ಮುಂಬೈ: ಭಾರತ ರತ್ನ ಗೌರವ ಪಡೆದ ಏಕೈಕ ಕ್ರೀಡಾಪಟು ಸಚಿನ್ ತೆಂಡೂಲ್ಕರ್ ಭಾನುವಾರ 49ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಮಾಸ್ಟರ್ ಬ್ಲಾಸ್ಟರ್ ಖ್ಯಾತಿಯ ಸಚಿನ್ ಅವರಿಗೆ  ಗಾಡ್ ಆಫ್ ಕ್ರಿಕೆಟ್, ಕ್ರಿಕೆಟ್ ದಂತಕಥೆ, ವಾಮನಮೂರ್ತಿ, ಕ್ರಿಕೆಟ್ ಸವ್ಯಸಾಚಿ, ದಾಖಲೆಗಳ ಸರದಾರ ಇನ್ನು ಹಲವಾರು ಬಿರುದುಗಳಿವೆ. ಭಾರತದಲ್ಲಿ ಕ್ರಿಕೆಟ್ ಒಂದು ಧರ್ಮವಾದರೆ, ಸಚಿನ್ ಅದಕ್ಕೆ ದೇವರು ಅನ್ನೋ ಮಾತಿದೆ.  


COMMERCIAL BREAK
SCROLL TO CONTINUE READING

ತಮ್ಮ 24 ವರ್ಷಗಳ ಕ್ರಿಕೆಟ್ ವೃತ್ತಿಜೀವನದಲ್ಲಿ ಸಚಿನ್ ಅವರು ಹಲವಾರು ಅವಿಸ್ಮರಣೀಯ ಸನ್ನಿವೇಷಗಳಿಗೆ ಸಾಕ್ಷಿಯಾಗಿದ್ದಾರೆ. ಜೊತಗೆ ಅಪರೂಪದ ದಾಖಲೆಗಳನ್ನು ತಮ್ಮ ಹೆಸರಿನಲ್ಲಿ ಬರೆಸಿಕೊಂಡಿದ್ದಾರೆ. ಸಚಿನ್ ತೆಂಡುಲ್ಕರ್ ಹುಟ್ಟುಹಬ್ಬಕ್ಕೆ ಮುಂಬೈ ಇಂಡಿಯನ್ಸ್ ವಿನೂತನವಾಗಿ ಶುಭಕೋರಿದೆ. ಭಾರತೀಯ ಕ್ರಿಕೆಟಿಗರು, ವಿಶ್ವದ ಕ್ರಿಕೆಟ್ ದಿಗ್ಗಜರು, ಕ್ರೀಡಾ ವಿಶ್ಲೇಷಕರು ಬಹುಮುಖ್ಯವಾಗಿ ಕೋಟ್ಯಂತರ ಅಭಿಮಾನಿಗಳು ಸಚಿನ್ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಾರೆ.


ಇದನ್ನೂ ಓದಿ: IPL 2022 : ಹಳ್ಳಿಯಿಂದ ಬಂದ ಈ ಆಟಗಾರ ಈಗ 'ಸಿಎಸ್‌ಕೆ ತಂಡ'ದ ಸ್ಪೋಟಕ ಬೌಲರ್! 


ಚಿನ್ ತೆಂಡೂಲ್ಕರ್ ಹಲವಾರು ದಾಖಲೆಗಳನ್ನು ನಿರ್ಮಿಸಿದ್ದಾರೆ. ಟೆಸ್ಟ್‍ನಲ್ಲಿ 200 ಪಂದ್ಯಗಳನ್ನಾಡಿರುವ ಸಚಿನ್ 53.78ರ ಸರಾಸರಿಯಲ್ಲಿ 15,921 ರನ್ ಗಳಿಸಿದ್ದಾರೆ. ಇದರಲ್ಲಿ 51 ಶತಕ ಮತ್ತು 68 ಅರ್ಧಶತಗಳು ಸೇರಿವೆ. ಅದರಂತೆ 463 ಏಕದಿನ ಪಂದ್ಯಗಳನ್ನಾಡಿರುವ ಸಚಿನ್ 44.83ರ ಸರಾಸರಿಯಲ್ಲಿ 18,426 ರನ್ ಗಳಿಸಿದ್ದಾರೆ. ಇದರಲ್ಲಿ 49 ಶತಕ ಹಾಗೂ 96 ಅರ್ಧಶತಕಗಳು ಸೇರಿವೆ.


ಇದನ್ನೂ ಓದಿ: ನೋ ಬಾಲ್ ವಿವಾದ: ಅಂಪೈರ್ ವಿರುದ್ಧ ರಿಷಭ್ ಪಂತ್ ಅಸಮಾಧಾನ, ವಿಡಿಯೋ ವೈರಲ್


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.