Sania-Shoaib Divorce News: ವಿಶ್ವದ ಸ್ಟಾರ್ ಟೆನಿಸ್ ಆಟಗಾರ್ತಿಯರಲ್ಲಿ ಒಬ್ಬರಾದ ಸಾನಿಯಾ ಮಿರ್ಜಾ ಮತ್ತು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಶೋಯೆಬ್ ಮಲಿಕ್ ನಡುವಿನ ಸಂಬಂಧ ಮುರಿದುಬಿದ್ದಿದೆಯೇ? ಇಬ್ಬರೂ ವಿಚ್ಛೇದನ ಪಡೆಯಲು ನಿರ್ಧರಿಸಿದ್ದಾರೆಯೇ? ಅವರಿಬ್ಬರು ಬೇರ್ಪಟ್ಟಿದ್ದಾರೆಯೇ? ಇಂತಹ ಪ್ರಶ್ನೆಗಳು ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ಕೇಳಿಬರುತ್ತಿವೆ. ಇಲ್ಲಿಯವರೆಗೆ ಇಬ್ಬರೂ ಈ ವಿಷಯದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಇನ್ಮುಂದೆ RCBಗೆ ಜಿಂಬಾಬ್ವೆಯ ಮಾಜಿ ಆಟಗಾರ ನೂತನ ಹೆಡ್’ಕೋಚ್! ಹೊಸ ಪರ್ವದಲ್ಲಿ “ಈ ಸಲ ಕಪ್ ನಮ್ದೇ…”


ಸಾನಿಯಾ-ಶೋಯೆಬ್ ಸಂಬಂಧ ಮುರಿದುಬಿದ್ದಿದೆಯೇ?


ಭಾರತದ ಸ್ಟಾರ್ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಮತ್ತು ಪಾಕಿಸ್ತಾನದ ಕ್ರಿಕೆಟಿಗ ಶೋಯೆಬ್ ಮಲಿಕ್ ಸಾಮಾಜಿಕ ಮಾಧ್ಯಮದ ಒಂದು ಪೋಸ್ಟ್ ಸಖತ್ ವೈರಲ್ ಆಗುತ್ತಿದೆ. ಕಳೆದ ವರ್ಷದಿಂದ ಇವರಿಬ್ಬರ ವಿಚ್ಛೇದನದ ಊಹಾಪೋಹಗಳು ನಡೆಯುತ್ತಿವೆ. ಆದರೆ ಇಬ್ಬರೂ ಅನುಭವಿ ಆಟಗಾರರು ಈ ವಿಷಯದ ಬಗ್ಗೆ ಯಾವುದೇ ಸಾರ್ವಜನಿಕ ಪ್ರತಿಕ್ರಿಯೆಯನ್ನು ನೀಡಿಲ್ಲ.


ಸಾನಿಯಾ ಮತ್ತು ಶೋಯೆಬ್ 2010 ರಲ್ಲಿ ವಿವಾಹವಾದರು. ಈ ಮದುವೆ ಎರಡೂ ದೇಶಗಳ ಅಭಿಮಾನಿಗಳಲ್ಲಿ ಭಾರೀ ಕುತೂಹಲವನ್ನು ಹುಟ್ಟುಹಾಕಿತ್ತು. ಈಗ ಅವರ ಪ್ರತ್ಯೇಕತೆಯ ಬಗ್ಗೆ ಕೂಡ ಊಹಾಪೋಹಗಳು ಮಾಡಲಾಗುತ್ತಿದೆ. ಆದರೆ, ವಿಚ್ಛೇದನದ ಗಲಾಟೆಯ ನಡುವೆಯೂ ಇಬ್ಬರೂ ಪಾಕಿಸ್ತಾನದಲ್ಲಿ ರಿಯಾಲಿಟಿ ಟಿವಿ ಶೋ 'ದಿ ಮಿರ್ಜಾ ಮಲಿಕ್ ಶೋ'ಗಾಗಿ ಒಟ್ಟಿಗೆ ಆಗಮಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಹೋಸ್ಟ್ ಪಾತ್ರವನ್ನು ನಿರ್ವಹಿಸುತ್ತಾ, ಪಾಕಿಸ್ತಾನದ ಪ್ರಸಿದ್ಧ ವ್ಯಕ್ತಿಗಳನ್ನು ಸಂದರ್ಶಿಸುತ್ತಾರೆ.


ಮಲಿಕ್ ತನ್ನ ಇನ್‌ಸ್ಟಾಗ್ರಾಮ್ ಬಯೋದಿಂದ ಸಾನಿಯಾ ಬಗ್ಗೆ ಬರೆದಿರುವ ಬರಹವನ್ನು ತೆಗೆದುಹಾಕಿದ್ದಾರೆ, ಈ ಬೆಳವಣಿಗೆ ಬೆಂಕಿಗೆ ತುಪ್ಪ ಸುರಿದಂತೆ ಧಗಧಗ ಎಂದು ಉರಿಯಲು ಆರಂಭಿಸಿದೆ.  


41 ವರ್ಷದ ಮಲಿಕ್ ತಮ್ಮ ಇನ್‌ಸ್ಟಾಗ್ರಾಮ್ ಬಯೋದಿಂದ 'ಸೂಪರ್ ವುಮನ್ ಸಾನಿಯಾ ಮಿರ್ಜಾ ಪತಿ' ಎಂಬ ಬರಹವನ್ನು ತೆಗೆದುಹಾಕಿದ್ದಾರೆ. ಈಗ ತಮ್ಮ ಬಯೋದಲ್ಲಿ 'ಫಾದರ್ ಆಫ್ ಒನ್ ಟ್ರೂ ಬ್ಲೆಸ್ಸಿಂಗ್' ಎಂದು ಬರೆದಿದ್ದಾರೆ.


ಈ ವರ್ಷದ ಮಾರ್ಚ್‌ ತಿಂಗಳಲ್ಲಿ ಹೈದರಾಬಾದ್‌’ನಲ್ಲಿ ಪಂದ್ಯವನ್ನು ಆಡಿದ ನಂತರ ವೃತ್ತಿಪರ ಟೆನಿಸ್‌ನಿಂದ ನಿವೃತ್ತರಾದ 36 ವರ್ಷದ ಸಾನಿಯಾ, ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಿಂದ ಮಲಿಕ್ ಅವರ ಫೋಟೋಗಳನ್ನು ತೆಗೆದುಹಾಕಿದ್ದಾರೆ. ಅವರ ಕುಟುಂಬಕ್ಕೆ ಸಂಬಂಧಿಸಿದ ಮೂಲವೊಂದು ನೀಡಿದ ಮಾಹಿತಿ ಪ್ರಕಾರ, ಮಗ ಇಜಾನ್ ಅವರ ಆದ್ಯತೆಯಾಗಿದ್ದು, ಈ ಕಾರಣದಿಂದ ವಿಚ್ಛೇದನ ವಿಷಯದ ಬಗ್ಗೆ ಏನನ್ನೂ ಹೇಳಲು ಬಯಸುತ್ತಿಲ್ಲ.


ಇದನ್ನೂ ಓದಿ: ವಿಕೆಟ್ ಕೀಪರ್ ಆಗಿದ್ದು ಬ್ಯಾಟಿಂಗ್’ನಲ್ಲಿ ಅತೀ ಹೆಚ್ಚು ರನ್ ಕಲೆ ಹಾಕಿದ ಕ್ರಿಕೆಟಿಗ ಯಾರು? ಅಗ್ರ 5ರಲ್ಲಿ ನಮ್ಮವ ಒಬ್ಬನೇ


ಮೂಲಗಳು ಹೇಳುವಂತೆ, “ಸಾನಿಯಾ ಮತ್ತು ಶೋಯೆಬ್ ವಿಚಾರ, ಇದು ಅವರ ವೈಯಕ್ತಿಕ ಜೀವನ. ಅದಕ್ಕಾಗಿಯೇ ಅವರು ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಲು ಬಯಸುವುದಿಲ್ಲ. ಅವರ ಖಾಸಗಿತನವನ್ನು ಗೌರವಿಸಿದರೆ ಅವರು ಕೃತಜ್ಞರಾಗಿರುತ್ತಾರೆ” ಎಂದಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ