ನವದೆಹಲಿ: ಭಾರತದ ಟೆನಿಸ್ ಸೂಪರ್ಸ್ಟಾರ್ ಸಾನಿಯಾ ಮಿರ್ಜಾ ತನ್ನ ಮಗನ ಮೊದಲ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಈ ಮೊದಲೂ ಕೂಡ ಮಗನ ಫೋಟೋವನ್ನು ಶೇರ್ ಮಾಡಿದ್ದ ಸಾನಿಯಾ ಅದರಲ್ಲಿ ಮಗನ ಮುಖ ಕಾಣದಂತೆ ಫೋಟೋ ಶೇರ್ ಮಾಡಿದ್ದರು. 


COMMERCIAL BREAK
SCROLL TO CONTINUE READING

ಆದರೆ ಈಗ ಸಾನಿಯಾ ಮಗನ ಮುಖ ಸ್ಪಷ್ಟವಾಗಿ ಕಾಣುವ ಫೋಟೋವನ್ನು ಶೇರ್ ಮಾಡಿದ್ದು, 'ಇಝಾನ್' ಕೊನೆಗೂ ಜಗತ್ತಿಗೆ ಹಲೋ ಹೇಳಿದ್ದಾರೆ. 


MirzaSania


ಈ ಫೋಟೋವನ್ನು ಹಂಚಿಕೊಂಡಿದ್ದ ಸಾನಿಯಾ ಮಿರ್ಜಾ, "ಈ ಉತ್ಸಾಹಭರಿತ ಜೀವನದಲ್ಲಿ ಇದು ಉತ್ತಮವಾಗಿದೆ ಮತ್ತು ಪ್ರಪಂಚಕ್ಕೆ ಹಲೋ ಹೇಳುವ ಸಮಯ" ಎಂದು ಬರೆದಿದ್ದಾರೆ.


ಸಾಮಾಜಿಕ ಮಾಧ್ಯಮದಲ್ಲಿ ಸಾನಿಯಾ ಅವರ ಮಗನ ಫೋಟೋ ಪೋಸ್ಟ್ ವೈರಲ್ ಆಗಿದೆ.



ಶೋಯೆಬ್ ಮಲಿಕ್, ಸಾನಿಯಾ ದಂಪತಿಯ ತಮ್ಮ ಮಗುವಿಗೆ ಇಝಾನ್ ಮಿರ್ಜಾ ಮಲಿಕ್ ಎಂದು ಹೆಸರಿಟ್ಟಿದ್ದು, ಇಝಾನ್ ಎಂದರೆ ಅರೇಬಿಕ್ ನಲ್ಲಿ ಗಾಡ್ ಗಿಫ್ಟ್ ಎಂಬರ್ಥವನ್ನು ನೀಡುತ್ತದೆ.