Sachin Tendulkar Birthday: ಇಂದು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ 50ನೇ ಹುಟ್ಟುಹಬ್ಬ. ಸಚಿನ್ ತೆಂಡೂಲ್ಕರ್ 16ನೇ ವಯಸ್ಸಿನಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌’ಗೆ ಕಾಲಿಟ್ಟಾಗ, ಪಾಕಿಸ್ತಾನದ ಲೆಜೆಂಡರಿ ಸ್ಪಿನ್ನರ್ ಅಬ್ದುಲ್ ಖಾದಿರ್ ಅವರನ್ನು ಎದುರಿಸಿದ್ದರು. ಸಚಿನ್ ತೆಂಡೂಲ್ಕರ್ ಅವರ ಬ್ಯಾಟಿಂಗ್ ಪರೀಕ್ಷಿಸಲು, ಅಬ್ದುಲ್ ಖಾದಿರ್ ಒಮ್ಮೆ ಅವರಿಗೆ, 'ನಿಮಗೆ ಧೈರ್ಯವಿದ್ದರೆ, ನನ್ನ ಬಾಲ್‌ಗೆ ಸಿಕ್ಸರ್ ಬಾರಿಸಿ ತೋರಿಸು' ಎಂದು ಹೇಳಿದ್ದರಂತೆ.  ಈ ಘಟನೆಯು 1989 ರಲ್ಲಿ ಪೇಶಾವರದಲ್ಲಿ ನಡೆದ ಸೌಹಾರ್ದ ಪಂದ್ಯದ ಸಮಯದಲ್ಲಿ ನಡೆದತ್ತು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: IPL 2023ರ ಬಳಿಕ ಧೋನಿ ನಿವೃತ್ತಿ ಕನ್ಫರ್ಮ್! ಸ್ವತಃ ಅವರೇ ಕೊಟ್ರು ಈ ರೀತಿಯ ಸುಳಿವು


ಪಾಕಿಸ್ತಾನದ ದಂತಕಥೆ ಸ್ಪಿನ್ನರ್ ಅಬ್ದುಲ್ ಖಾದಿರ್, ತಮ್ಮ ಬೌಲಿಂಗ್’ನಲ್ಲಿ ಸಚಿನ್ ಸಿಕ್ಸರ್‌ ಹೊಡೆಯಬೇಕೆಂಬ ಸವಾಲೆಸೆದಿದ್ದರಂತೆ. ಆ ಸಮಯದಲ್ಲಿ ಸಚಿನ್ ತೆಂಡೂಲ್ಕರ್ ವಿಶ್ವ ಕ್ರಿಕೆಟ್‌ನಲ್ಲಿ ಹೊಸ ಸಂಚಲನ ಮೂಡಿಸಿದ್ದರು. ಆಗ ಅವರಿಗೆ ಕೇವಲ 16 ವರ್ಷ. ಪಾಕಿಸ್ತಾನದ ಅಭಿಮಾನಿಗಳು ಯುವ ಸಚಿನ್ ಅವರನ್ನು ಗೇಲಿ ಮಾಡುತ್ತಿದ್ದರು. ಕೆಲ ನೋಡುಗರು ಸಚಿನ್‌ಗೆ ‘ಹಾಲು ಕುಡಿಯುವ ಮಗು... ಮನೆಗೆ ಹೋಗಿ ಹಾಲು ಕುಡಿ’ ಎಂದು ಬರೆದು ಗೇಲಿ ಮಾಡಿದರೂ ಸಚಿನ್ ಸ್ವಲ್ಪವೂ ಸಿಟ್ಟಾಗಲಿಲ್ಲ.


1989ರಲ್ಲಿ ಪೇಶಾವರದಲ್ಲಿ ನಡೆದ ಈ ಪಂದ್ಯದಲ್ಲಿ ಪಾಕಿಸ್ತಾನಿ ಬೌಲರ್ ಮುಷ್ತಾಕ್ ಅಹ್ಮದ್ ಅವರ ಓವರ್‌’ನಲ್ಲಿ ಸಚಿನ್ ಎರಡು ಸಿಕ್ಸರ್ ಬಾರಿಸಿದ್ದರು. ಯುವ ಸಚಿನ್ ಅವರ ಇಂತಹ ಅದ್ಭುತ ಬ್ಯಾಟಿಂಗ್ ನೋಡಿ ಪಾಕಿಸ್ತಾನ ತಂಡದ ಹಿರಿಯ ಆಟಗಾರ ಅಬ್ದುಲ್ ಖಾದಿರ್ ಕೋಪಗೊಂಡಿದ್ದರು. ಖಾದಿರ್ ಸಚಿನ್ ಬಳಿ ಹೋಗಿ ‘ಯಾಕೆ ಮಕ್ಕಳ ಬೌಲಿಗ್’ನಲ್ಲಿ ಅಬ್ಬರಿಸುತ್ತೀಯಾ? ನಮ್ಮ ಬೌಲಿಂಗ್’ನಲ್ಲಿ ಅಬ್ಬರಿಸಿ ತೋರಿಸು” ಎಂದರಂತೆ, ಆದರೆ ಸಚಿನ್ ಖಾದಿರ್ ಮಾತಿಗೆ ಪ್ರತಿಕ್ರಿಯಿಸಲಿಲ್ಲ. ಇದಾದ ನಂತರ, ಖಾದಿರ್ ಬೌಲಿಂಗ್ ಮಾಡಲು ಬಂದಾಗ, ಸಚಿನ್ ಅವರ ಓವರ್‌’ನಲ್ಲಿ ಸತತ ಮೂರು ಸಿಕ್ಸರ್‌ಗಳನ್ನು ಬಾರಿಸಿದರು. ಸಚಿನ್ ಬಳಿ ಈ ರೀತಿ ಹೇಳಿ ತಾನು ತಪ್ಪು ಮಾಡಿದೆ ಎಂದು ಖಾದಿರ್ ಅರಿತುಕೊಂಡಿದ್ದರು. ಸಚಿನ್ ಅವರ ಬ್ಯಾಟಿಂಗ್ ನೋಡಿದ ಖಾದಿರ್ ಚಪ್ಪಾಳೆ ತಟ್ಟಿದರು ಮತ್ತು ಸಚಿನ್ ಅವರ ಮುಂದೆ ಗೌರವಾರ್ಥವಾಗಿ ಕೈ ಜೋಡಿಸಿದರು.


ಇಂಡಿಯಾ ಟುಡೇಗೆ ನೀಡಿದ ಸಂದರ್ಶನದಲ್ಲಿ ಅಬ್ದುಲ್ ಖಾದಿರ್ ಈ ವಿಚಾರವನ್ನು ಬಹಿರಂಗಪಡಿಸಿದರು. 'ಇದು ಏಕದಿನ ಪಂದ್ಯವಲ್ಲ, ಆದ್ದರಿಂದ ನೀವು ನನ್ನ ಎಸೆತಗಳಲ್ಲಿ ಸಿಕ್ಸರ್‌ ಬಾರಿಸಲು ಪ್ರಯತ್ನಿಸಬೇಕು. ನೀವು ನನ್ನ ಬಾಲ್ ಎದುರಿಸಿದರೆ,ಮ ನೀವು ಸ್ಟಾರ್ ಆಗುತ್ತೀರಿ” ಎಂದು ಸಚಿನ್’ಗೆ ಹೇಳಿದರಂತೆ. ಆದರೆ  ಅವರು ನನಗೆ ಏನನ್ನೂ ಹೇಳಲಿಲ್ಲ ಮತ್ತು ನೇರವಾಗಿ ಮೂರು ಸತತ ಸಿಕ್ಸರ್‌ಗಳನ್ನು ಬಾರಿಸಿ ತೋರಿಸಿದರು ಎಂದು ಹೇಳಿದ್ದರು.


ಇದನ್ನೂ ಓದಿ: CSK vs KKR: ಸುನಾಮಿ ಎಬ್ಬಿಸಿದ ರಹಾನೆ ಬ್ಯಾಟಿಂಗ್: ಕೊಲ್ಕತ್ತಾ ಮಣಿಸಿ Points Tableನಲ್ಲಿ ಅಗ್ರಸ್ಥಾನಕ್ಕೇರಿದ ಧೋನಿ ಪಡೆ


ಗಮನಾರ್ಹವೆಂದರೆ 463 ಏಕದಿನ ಪಂದ್ಯಗಳನ್ನು ಆಡಿರುವ ಸಚಿನ್ ತೆಂಡೂಲ್ಕರ್ ಈ ಮಾದರಿಯಲ್ಲಿ 18,426 ರನ್ ಗಳಿಸಿದ್ದಾರೆ. ಇದರಲ್ಲಿ 49 ಶತಕಗಳು ಸೇರಿದಂತೆ 96 ಅರ್ಧ ಶತಕಗಳು ಸೇರಿವೆ. ಇನ್ನು ಸಚಿನ್ 200 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 51 ಶತಕ ಮತ್ತು 68 ಅರ್ಧ ಶತಕಗಳ ಸಹಾಯದಿಂದ 15,921 ರನ್ ಗಳಿಸಿದ್ದಾರೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ