Sara Tendulkar tweet on Shubman Gill: ಸೆಪ್ಟೆಂಬರ್ 22ರಂದು ಮೊಹಾಲಿಯ ಪಂಜಾಬ್‌ ಕ್ರಿಕೆಟ್‌ ಅಸೋಸಿಯೇಶನ್‌ ಮೈದಾನದಲ್ಲಿ ನಡೆದಿದ್ದ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ, ಭಾರತ ಮೊದಲ ಪಂದ್ಯವನ್ನು ಭರ್ಜರಿಯಾಗಿ ಗೆದ್ದಿತ್ತು. ಈ ಪಂದ್ಯದಲ್ಲಿ ಭಾರತದ ನಾಲ್ವರು ಆಟಗಾರರು ಅದ್ಭುತವಾಗಿ ಬ್ಯಾಟಿಂಗ್ ಮಾಡಿದ್ದರು. ಜೊತೆಗೆ ಬೌಲಿಂಗ್’ನಲ್ಲೂ ಭಾರತ ಮಿಂಚಿತ್ತು. ಈ ಮೂಲಕ ಆಸ್ಟ್ರೇಲಿಯಾ ನಿಗದಿತ 50 ಓವರ್‌’ಗಳಲ್ಲಿ 276 ರನ್‌ ಗಳಿಸಲಷ್ಟೇ ಸಾಧ್ಯವಾಯಿತು. ಇನ್ನು ಗುರಿ ಹಿಂಬಾಲಿಸಿದ ಭಾರತ 48.4 ಓವರ್​​’ಗಳಲ್ಲಿ ಗೆಲುವು ಕಂಡಿತು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Asian Games 2023: ಏಷ್ಯನ್ ಗೇಮ್ಸ್ ಫೈನಲ್ ತಲುಪಿದ ಭಾರತೀಯ ಕ್ರಿಕೆಟ್ ತಂಡ!


ಇನ್ನು ಇಂದು ಇಂದೋರ್’​ನ ಹೋಲ್ಕರ್​ ಮೈದಾನದಲ್ಲಿ 2ನೇ ಏಕದಿನ ಪಂದ್ಯ ನಡೆಯಲಿದೆ. ಆದರೆ ಈ ಮಧ್ಯೆ ಶುಭ್ಮನ್ ಗಿಲ್ ಮತ್ತು ಸಾರಾ ತೆಂಡೂಲ್ಕರ್ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ.


ಬ್ಯಾಟಿಂಗ್ ದಿಗ್ಗಜ ಸಚಿನ್​ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ಮತ್ತು ಭಾರತ ಕ್ರಿಕೆಟ್ ತಂಡದ ಯುವ ಆಟಗಾರ ಶುಭ್ಮನ್​ ಗಿಲ್ ಇಬ್ಬರು ಗುಟ್ಟಾಗಿ ಡೇಟಿಂಗ್ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿತ್ತು, ಆದರೆ ಈ ವಿಚಾರದ ಬಗ್ಗೆ ಇಬ್ಬರೂ ಕೂಡ ಇದುವರೆಗೆ ಮೌನ ವಹಿಸಿಯೇ ಇದ್ದರು.


ಆದರೆ ಇದೀಗ ಸಾರಾ ಮಾಡಿದ ಅದೊಂದು ಟ್ವೀಟ್ ಭಾರೀ ವೈರಲ್ ಆಗುತ್ತಿದ್ದು, ಪರೋಕ್ಷವಾಗಿ ತಮ್ಮ ಪ್ರೀತಿ ನಿಜ ಎಂದು ಒಪ್ಪಿಕೊಂಡಂತಾಗಿದೆ. ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಶುಭ್ಮನ್ ಗಿಲ್ ಅದ್ಭುತವಾಗಿ ಬ್ಯಾಟಿಂಗ್ ಮಾಡಿದ್ದರು. 63 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್ ಸಹಿತ 74 ರನ್​ ಬಾರಿಸಿದ ಗಿಲ್, ಟೀಂ ಇಂಡಿಯಾದ ವಿಜಯದಲ್ಲಿ ಬಹುಪಾಲು ತಮ್ಮದಾಗಿಸಿಕೊಂಡಿದ್ದರು.  


ಇದಾದ ಬಳಿಕ ಗಿಲ್ ಅದ್ಭುತ ಆಟಕ್ಕೆ ಮೆಚ್ಚುಗೆ ಸೂಚಿಸಿದ್ದ, ಸಾರಾ ತೆಂಡೂಲ್ಕರ್ ತಮ್ಮ ಅಧಿಕೃತ ಟ್ವಿಟರ್​ ಖಾತೆಯಲ್ಲಿ “ಶುಭ್ಮನ್ ಗಿಲ್ ಚೆನ್ನಾಗಿ ಆಡಿದೆ” ಎಂದು ಆತನ ಹೆಸರಿನ ಮುಂದೆ ಚಪ್ಪಾಳೆ ತಟ್ಟುವ ಎಮೋಜಿ ಹಾಕಿದ್ದಾರೆ.


ಇದನ್ನೂ ಓದಿ: ಏಷ್ಯನ್ ಗೇಮ್ಸ್ 2023ರಲ್ಲಿ ಭಾರತ ಶುಭಾರಂಭ: ಟೀಂ ಇಂಡಿಯಾ ಬತ್ತಳಿಕೆಗೆ 4 ಪದಕಗಳು


ಆದರೆ ಈ ಪಂದ್ಯದಲ್ಲಿ ಕೇವಲ ಗಿಲ್ ಮಾತ್ರವಲ್ಲ, ಋತುರಾಜ್ ಗಾಯಕ್ವಾಡ್, ಸೂರ್ಯಕುಮಾರ್ ಯಾದವ್, ಕೆಎಲ್ ರಾಹುಲ್ ಕೂಡ ಅರ್ಧಶತಕ ಸಿಡಿಸಿ ಮಿಂಚಿದ್ದರು. ಆದರೆ ಅವರ ಬಗ್ಗೆ ತುಟಿ ಬಿಚ್ಚದ ಸಾರಾ ಕೇವಲ ಗಿಲ್ ಬಗ್ಗೆ ಮಾತ್ರ ಬರೆದುಕೊಂಡಿರುವುದು, ತಮ್ಮಿಬ್ಬರ ನಡುವೆ ಪ್ರೀತಿ ಇದೆ ಎಂಬುದನ್ನು ಪರೋಕ್ಷವಾಗಿ ಒಪ್ಪಿಕೊಂಡಂತಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ