`ಅಪ್ಪಟ ಶಿಷ್ಯನ ಕ್ರಿಕೆಟ್ ಕರಿಯರ್ ಹಾಳು ಮಾಡಿದ್ರಾ ರಾಹುಲ್ ದ್ರಾವಿಡ್`: ಕಣ್ಣೀರಿಟ್ಟ ಸ್ಟಾರ್ ಕ್ರಿಕೆಟರ್ ತಂದೆ
Sanju Samson Father Satement: ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ ಇತ್ತೀಚೆಗೆ ಡರ್ಬನ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಅದ್ಭುತ ಶತಕ ಬಾರಿಸಿ ಸುದ್ದಿ ಮಾಡಿದರು.
Sanju Samson Father Satement: ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ ಇತ್ತೀಚೆಗೆ ಡರ್ಬನ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಅದ್ಭುತ ಶತಕ ಬಾರಿಸಿ ಸುದ್ದಿ ಮಾಡಿದರು. ಈ ಪಂದ್ಯದಲ್ಲಿ ಶತಕ ಬಾರಿಸುವ ಮೂಲಕ ಅವರು T-20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಸತತ ಎರಡು ಶತಕಗಳನ್ನು ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಗೆ ಸೇರಿದರು.
ಸಂಜು ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ರಾಜಸ್ಥಾನ್ ರಾಯಲ್ಸ್‌ನ ನಾಯಕತ್ವ ವಹಿಸಿದ್ದರು. IPL ನಲ್ಲಿ ಮಿಂಚಿದ ಸ್ಯಾಮ್ಸನ್ ಗೆ ಭಾರತ ತಂಡದಲ್ಲಿ ಹೆಚ್ಚುತ್ತಿರುವ ಪೈಪೋಟಿಯಿಂದಾಗಿ ಸರಿಯಾದ ರೀತಿಯ ಸ್ಥಾನವನ್ನು ಸಿಗಲೇ ಇಲ್ಲ. ಸುಮಾರು 10 ವರ್ಷಗಳಿಂದ ಸ್ಯಾಮ್ಸನ್ ಅವಕಾಶಗಳಿಗೆ ಹಾತೊರೆಯುತ್ತಿದ್ದರು. ಟಿ20 ಸ್ವರೂಪಕ್ಕೆ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯ ನಿವೃತ್ತಿ ಬಳಿಕ ಸಂಜುಗೆ ಅವಕಾಶ ಒದಗಿ ಬಂದಿದೆ. T20 ಸ್ವರೂಪದಲ್ಲಿ ಅವರ ಅದೃಷ್ಟ ಬದಲಾಗಿದೆ.
ಪ್ರಸಕ್ತ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಸಂಜು ಸ್ಯಾಮ್ಸನ್ ಅತ್ಯುತ್ತಮ ಫಾರ್ಮ್‌ನಲ್ಲಿದ್ದು, ಆಟದ ಶೈಲಿಯ ಮೂಲಕ ಕ್ರಿಕೆಟ್ ಅಭಿಮಾನಿಗಳ ಮೆಚ್ಚುಗೆ ಗಳಿಸುತ್ತಿದ್ದಾರೆ. ಈ ಮಧ್ಯದಲ್ಲಿ ಅವರ ತಂದೆ ನೀಡಿರುವ ಹೇಳಿಕೆ ಭಾರತೀಯ ಕ್ರಿಕೆಟ್ ಅಭಿಮಾನಿಗಳನ್ನು ಬೆಚ್ಚಿಬೀಳಿಸಿದೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಎಂ.ಎಸ್ ಧೋನಿ ಮತ್ತು ರಾಹುಲ್ ದ್ರಾವಿಡ್ ಸೇರಿದಂತೆ ಹಿಂದಿನ ಭಾರತೀಯ ಮ್ಯಾನೇಜ್‌ಮೆಂಟ್ ತನ್ನ ಮಗನಿಗೆ ಟೀಮ್ ಇಂಡಿಯಾ ತಂಡದಲ್ಲಿ ಸರಿಯಾದ ಅವಕಾಶಗಳನ್ನು ನೀಡಲಿಲ್ಲ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ಟೀಂ ಇಂಡಿಯಾ ಆಟಗಾರರಿಗೆ ಬಿಗ್ ಶಾಕ್!! ಮೂವರು ಸ್ಟಾರ್ ಆಟಗಾರರು ತಂಡದಿಂದ ಔಟ್?!
ಸಂಜು ಅವರ ತಂದೆ ಸ್ಯಾಮ್ಸನ್ ವಿಶ್ವನಾಥ್ ಅವರು ದೆಹಲಿ ಪೊಲೀಸ್‌ನಲ್ಲಿ ಕಾನ್‌ಸ್ಟೆಬಲ್ ಆಗಿದ್ದು, ಸಂತೋಷ್ ಟ್ರೋಫಿಯಲ್ಲಿ ದೆಹಲಿ ಫುಟ್‌ಬಾಲ್ ತಂಡವನ್ನು ಪ್ರತಿನಿಧಿಸಿದ್ದರು. ಅವರು ಕೇರಳದಲ್ಲಿ ಮಲಯಾಳಂ ಸುದ್ದಿವಾಹಿನಿಗೆ ಸಂದರ್ಶನ ನೀಡಿದ್ದಾರೆ. ಅಲ್ಲಿ ಅವರು ತಮ್ಮ ಮಗನ ವೃತ್ತಿಜೀವನದ ಒಂದು ದಶಕವನ್ನು ಅಂದರೆ ಸುಮಾರು 10 ವರ್ಷಗಳನ್ನು ಹಾಳುಮಾಡಲು ಹಿಂದಿನ ಭಾರತೀಯ ಆಡಳಿತವನ್ನು ದೂಷಿಸಿದರು.
ಸಂಜು ಸ್ಯಾಮ್ಸನ್ ಅವರ ತಂದೆ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಎಂಎಸ್ ಧೋನಿ ಮತ್ತು ರಾಹುಲ್ ದ್ರಾವಿಡ್ ಮಗನ ವೃತ್ತಿಜೀವನದ ಮೇಲಾದ ಪರಿಣಾಮಗಳಿಗೆ ಜವಾಬ್ದಾರರು ಎಂದಿದ್ದಾರೆ.
"ನನ್ನ ಮಗನ 10 ವರ್ಷಗಳ ಮಹತ್ವದ ವೃತ್ತಿಜೀವನವನ್ನು 3-4 ಜನರು ಹಾಳುಮಾಡಿದ್ದಾರೆ. ನಾಯಕರಾದ ಧೋನಿ, ವಿರಾಟ್, ರೋಹಿತ್ ಮತ್ತು ಕೋಚ್ ದ್ರಾವಿಡ್ ಈ ನಾಲ್ಕು ಜನರು ನನ್ನ ಮಗನ ಜೀವನದ 10 ವರ್ಷಗಳನ್ನು ಹಾಳುಮಾಡಿದರು. ಆದರೆ ಅವರು ಅವನನ್ನು ಎಷ್ಟೇ ನೋಯಿಸಿದರು ಸಂಜು ಗೆದ್ದು ಬಂದರು" ಎಂದಿದ್ದಾರೆ.
ಇದನ್ನೂ ಓದಿ: RCBಗೆ ಬರ್ತಿದ್ದೀರಾ...? ಕೊನೆಗೂ ಬಹುಕಾಲದ ಪ್ರಶ್ನೆಗೆ ಉತ್ತರ ಕೊಟ್ಟ ಕನ್ನಡಿಗ ಕೆಎಲ್ ರಾಹುಲ್ ಹೇಳಿದ್ದು ಹೀಗೆ...
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.