IND vs ENG: ಆಂಗ್ಲರ ವಿರುದ್ಧ ‘ಯಶಸ್ವಿ’ ಬ್ಯಾಟಿಂಗ್ ಅಬ್ಬರ.. ಶತಕ ವೀರನಿಗೆ ಕ್ರಿಕೆಟ್ ದೇವರಿಂದ ಬಂತು ವಿಶೇಷ ಆಶೀರ್ವಾದ!
Yashasvi Jaiswal Century: 22ರ ಹರೆಯದ ಈ ಯುವ ಬ್ಯಾಟ್ಸ್’ಮನ್ ತನ್ನದೇ ಆದ `ಬೇಸ್ ಬಾಲ್` ಶೈಲಿಯಲ್ಲಿ ಇಂಗ್ಲೆಂಡ್ ಅನ್ನು ಹೀನಾಯವಾಗಿ ಸೋಲಿಸಿದರು ಎಂದರೆ ತಪ್ಪಾಗಲ್ಲ. ಜೈಸ್ವಾಲ್ ಅವರ ಅಜೇಯ 179 ರನ್‌ಗಳ ಬೃಹತ್ ಇನ್ನಿಂಗ್ಸ್, ಮೊದಲ ದಿನದಂತ್ಯಕ್ಕೆ ಭಾರತ 6 ವಿಕೆಟ್ ನಷ್ಟಕ್ಕೆ 336 ರನ್ ಗಳಿಸುವಂತೆ ಮಾಡಿತು.
Yashasvi Jaiswal Century: ಜೈಸ್ವಾಲ್... ಜೈಸ್ವಾಲ್... ಜೈಸ್ವಾಲ್... 'ಜೈಸ್ವಾಲ್'. ಇಂಗ್ಲೆಂಡ್ ವಿರುದ್ಧ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನ ಈ ಹೆಸರು ಅಬ್ಬರಿಸಿದ್ದೇ ಅಬ್ಬರಿಸಿದ್ದು... ಟೀಂ ಇಂಡಿಯಾದ ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಇಂಗ್ಲೆಂಡ್ ಬೌಲರ್’ಗಳನ್ನು ಬಗ್ಗುಬಡಿದು ಶತಕ ಸಿಡಿಸಿ ಮಿಂಚಿದ್ದರು.
22ರ ಹರೆಯದ ಈ ಯುವ ಬ್ಯಾಟ್ಸ್’ಮನ್ ತನ್ನದೇ ಆದ 'ಬೇಸ್ ಬಾಲ್' ಶೈಲಿಯಲ್ಲಿ ಇಂಗ್ಲೆಂಡ್ ಅನ್ನು ಹೀನಾಯವಾಗಿ ಸೋಲಿಸಿದರು ಎಂದರೆ ತಪ್ಪಾಗಲ್ಲ. ಜೈಸ್ವಾಲ್ ಅವರ ಅಜೇಯ 179 ರನ್‌ಗಳ ಬೃಹತ್ ಇನ್ನಿಂಗ್ಸ್, ಮೊದಲ ದಿನದಂತ್ಯಕ್ಕೆ ಭಾರತ 6 ವಿಕೆಟ್ ನಷ್ಟಕ್ಕೆ 336 ರನ್ ಗಳಿಸುವಂತೆ ಮಾಡಿತು. ಎರಡನೇ ದಿನ ಭಾರತ ದೊಡ್ಡ ಮುನ್ನಡೆಯತ್ತ ಕಣ್ಣಿಟ್ಟಿದೆ. ಇನ್ನೊಂದೆಡೆ, ಜೈಸ್ವಾಲ್ ತಮ್ಮ ದ್ವಿಶತಕ ಪೂರ್ಣಗೊಳಿಸಲು ಎದುರು ನೋಡುತ್ತಿದ್ದಾರೆ.
ಇದನ್ನೂ ಓದಿ: ರಾಜ್ಯದ ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲಿ ಟೆಲಿ-ಐಸಿಯು ವ್ಯವಸ್ಥೆ: ಸಚಿವ ದಿನೇಶ್ ಗುಂಡೂರಾವ್
ಜೈಸ್ವಾಲ್ ಪ್ರಚಂಡ ದಾಳಿ:
ಟಾಸ್ ಗೆದ್ದು ಮೊದಲು ಬ್ಯಾಟಿಂಗ್’ಗೆ ಬಂದ ಭಾರತ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಚೊಚ್ಚಲ ಆಟಗಾರ ಶೋಯೆಬ್ ಬಶೀರ್ ಎಸೆತದಲ್ಲಿ ರೋಹಿತ್ ಶರ್ಮಾ (14) ಕ್ಯಾಚಿತ್ತು ಔಟಾದರು. ಇದಾದ ನಂತರ ದಿನವಿಡೀ ಜೈಸ್ವಾಲ್ ಎಂಬ ಬಿರುಗಾಳಿ ಮೈದಾನದಲ್ಲಿ ಬೀಸಿದ್ದಲ್ಲದೆ, ಮೊದಲ ಎಸೆತದಿಂದ ದಿನದ ಅಂತ್ಯದವರೆಗೂ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದರು. 257 ಎಸೆತಗಳನ್ನು ಎದುರಿಸಿದ ಯಶಸ್ವಿ, ಇನಿಂಗ್ಸ್‌ನಲ್ಲಿ ಔಟಾಗದೆ 179 ರನ್ ಗಳಿಸಿದರು. ಈ ಇನ್ನಿಂಗ್ಸ್’ನಲ್ಲಿ ಇದುವರೆಗೆ ತಮ್ಮ ಬ್ಯಾಟ್’ನಿಂದ 17 ಬೌಂಡರಿ ಮತ್ತು 5 ಸಿಕ್ಸರ್’ಗಳನ್ನು ಬಾರಿಸಿದ್ದಾರೆ. ಎರಡನೇ ದಿನ ಬ್ಯಾಟಿಂಗ್ ಮಾಡುತ್ತಿರುವ ಜೈಸ್ವಾಲ್ ದ್ವಿಶತಕ ಪೂರೈಸುವತ್ತ ಕಣ್ಣಿಟ್ಟಿದ್ದಾರೆ. ಸ್ಟಂಪ್ ಆಗುವವರೆಗೂ ರವಿಚಂದ್ರನ್ ಅಶ್ವಿನ್ 5 ರನ್ ಗಳಿಸಿ ಜೈಸ್ವಾಲ್‌ಗೆ ಆಸರೆಯಾಗಿದ್ದರು. ಇಂಗ್ಲೆಂಡ್ ಪರ ಶೋಯೆಬ್ ಬಶೀರ್ ಮತ್ತು ರೆಹಾನ್ ಅಹ್ಮದ್ ತಲಾ ಎರಡು ವಿಕೆಟ್ ಪಡೆದಿದ್ದಾರೆ.
ಇದನ್ನೂ ಓದಿ: ತೂಕ ಇಳಿಕೆಗೆ ಅರಿಶಿಣವನ್ನು ಈ 5 ವಿಧಗಳಲ್ಲಿ ಬಳಸಿ, ಏಳೇ ದಿನಗಳಲ್ಲಿ ಪರಿಣಾಮ ಕಂಡುಬರುತ್ತದೆ!
ಸಚಿನ್ ತೆಂಡೂಲ್ಕರ್ ಆಶೀರ್ವಾದ:
ಜೈಸ್ವಾಲ್ ಅವರ ಅದ್ಭುತ ಬ್ಯಾಟಿಂಗ್ ನೋಡಿದ ಸಚಿನ್ ತೆಂಡೂಲ್ಕರ್ ಸಾಮಾಜಿಕ ಮಾಧ್ಯಮ ವೇದಿಕೆ X ನಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಜೈಸ್ವಾಲ್ ಅವರ ಶತಕ ಸಂಭ್ರಮದ ಫೋಟೋ ಜೊತೆಗೆ “ನೀವು ಯಶಸ್ವಿಯಾಗಿ' ಎಂದು ಶೀರ್ಷಿಕೆ ಬರೆದಿದ್ದಾರೆ. ಸಚಿನ್ ಅವರ ಈ ಪೋಸ್ಟ್’ನಲ್ಲಿ, ಅನೇಕ ಅಭಿಮಾನಿಗಳು ಯಶಸ್ವಿ ಅವರ ಬ್ಯಾಟಿಂಗ್ ಅನ್ನು ಶ್ಲಾಘಿಸುತ್ತಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ