ಸಂಸದ ವೇತನ, ಭತ್ಯೆಯನ್ನು ಪ್ರಧಾನಮಂತ್ರಿ ಪರಿಹಾರ ನಿಧಿಗೆ ದೇಣಿಗೆ ನೀಡಿದ ಸಚಿನ್ ತೆಂಡೂಲ್ಕರ್
ರಾಜ್ಯಸಭಾ ಸದಸ್ಯರಾಗಿ ತಾವು ಪಡೆದಿದ್ದ ವೇತನ ಮತ್ತು ಭತ್ಯೆಯನ್ನು ಸಂಪೂರ್ಣವಾಗಿ ಪ್ರಧಾನಮಂತ್ರಿ ಪರಿಹಾರ ನಿಧಿಗೆ ಕ್ರಿಕೆಟ್ ಐಕಾನ್ ಸಚಿನ್ ತೆಂಡೂಲ್ಕರ್ ದೇಣಿಗೆಯಾಗಿ ನೀಡಿದ್ದಾರೆ.
ನವದೆಹಲಿ : ರಾಜ್ಯಸಭಾ ಸದಸ್ಯರಾಗಿ ತಾವು ಪಡೆದಿದ್ದ ವೇತನ ಮತ್ತು ಭತ್ಯೆಯನ್ನು ಸಂಪೂರ್ಣವಾಗಿ ಪ್ರಧಾನಮಂತ್ರಿ ಪರಿಹಾರ ನಿಧಿಗೆ ಕ್ರಿಕೆಟ್ ಐಕಾನ್ ಸಚಿನ್ ತೆಂಡೂಲ್ಕರ್ ದೇಣಿಗೆಯಾಗಿ ನೀಡಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಪ್ರಧಾನಮಂತ್ರಿ ಸಚಿವಾಲಯ, ಸಚಿನ್ ತೆಂಡೂಲ್ಕರ್ ಅವರು ತಮ್ಮ ರಾಜ್ಯಸಭಾ ಸದಸ್ಯತ್ವದ ಅವಧಿಯಲ್ಲಿ ವೇತನ ಹಾಗೂ ಮಾಸಿಕ ಭತ್ಯೆಯಾಗಿ ಪಡೆದಿದ್ದ ಸುಮಾರು 90ಲಕ್ಷ ರೂ.ಗಳನ್ನೂ ಪ್ರಧಾನಮಂತ್ರಿ ಪರಿಹಾರ ನಿಧಿಗೆ ದೇಣಿಗೆಯಾಗಿ ನೀಡಿದ್ದು, ಅವರಿಗೆ ಧನ್ಯವಾದಗಳನ್ನು ಅರ್ಪಿಸುವುದಾಗಿ ಸಚಿವಾಲಯ ಹೇಳಿದೆ.
"ಈ ಚಿಂತನಶೀಲ ನಿಲುವನ್ನು ಪ್ರಧಾನ ಮಂತ್ರಿಗಳು ಒಪ್ಪಿಕೊಂಡಿದ್ದು, ಕೃತಜ್ಞತೆ ತಿಳಿಸಿದ್ದಾರೆ. ಈ ಹಣವು ತೊಂದರೆಗೆ ಒಳಗಾದ ವ್ಯಕ್ತಿಗಳಿಗೆ ನೆರವು ನೀಡಲು ಅಪಾರ ಸಹಾಯವಾಗುತ್ತದೆ" ಎಂದು ಪ್ರಧಾನಮಂತ್ರಿ ಸಚಿವಾಲಯದ ಅಂಗೀಕೃತ ಪತ್ರದಲ್ಲಿ ತಿಳಿಸಲಾಗಿದೆ.
ಸಚಿನ್ ತೆಂಡೂಲ್ಕರ್ ಅವರು, ರಾಜ್ಯಸಭೆ ಅತಿ ಕಡಿಮೆ ಹಾಜರಾತಿ ಹೊದಿದಕಾಗಿ ಈ ಹಿನೆ ಸಾಕಷ್ಟು ಟೀಕೆಗಳಿಗೆ ಒಳಗಾಗಿದ್ದರು. ಅಲ್ಲದೆ, ಕಲಾಪಗಳಿಗೆ ಗೈರು ಹಾಜರಾದರೂ ಅವರು ಪಡೆಯುತ್ತಿದ್ದ ಭತ್ಯೆಗಳ ಬಗ್ಗೆಯೂ ಸಾಕಷ್ಟು ಟೀಕೆಗಳು ಕೇಳಿಬಂದಿದ್ದವು. ಆದಾಗ್ಯೂ, ಅವರು ಎಂಪಿ ಲೋಕಲ್ ಏರಿಯಾ ಡೆವಲಪ್ಮೆಂಟ್ ನಿಧಿಯನ್ನು ಉತ್ತಮವಾಗಿ ಬಳಸಿಕೊಂಡಿದ್ದರು. ಅಂತೆಯೇ, ಮತ್ತೊಮ್ಮ ನಾಮ ನಿರ್ದೇಶಿತ ರಾಜ್ಯಸಭಾ ಸದಸ್ಯೆಯಾಗಿದ್ದ ನಟಿ ರೇಖಾ ಕೂಡ ಕನಿಷ್ಠ ಹಾಜರಾತಿಗಾಗಿ ಸಾಕಷ್ಟು ಟೀಕೆಗಳಿಗೆ ಗುರಿಯಾಗಿದ್ದರು.
ಸಚಿನ್ ತೆಂಡೂಲ್ಕರ್ ಅವರ ಕಚೇರಿ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ದೇಶಾದ್ಯಂತ 185 ಯೋಜನೆಗಳನ್ನು 7.4ಕೋಟಿ ರೂ. ವೆಚ್ಚದಲ್ಲಿ ಮಂಜೂರು ಮಾಡಲಾಗಿದ್ದು, 30ಕೋಟಿ ರೂ. ಅನುದಾನದಲ್ಲಿ ತರಗತಿಗಳ ಕಟ್ಟಡ ಮತ್ತು ನವೀಕರಣ ಸೇರಿದಂತೆ ಶೈಕ್ಷಣಿಕ ಮತ್ತು ಸಂಬಂಧಿತ ರಚನಾತ್ಮಕ ಅಭಿವೃದ್ಧಿಗೆ ಬಳಸಲಾಗುತ್ತಿದೆ ಎನ್ನಲಾಗಿದೆ.
ಅಲ್ಲದೆ, ಸಚಿನ್ ತೆಂಡೂಲ್ಕರ್ ಅವರು 'ಸಂಸದ್ ಆದರ್ಶ್ ಗ್ರಾಮ್ ಯೋಜನಾ' ಅಡಿಯಲ್ಲಿ ಆಂಧ್ರಪ್ರದೇಶದ ಪುಟ್ಟಮ್ ರಾಜು ಕಂದ್ರಿಗಾ ಮತ್ತು ಮಹಾರಾಷ್ಟ್ರದ ಡೊಂಜ ಗ್ರಾಮಗಳನ್ನು ದತ್ತು ಪಡೆದಿದ್ದಾರೆ.