ಆಗಸ್ಟ್ 20ಕ್ಕೆ ಮುಂಬೈ ಹಾಫ್ ಮ್ಯಾರಥಾನ್: ಸಚಿನ್ ತೆಂಡುಲ್ಕರ್ರಿಂದ ಚಾಲನೆ
ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡುಲ್ಕರ್ ಭಾನುವಾರ(ಆ.21) ನಡೆಯಲಿರುವ ಮುಂಬೈ ಹಾಫ್ ಮ್ಯಾರಥಾನ್ ಓಟಕ್ಕೆ ಚಾಲನೆ ನೀಡಲಿದ್ದಾರೆ. ಕೋವಿಡ್ ಬಳಿಕ ಇದೇ ಮೊದಲ ಬಾರಿಗೆ ಸ್ಪರ್ಧೆ ನಡೆಯಲಿದ್ದು, ವಿವಿಧ ಕ್ಷೇತ್ರಗಳ ಸುಮಾರು 13500ಕ್ಕೂ ಹೆಚ್ಚು ಓಟಗಾರರು ಪಾಲ್ಗೊಳ್ಳಲಿದ್ದಾರೆ.
ಮುಂಬೈ: ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡುಲ್ಕರ್ ಭಾನುವಾರ(ಆ.21) ನಡೆಯಲಿರುವ ಮುಂಬೈ ಹಾಫ್ ಮ್ಯಾರಥಾನ್ ಓಟಕ್ಕೆ ಚಾಲನೆ ನೀಡಲಿದ್ದಾರೆ. ಕೋವಿಡ್ ಬಳಿಕ ಇದೇ ಮೊದಲ ಬಾರಿಗೆ ಸ್ಪರ್ಧೆ ನಡೆಯಲಿದ್ದು, ವಿವಿಧ ಕ್ಷೇತ್ರಗಳ ಸುಮಾರು 13500ಕ್ಕೂ ಹೆಚ್ಚು ಓಟಗಾರರು ಪಾಲ್ಗೊಳ್ಳಲಿದ್ದಾರೆ.
ಓಟಗಾರರು ಮೂರು ವಿವಿಧ ವಿಭಾಗಗಳಲ್ಲಿ ಸ್ಪರ್ಧಿಸಲಿದ್ದಾರೆ. 21 ಕಿಲೋ ಮೀಟರ್ ಓಟದಲ್ಲಿ 4000 ಮಂದಿ ಪಾಲ್ಗೊಳ್ಳಲಿದ್ದು, 10 ಕಿಲೋ ಮೀಟರ್ ಓಟದಲ್ಲಿ ಅಂದಾಜು 7000 ಮತ್ತು ೫ ಕಿಲೋ ಮೀಟರ್ ಓಟದಲ್ಲಿ 2500 ಓಟಗಾರರು ಭಾಗವಹಿಸಲಿದ್ದಾರೆ.
‘ಓಡುವುದರಿಂದ ಅನೇಕ ರೀತಿಯ ಉಪಯೋಗಗಳಿವೆ. ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಸಹಕಾರಿ’ ಎಂದು ಸಚಿನ್ ತೆಂಡುಲ್ಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹಾಫ್ ಮ್ಯಾರಥಾನ್ ಮತ್ತು ಎಲೈಟ್ 10ಕೆ ಸ್ಪರ್ಧೆಯಲ್ಲಿ ವಿಜೇತರಾಗುವ ಅಥ್ಲೀಟ್‌ಗಳನ್ನು ಸಚಿನ್ ಸನ್ಮಾನಿಸಲಿದ್ದಾರೆ.
ಇದನ್ನೂ ಓದಿ: Rajinikanth as Governor: ರಾಜ್ಯಪಾಲರಾಗಿ ನೇಮಕವಾಗಲಿದ್ದಾರಾ ರಜನಿಕಾಂತ್?
‘ಕೋವಿಡ್ ಮಹಾಮಾರಿ ಆರಂಭಗೊಂಡಾಗಿನಿಂದ ಫಿಟ್ನೆಸ್ ಕಡೆಗೆ ಜನರು ಹೆಚ್ಚು ಗಮನ ಹರಿಸಲು ಶುರು ಮಾಡಿದ್ದಾರೆ. ಸಕ್ರಿಯ ಮತ್ತು ಆರೋಗ್ಯಕರ ಜೀವನಶೈಲಿಯ ಮಹತ್ವವನ್ನು ಜನ ಅರಿತಿದ್ದಾರೆ’ ಎಂದು ತೆಂಡುಲ್ಕರ್ ಅಭಿಪ್ರಾಯಪಟ್ಟಿದ್ದಾರೆ.ಹಾಫ್ ಮ್ಯಾರಥಾನ್ ಜಿಯೋ ಗಾರ್ಡನ್ಸ್, ಬಿಕೆಸಿಯಲ್ಲಿ ಆರಂಭಗೊಂಡು ಅಲ್ಲಿಯೇ ಮುಕ್ತಾಯಗೊಳ್ಳಲಿದೆ. ಬೆಳಗ್ಗೆ 5.15ಕ್ಕೆ ಓಟ ಆರಂಭಗೊಳ್ಳಲಿದೆ.10ಕೆ ಓಟ ಬೆಳಗ್ಗೆ 6.20ಕ್ಕೆ ಮತ್ತು ೫ಕೆ ಓಟ ಬೆಳಗ್ಗೆ 8ಕ್ಕೆ ಶುರುವಾಗಲಿದೆ.
5ನೇ ಆವೃತ್ತಿಯ ಓಟದ ಸ್ಪರ್ಧೆಯಲ್ಲಿ ವಿವಿಧ ಕಾರ್ಪೋರೇಟ್ ತಂಡಗಳು ಪಾಲ್ಗೊಳ್ಳಲಿದ್ದು, ಉತ್ತಮ ಪೈಪೋಟಿ ನಿರೀಕ್ಷೆ ಮಾಡಲಾಗುತ್ತಿದೆ. ಭಾರತೀಯ ನಾಕೌಪಡೆಯ 2000ಕ್ಕೂ ಹೆಚ್ಚು ಸ್ಪರ್ಧಿಗಳು ಪಾಲ್ಗೊಳ್ಳಲಿರುವುದು ಬಹಳ ವಿಶೇಷ. ಹಾಫ್ ಮ್ಯಾರಥಾನ್‌ನಲ್ಲಿ 82 ವರ್ಷದ ಸ್ಪರ್ಧಿ ಕಣಕ್ಕಿಳಿಯಲಿದ್ದು, ಪ್ರಮುಖ ಆಕರ್ಷಣೆ ಎನಿಸಿದ್ದಾರೆ.
ಇದನ್ನೂ ಓದಿ: ಎರಡನೇ ಹಂತದ ಮೆಟ್ರೋ ಕಾಮಗಾರಿ: ಸುರಂಗ ಕೊರೆದು ಹೊರಬಂದ ಟಿಬಿಎಂ ಮಿಷನ್
72 ವರ್ಷದ ಮಹಿಳಾ ಸ್ಪರ್ಧಿ ಸಹ ಓಡಲಿದ್ದು, ಎಲ್ಲರ ಗಮನ ಸೆಳೆಯುವ ನಿರೀಕ್ಷೆ ಇದೆ. 5ಕೆ ಓಟದಲ್ಲಿ 7 ವರ್ಷ ಬಾಲಕಿ ಮತ್ತು 8 ವರ್ಷದ ಬಾಲಕ ಪಾಲ್ಗೊಳ್ಳಲಿದ್ದು, ಸ್ಪರ್ಧೆಯಲ್ಲಿ ಕಾಣಿಸಿಕೊಳ್ಳಲಿರುವ ಅತಿಕಿರಿಯ ಓಟಗಾರರು ಎನಿಸಿಕೊಳ್ಳಲಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.