಿದ್ಧ ಎಂದ ಎಸ್.ಶ್ರೀಶಾಂತ್...! ಮೂರು ಫೇವರಿಟ್ ತಂಡಗಳು ಇಲ್ಲಿವೆ


COMMERCIAL BREAK
SCROLL TO CONTINUE READING

"ಮುಂದಿನ ಪೀಳಿಗೆಯ ಕ್ರಿಕೆಟಿಗರಿಗಾಗಿ..ನನ್ನ ಪ್ರಥಮ ದರ್ಜೆ ಕ್ರಿಕೆಟ್ ವೃತ್ತಿಜೀವನವನ್ನು ಕೊನೆಗೊಳಿಸಲು ಆಯ್ಕೆ ಮಾಡಿಕೊಂಡಿದ್ದೇನೆ. ಆದರೆ ಈ ನಿರ್ಧಾರ ನನ್ನದು ಮಾತ್ರ, ಮತ್ತು ಇದು ನನಗೆ ಸಂತೋಷವನ್ನು ತರುವುದಿಲ್ಲ ಎಂದು ನನಗೆ ತಿಳಿದಿದ್ದರೂ, ಇದು ನನ್ನ ಜೀವನದಲ್ಲಿ ಈ ಸಮಯದಲ್ಲಿ ತೆಗೆದುಕೊಳ್ಳುವ ಸರಿಯಾದ ಮತ್ತು ಗೌರವಾನ್ವಿತ ಕ್ರಮವಾಗಿದೆ.ಈ ಹಿನ್ನಲೆಯಲ್ಲಿ ನಾನು ಪ್ರತಿ ಕ್ಷಣವನ್ನು ಪ್ರೀತಿಸುತ್ತೇನೆ,”ಎಂದು ಅವರು ಹೇಳಿದರು.


S.Sreesanth) ಭಾರತದ ಪರ 27 ಟೆಸ್ಟ್ ಮತ್ತು 53 ಏಕದಿನ ಪಂದ್ಯಗಳನ್ನು ಆಡುವ ಮೂಲಕ ಕ್ರಮವಾಗಿ 87 ಮತ್ತು 75 ವಿಕೆಟ್ ಪಡೆದಿದ್ದಾರೆ. 10 ಟಿ20 ಅಂತರಾಷ್ಟ್ರೀಯ ಪಂದ್ಯಗಳಿಂದ ಏಳು ವಿಕೆಟ್ ಪಡೆದಿದ್ದಾರೆ.