ಮೊದಲ ದಿನದ ಪಂದ್ಯದಲ್ಲಿ ಬರೊಬ್ಬರಿ 23 ವಿಕೆಟ್ಗಳ ಪತನ ! ಇತಿಹಾಸದಲ್ಲಿ 2ನೇ ಅತೀ ಹೆಚ್ಚು ವಿಕೆಟ್ ಉರುಳಿದ ದಾಖಲೆ ನಿರ್ಮಾಣ
SA vs INd 2nd test : ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೊದಲನೇ ದಿನದ ಪಂದ್ಯವು ಅಂತ್ಯಗೊಂಡಿದ್ದು ಎರಡನೇ ದಿನವು ಆರಂಭಗೊಂಡಿದೆ. ಮೊದಲ ದಿನದ ಪಂದ್ಯದಲ್ಲಿ ಎರಡು ತಂಡಗಳಿಂದ ಬರೊಬ್ಬರಿ 23 ವಿಕೆಟ್ಗಳು ಉರುಳಿದ್ದು ಇದು ಟೆಸ್ಟ್ ಇತಿಹಾಸದಲ್ಲೇ ಮೊದಲ ದಿನದಲ್ಲಿ ಎರಡನೇ ಅತೀ ಹೆಚು ವಿಕೆಟ್ ಉರುಳಿದ ದಾಖಲೆಯಾಗಿದೆ.
SA vs IND 23 wickets record : ದಕ್ಷಿಣ ಆಫ್ರಿಕಾ ಮತ್ತು ಭಾರತ ನಡುವಿನ 2ನೇ ಟೆಸ್ಟ್ ಪಂದ್ಯದ ಮೊದಲ ದಿನವು ಅಂತ್ಯಗೊಂಡಿದ್ದು 2ನೇ ದಿನಕ್ಕಡೆ ಕಾಲಿಟ್ಟಿದೆ. ನ್ಯೂಲಾಂಡ್ ಕೇಪ್ ಟೌನ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಹಲವಾರು ದಾಖಲೆಗಳು ನಿರ್ಮಾಣವಾಗಿದೆ. ಆ ದಾಖಲೆಗಳ ಸಾಲಿನಲ್ಲಿ ಒಂದೇ ದಿನದಂದು ಅತೀ ಹೆಚ್ಚು ವಿಕೆಟ್ ಉರುಳಿದ ದಾಖಲೆಯು ಕೂಡ ಸೇರಿಕೊಂಡಿದೆ.
ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ತಂಡವು ಮೊದಲ ಸೆಷನ್ನಲ್ಲೇ ತನ್ನೆಲ್ಲ ವಿಕೆಟ್ ಕಳೆದುಕೊಡು 55 ರನ್ಗಳಿಗೆ ಆಲ್ಔಟ್ ಆಯ್ತು. ನಂತರ ಭಾರತವು ಬ್ಯಾಟಿಂಗ್ ಆರಂಭಿಸತು. ಭಾರತದ ಸ್ಕೋರ್ 153 ಇರುವಾಗ 4ನೇ ವಿಕೆಟ್ ಪತನ ವಾಗುತ್ತಿದಂತೆಯೇ ಒಂದರ ಬೆನ್ನಲ್ಲೇ ಒಂದರಂತೆ ಇನ್ನುಳಿದ ಎಲ್ಲಾ ವಿಕೆಟ್ಗಳು ಪತನವಾದವು.
ಇದನ್ನು ಓದಿ-ಇಬ್ಬರು ದಿಗ್ಗಜರ ದಾಖಲೆ ಮುರಿಯಲು ವಿರಾಟ್ ಗೆ ಒಂದೇ ಹೆಜ್ಜೆ ಬಾಕಿ.. ಇನ್ನೊಂದು ಶತಕ ಕಲೆ ಹಾಕುತ್ತಾರಾ ಕಿಂಗ್ ಕೊಹ್ಲಿ ?
ಮೊದಲದಿನದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವು ಮೊದಲ ಇನ್ನಿಂಗ್ಸ್ನಲ್ಲಿ 10 ವಿಕೆಟ್ ಕಳೆದುಕೊಂಡಿತು, ಇದಾದ ನಂತರ ಭಾರತವು ಬ್ಯಾಟಿಂಗ್ನಲ್ಲಿ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿತು. ಬಾರತವನ್ನು ದಕ್ಷಿಣ ಆಫ್ರಿಕಾವು 153 ರನ್ಗಳಿಗೆ ಬಗ್ಗುಬಡಿಯಿತು. ಈ ಮೂಲಕ ದಕ್ಷಿನ ಆಫ್ರಿಕಾ ತಂಡವು ತನ್ನ ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್ ಮಾಡಲು ಮುಂದಾಯಿತು. ಮೊದಲ ದಿನದ ಅಂತ್ಯಕ್ಕೆ ದಕ್ಷಿಣ ಆಫ್ರಿಕಾವು 3 ವಿಕೆಟ್ ಕಳೆದು ಕೊಂಡಿದು.
ಈ ಮೂಲಕ ಮೊದಲ ದಿನದ ಪಂದ್ಯದಲ್ಲಿ ಒಟ್ಟು 23 ವಿಕೇಟ್ಗಳು ಪತನವಾಗಿವೆ. ಇದರಿಂದ ಟೆಸ್ಟ್ ಇತಿಹಾಸದಲ್ಲಿ ಮೊದಲ ದಿನವೇ 2ನೇ ಅತೀ ಹೆಚ್ಚು ವಿಕೆಟ್ ಉರುಳಿದ ಹೊಸ ದಾಖಲೆಯ ನಿರ್ಮಾಣವಾಗಿದೆ. 1902ರಲ್ಲಿ ನಡೆದ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯದಲ್ಲಿ ಮೊದಲ ದಿನವೇ 25 ವಿಕೆಟ್ ಉರುಳಿದ್ದವು. ಇದು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ದಿನವೇ ಅತೀ ಹೆಚ್ಚು ವಿಕೆಟ್ ಉರುಳಿದ ದಾಖಲೆಯಾಗಿದೆ.
ಈ ಸಾಧನೆಯಲ್ಲಿ ನಿನ್ನೆ(ಬುಧವಾರ)ನಡೆದ ದಕ್ಷಿಣ ಆಫ್ರಿಕಾ ಮತ್ತು ಭಾರತದ ವಿರುದ್ದದ ಟೆಸ್ಟ್ ಪಂದ್ಯದಲ್ಲಿ 23 ವಿಕೆಟ್ ಉರುಳಿದ್ದು ಇತಿಹಾಸದಲ್ಲಿ ಎರಡನೇ ಅತೀ ಹೆಚ್ಚು ವಿಕೆಟ್ ಉರುಳಿದ ಪಂದ್ಯವಾಗಿದೆ. ಇನ್ನು ಭಾರತವು ಎರಡನೇ ದಿನದ ಪಂದ್ಯದಲ್ಲಿ ಆತಿಥೇಯ ತಂಡವಾದ ದಕ್ಷಿಣ ಆಫ್ರಿಕಾ ತಂಡವನ್ನು 176 ರನ್ಗಳಿಗೆ ಆಲ್ಔಟ್ ಮಾಡಿದೆ. ಭಾರತಕ್ಕೆ ಈ ಪಂದ್ಯವನ್ನು ಗೆಲ್ಲಲು ಕೇವ 76ರನ್ಗಳ ಅಗತ್ಯವಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡ