India tour of West Indies 2023: ಭಾರತವು ಜುಲೈ 12 ರಿಂದ ವೆಸ್ಟ್ ಇಂಡೀಸ್ ಪ್ರವಾಸ ಮಾಡಬೇಕಾಗಿದೆ. ಅಲ್ಲಿ ತಂಡವು ಟೆಸ್ಟ್, ODI ಮತ್ತು T20 ಸರಣಿಗಳನ್ನು ಆಡಲಿದೆ. ಇದಕ್ಕಾಗಿ ಬಿಸಿಸಿಐ ಶುಕ್ರವಾರ ಟೆಸ್ಟ್ ಮತ್ತು ಏಕದಿನ ತಂಡವನ್ನು ಪ್ರಕಟಿಸಿದೆ. ಈ ತಂಡದಲ್ಲಿ ಆಟಗಾರರೊಬ್ಬರಿಗೂ ಸ್ಥಾನ ನೀಡಲಾಗಿದ್ದು, ಅವರ ಸೇರ್ಪಡೆಗೆ ಹಲವು ದಿನಗಳಿಂದ ಬೇಡಿಕೆಯಿತ್ತು. ಆದರೆ, ಈ ಹಿಂದೆಯೂ ಈ ಆಟಗಾರನಿಗೆ ತಂಡದಲ್ಲಿ ಸ್ಥಾನ ನೀಡಲಾಗಿದ್ದರೂ, ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಿರಲಿಲ್ಲ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ನನಸಾಯ್ತು ಕನಸು… ಆಟೋ ಚಾಲಕನ ಮಗನಿಗೆ ಕೊನೆಗೂ Team Indiaದಲ್ಲಿ ಸಿಕ್ಕೇಬಿಡ್ತು ಸ್ಥಾನ!


ಮುಂಬರುವ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಟೀಂ ಇಂಡಿಯಾದ ಏಕದಿನ ತಂಡವನ್ನು ಬಿಸಿಸಿಐ ಪ್ರಕಟಿಸಿದೆ. ಸುಮಾರು 7 ತಿಂಗಳ ಬಳಿಕ ಬ್ಯಾಟ್ಸ್’ಮನ್ ಸಂಜು ಸ್ಯಾಮ್ಸನ್ ಈ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇವರು ಕೊನೆಯದಾಗಿ 25 ನವೆಂಬರ್ 2022 ರಂದು ODI ಪಂದ್ಯವನ್ನು ಆಡಿದ್ದರು. ನಂತರ ಈ ಸ್ವರೂಪದಲ್ಲಿ ಯಾವುದೇ ಅವಕಾಶ ಸಿಕ್ಕಿರಲಿಲ್ಲ. ಈಗ ಮತ್ತೆ ಎಂಟ್ರಿಯಾಗುತ್ತಿದ್ದಾರೆ.


ಇವರ ಇತ್ತೀಚಿನ ಪ್ರದರ್ಶನವನ್ನು ನೋಡಿದರೆ, ವಿಶೇಷ ಸಾಧನೆ ಏನೂ ಮಾಡಿಲ್ಲ. ಒಂದು ವೇಳೆ ಈ ಏಕದಿನ ಪಂದ್ಯದಲ್ಲಿ ಫ್ಲಾಪ್ ಶೋ ಮುಂದುವರೆಸಿದರೆ ಟೀಂ ಇಂಡಿಯಾದಿಂದ ಗೇಟ್ ಪಾಸ್ ಪಡೆಯಲಿದ್ದಾರೆ.


ಸಂಜು ಸ್ಯಾಮ್ಸನ್ ಅವರ ವೃತ್ತಿಜೀವನದ ಬಗ್ಗೆ ಮಾತನಾಡುವುದಾದರೆ, ಅವರು ಇಲ್ಲಿಯವರೆಗೆ 11 ಏಕದಿನ ಪಂದ್ಯಗಳನ್ನು ಆಡಿದ್ದಾರೆ. 10 ಇನ್ನಿಂಗ್ಸ್‌ ಗಳಲ್ಲಿ, ಅವರು 104.76 ಸ್ಟ್ರೈಕ್ ರೇಟ್ ಮತ್ತು 66 ರ ಸರಾಸರಿಯೊಂದಿಗೆ 330 ರನ್ ಗಳಿಸಿದ್ದಾರೆ. ಈ ವೇಳೆ 2 ಅರ್ಧಶತಕಗಳನ್ನು ಕೂಡ ಗಳಿಸಿದ್ದಾರೆ. ಇನ್ನು T20 ಪಂದ್ಯಗಳನ್ನು ಆಡಿದ್ದು, ಇದರಲ್ಲಿ ಅವರು 16 ಇನ್ನಿಂಗ್ಸ್‌ಗಳಲ್ಲಿ 133.78 ಸ್ಟ್ರೈಕ್ ರೇಟ್ ಮತ್ತು 20 ರ ಸರಾಸರಿಯೊಂದಿಗೆ 301 ರನ್ ಗಳಿಸಿದ್ದಾರೆ.


ಐಪಿಎಲ್ 2023ರಲ್ಲಿ ರಾಜಸ್ಥಾನ ತಂಡದ ನಾಯಕ:


ಸಂಜು ಸ್ಯಾಮ್ಸನ್ ಐಪಿಎಲ್ 2023 ರಲ್ಲಿ ರಾಜಸ್ಥಾನ್ ರಾಯಲ್ಸ್ ನಾಯಕರಾಗಿದ್ದರು. ಆದರೆ, ಅವರ ತಂಡವು ಪ್ಲೇ ಆಫ್‌ ಗೆ ಅರ್ಹತೆ ಪಡೆಯಲು ಸಾಧ್ಯವಾಗಲಿಲ್ಲ. ಐಪಿಎಲ್ 2023 ರಲ್ಲಿ ಸ್ಯಾಮ್ಸನ್ ಅವರ ಪ್ರದರ್ಶನವು ವಿಶೇಷವೇನಿರಲಿಲ್ಲ. ರಾಜಸ್ಥಾನ್ ರಾಯಲ್ಸ್ ತಂಡವು ಐಪಿಎಲ್ 2022 ರಲ್ಲಿ ಸ್ಯಾಮ್ಸನ್ ನಾಯಕತ್ವದಲ್ಲಿ ಫೈನಲ್ ಆಡಿತು, ಆದರೆ ಪ್ರಶಸ್ತಿಯನ್ನು ಗೆಲ್ಲಲು ಸಾಧ್ಯವಾಗಲಿಲ್ಲ.


ಇದನ್ನೂ ಓದಿ: West Indies Series: ವಿಂಡೀಸ್ ಪ್ರವಾಸಕ್ಕೆ ಟೀಮ್ ಇಂಡಿಯಾ ಘೋಷಣೆ, ಈ 16 ಆಟಗಾರರಿಗೆ ಸಿಕ್ತು ಅವಕಾಶ


ಕೆರಿಬಿಯನ್ ವಿರುದ್ಧದ ODIಗೆ ಭಾರತೀಯ ತಂಡ:


ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ರಿತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ (ಉಪನಾಯಕ), ಶಾರ್ದೂಲ್ ಠಾಕೂರ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಯುಜ್ವೇಂದ್ರ ಚಾಹಲ್, ಯುಜ್ವೇಂದ್ರ ಚಾಹಲ್ ಕುಲದೀಪ್ ಯಾದವ್, ಜಯದೇವ್ ಉನದ್ಕತ್, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್ ಮತ್ತು ಮುಖೇಶ್ ಕುಮಾರ್.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.