ನವದೆಹಲಿ: ಖ್ಯಾತ ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಅವರು ಹೆರಿಗೆ ಸಂದರ್ಭದಲ್ಲಿ ಸಿಕ್ಕಾಪಟ್ಟೆ ದಪ್ಪಗಾಗಿದ್ದ ವಿಚಾರ ಎಲ್ಲರಿಗೂ ತಿಳಿದೇ ಇದೆ. ಆದರೀಗ ಹೆರಿಗೆಯ ನಾಲ್ಕು ತಿಂಗಳ ಬಳಿಕ ಬರೋಬ್ಬರಿ 26 ಕೆ.ಜಿ. ತೂಕ ಇಳಿಸಿಕೊಂಡಿರುವ ಸಾನಿಯಾ, ಅದರ ಸೀಕ್ರೆಟ್ ಅನ್ನು ಬಹಿರಂಗಪಡಿಸಿದ್ದಾರೆ.


COMMERCIAL BREAK
SCROLL TO CONTINUE READING

ಸಾನಿಯಾ ಮಿರ್ಜಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತಾವು ತೂಕ ಇಳಿಸಿಕೊಂಡ ರೀತಿಯ ಬಗ್ಗೆ ವರ್ಕೌಟ್ ವೀಡಿಯೋ ಒಂದನ್ನು ಶೇರ್ ಮಾಡಿದ್ದಾರೆ. 


"ನಾನು ಗರ್ಭಿಣಿಯಾದಾಗ 23 ಕೆ.ಜಿ.ಯಷ್ಟು ತೂಕ ಹೆಚ್ಚಾಗಿತ್ತು. ಆದರೆ, ಹೆರಿಗೆಯ ನಾಲ್ಕು ತಿಂಗಳ ಬಳಿಕ ಅದಕ್ಕಿಂತ ಹೆಚ್ಚು, ಅಂದರೆ 26 ಕೆ.ಜಿ ತೂಕ ಕಡಿಮೆಯಾಗುವಲ್ಲಿ ಯಶಸ್ವಿಯಾಗಿದ್ದೇನೆ.   ಸಾಕಷ್ಟು ಕಠಿಣ ಪರಿಶ್ರಮದಿಂದ, ಶಿಸ್ತು ಬಹಳ ಮುಖ್ಯ. ಮಗುವಿನ ಜನನದ ನಂತರ 'ಸಹಜ ಸ್ಥಿತಿಗೆ' ಮರಳಲು ಎಷ್ಟು ಕಷ್ಟವಾಗುತ್ತದೆ ಎಂದು ಹಲವು ಮಹಿಳೆಯರು ಹೇಳುವುದನ್ನು ಓದಿದ್ದೇನೆ. ಆದರೆ, ದಿನಕ್ಕೆ ಒಂದೆರಡು ಗಂಟೆಗಳ ಕಾಲ ದೈಹಿಕ ವ್ಯಾಯಾಮದಲ್ಲಿ ತೊಡಗಿಸಿಕೊಂಡರೆ ಅಸಾಧ್ಯವಾದದ್ದು ಏನೂ ಇಲ್ಲ" ಎಂದು ಸಾನಿಯಾ ಬರೆದುಕೊಂಡಿದ್ದಾರೆ.

ಕಳೆದ ವರ್ಷ ಅಕ್ಟೋಬರ್ ನಲ್ಲಿ ಮುದ್ದಾದ ಗಂಡು ಮಗುವಿಗೆ ಸಾನಿಯಾ ಜನ್ಮ ನೀಡಿದ್ದು, ಮಗುವಿಗೆ ಇಜಾನ್ ಮಿರ್ಜಾ ಮಾಲಿಕ್ ಎಂದು ಹೆಸರಿಟ್ಟಿದ್ದಾರೆ.