Sachin Tendulkar Love Story: ಕ್ರಿಕೆಟ್ ಜಗತ್ತಿನ ಲೆಜೆಂಡ್‌ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್. ಇಂದು ಅಂದರೆ ಏಪ್ರಿಲ್ 24 ರಂದು ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಹುಟ್ಟುಹಬ್ಬ. ಸಚಿನ್ ತೆಂಡೂಲ್ಕರ್ ಇಂದು 51ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಸಚಿನ್ ತೆಂಡೂಲ್ಕರ್ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಅವರಲ್ಲಿ ಒಬ್ಬರು ಡಾ.ಅಂಜಲಿ. ಹೌದು ಸಚಿನ್ ತೆಂಡೂಲ್ಕರ್ ಪತ್ನಿ ಅಂಜಲಿ ಅವರ ದೊಡ್ಡ ಅಭಿಮಾನಿ. ಸಚಿನ್‌ಗೂ ಅಂಜಲಿ ಮೇಲೆ ಅಪಾರ ಪ್ರೀತಿ ಇದೆ. ಇವರಿಬ್ಬರ ಲವ್ ಸ್ಟೋರಿ ಶುರುವಾಗಿದ್ದು ಹೇಗೆ ಗೊತ್ತಾ?


COMMERCIAL BREAK
SCROLL TO CONTINUE READING

1990 ರಲ್ಲಿ ಸಚಿನ್ ತೆಂಡೂಲ್ಕರ್ ಅಂತರಾಷ್ಟ್ರೀಯ ಪ್ರವಾಸದಿಂದ ಮನೆಗೆ ಮರಳುತ್ತಿದ್ದರು. ಆ ವೇಳೆ ವಿಮಾನ ನಿಲ್ದಾಣದಲ್ಲಿ ಅಮ್ಮನನ್ನು ಬರಮಾಡಿಕೊಳ್ಳಲು ಬಂದಿದ್ದ ಅಂಜಲಿಯನ್ನು ನೋಡಿ ಮೊದಲ ನೋಟದಲ್ಲೇ ಮನಸೋತಿದ್ದರು. ನಂತರ ಇಬ್ಬರೂ ಸ್ನೇಹಿತರ ಮೂಲಕ ಪಾರ್ಟಿಯಲ್ಲಿ ಭೇಟಿಯಾದರು. ಆ ಸಂಪರ್ಕವು ಸ್ನೇಹವಾಯಿತು. ಗೆಳೆತನ ಪ್ರೀತಿಗೆ ತಿರುಗಿತು. 


ಅಂಜಲಿ ಮತ್ತು ಸಚಿನ್ ತೆಂಡೂಲ್ಕರ್ ಒಟ್ಟಿಗೆ ಸಿನಿಮಾಗೆ ಹೋಗಿದ್ದರು. ಸಚಿನ್ ತಮ್ಮನ್ನು ನೋಡಲು ಜನ ಸೇರುತ್ತಾರೆ ಎಂಬ ಭಯಕ್ಕೆ ಥಿಯೇಟರ್‌ಗೆ ತಡವಾಗಿ ಹೋದರು. ಆದರೆ ಇಂಟರ್ವಲ್‌ ನಲ್ಲಿ ಪ್ರೇಕ್ಷಕರು ಸಚಿನ್ ಅವರನ್ನು ಸುತ್ತುವರೆದಿದ್ದರು. ತೆಂಡೂಲ್ಕರ್ ಅವರನ್ನು ಜನರು ಹಿಂಬಾಲಿಸುತ್ತಿರುವುದನ್ನು ಕಂಡು ಅಂಜಲಿ ಶಾಕ್ ಆಗಿದ್ದರಂತೆ.


ಇದನ್ನೂ ಓದಿ: CSK vs LSG: ಮಾರ್ಕಸ್ ಸ್ಟೊಯಿನಿಸ್ ಆರ್ಭಟಕ್ಕೆ ಬೆದರಿದ ಚೆನ್ನೈ ಸೂಪರ್ ಕಿಂಗ್ಸ್..! 


ಸಂದರ್ಶನವೊಂದರಲ್ಲಿ ತಮ್ಮ ಪ್ರೇಮ ಕಹಾನಿಯ ಬಗ್ಗೆ ಅಂಜಲಿ ಹೇಳಿದ್ದಾರೆ. ಸಚಿನ್‌ ತೆಂಡೂಲ್ಕರ್‌ ಮದುವೆಗೂ ಮುನ್ನ ತಮ್ಮನ್ನು ಒಮ್ಮೆ ಮನೆಗೆ ಕರೆದುಕೊಂಡು ಹೋಗಿದ್ದರಂತೆ. ಆಗ ಪತ್ರಕರ್ತೆ ಎಂದು ಸುಳ್ಳು ಪರಿಚಯ ಮಾಡಿಸಿದ್ದರಂತೆ ಎಂದು ಅಂಜಲಿ ಹೇಳಿದ್ದಾರೆ. ಸಚಿನ್ ಅವರ ಆತ್ಮಕಥನ ‘ಪ್ಲೇಯಿಂಗ್ ಇಟ್ ಮೈ ವೇ’ ಬಿಡುಗಡೆ ಸಮಾರಂಭದಲ್ಲಿ ಅಂಜಲಿ ಈ ಕುತೂಹಲಕಾರಿ ಸಂಗತಿ ಬಿಚ್ಚಿಟ್ಟಿದ್ದಾರೆ. 


ನಾನು ಸಚಿನ್ ಅವರನ್ನು ಮೊದಲು ನೋಡಿದಾಗ, ಅವರಿಗೆ 17 ವರ್ಷ. ಇಂಗ್ಲೆಂಡ್ ಪ್ರವಾಸ ಮುಗಿಸಿ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಅದೇ ಸಮಯಕ್ಕೆ ಅಮ್ಮನನ್ನು ಬರಮಾಡಿಕೊಳ್ಳಲು ಅಲ್ಲಿಗೆ ನಾನು ಸಹ ಹೋಗಿದ್ದೆ. ನಾವಿಬ್ಬರೂ ಒಬ್ಬರನ್ನೊಬ್ಬರು ನೋಡಿದೆವು. ಸಚಿನ್‌ ನನ್ನ ನೋಡಿದ ತಕ್ಷಣ ಇವಳನ್ನೇ ಮದುವೆಯಾಗಬೇಕೆಂದು ನಿರ್ಧರಿಸಿದ್ದರು. ಆದರೆ ಸಚಿನ್ ಯಾರು? ಏನು ಮಾಡುತ್ತಾರೆ ಎಂದು ನನಗೆ ತಿಳಿದಿರಲಿಲ್ಲ. ಸ್ವಲ್ಪ ಸಮಯದ ನಂತರ ನಾವು ಸಾಮಾನ್ಯ ಸ್ನೇಹಿತರ ಮೂಲಕ ಭೇಟಿಯಾದೆವು ಎಂದು ಅಂಜಲಿ ಹೇಳಿದ್ದಾರೆ.


ಈಗಿನಂತೆ ಆ ಕಾಲದಲ್ಲಿ ಮೊಬೈಲ್, ಸೋಷಿಯಲ್ ಮೀಡಿಯಾ ಇರಲಿಲ್ಲ. ಹಾಗಾಗಿ ಟೆಲಿಫೋನ್ ಬೂತ್‌ಗೆ ಮಾತನಾಡಲು ಹೋಗುತ್ತಿದ್ದೆ. ಹೆಚ್ಚು ಹೊತ್ತು ಮಾತನಾಡಿದಷ್ಟು ಬಿಲ್ ಜಾಸ್ತಿ ಆಗುತ್ತಿತ್ತು. ಟೆಲಿಫೋನ್ ಬಿಲ್‌ ಉಳಿಸಲು ನಾವು ಪ್ರೇಮ ಪತ್ರದ ಮೂಲಕ ಸಂವಹನ ನಡೆಸುತ್ತಿದ್ದೆವು ಎಂದಿದ್ದಾರೆ.


ಇದನ್ನೂ ಓದಿ: IPL 2024: 'ಅಗ್ಗದ' ಬೌಲರ್ ಈತ ಇಂದು ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಯಶಸ್ಸಿನ ಸೂಪರ್ ಹೀರೋ! 


ಪತ್ರಕರ್ತೆಯಂತೆ ನಟಿಸಿ ಅವರ ಕುಟುಂಬದ ಸದಸ್ಯರಿಗೆ ನನ್ನನ್ನು ಪರಿಚಯಿಸಿದ್ದರು. ಸಚಿನ್ ಅವರ ಸಂದರ್ಶನಕ್ಕೆ ಬರುತ್ತಿದ್ದ ಪತ್ರಕರ್ತೆಯಾಗಿ ನನ್ನನ್ನು ಅವರ ಮನೆಗೆ ಆಹ್ವಾನಿಸಿದರು. ಈ ವೇಳೆ ಸಚಿನ್ ಕೊಂಚ ಗಾಬರಿಯಾದರು. "ನಾನು ಮೊದಲ ಬಾರಿಗೆ ಸಲ್ವಾರ್ ಕಮೀಜ್ ಧರಿಸಿ ಅವರ ಮನೆಗೆ ಹೋಗಿದ್ದೆ" ಎಂದು ಅಂಜಲಿ ಹೇಳಿದರು.


ದಂಪತಿಗಳು 24 ಮೇ 1995 ರಂದು ವಿವಾಹವಾದರು. ಆ ನಂತರ ಅವರಿಗೆ ಇಬ್ಬರು ಮಕ್ಕಳು ಜನಿಸಿದರು. ಅವರೇ ಅರ್ಜುನ್ ತೆಂಡೂಲ್ಕರ್ ಮತ್ತು ಸಾರಾ ತೆಂಡೂಲ್ಕರ್. ಅರ್ಜುನ್ ತೆಂಡೂಲ್ಕರ್ ಕ್ರಿಕೆಟ್‌ನಲ್ಲಿ ತಮ್ಮ ವೃತ್ತಿಜೀವನವನ್ನು ಮುಂದುವರೆಸುತ್ತಿದ್ದಾರೆ. ಸಾರಾ ಲಂಡನ್‌ನಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.