Sarfaraz Khan Double Century: ಬಾಂಗ್ಲಾದೇಶ ವಿರುದ್ಧದ ಭಾರತ ತಂಡದ ಪ್ಲೇಯಿಂಗ್ ಇಲೆವೆನ್‌ನಲ್ಲಿ ಸರ್ಫರಾಜ್ ಖಾನ್‌ಗೆ ಅವಕಾಶ ಸಿಗಲಿಲ್ಲ. ಇದೀಗ ಇರಾನಿ ಕಪ್‌ನಲ್ಲಿ ಆ ಕೊರತೆಯನ್ನು ಸರಿದೂಗಿಸಿಕೊಂಡು ಬಲಿಷ್ಠ ಇನ್ನಿಂಗ್ಸ್ ಆಡಿದ್ದಾರೆ. ಮುಂಬೈ ತಂಡದ ದೊಡ್ಡ ಮ್ಯಾಚ್ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಪ್ರತಿವರ್ಷ ಇರಾನಿ ಕಪ್ ಪಂದ್ಯವು ರಣಜಿ ಟ್ರೋಫಿ ವಿಜೇತ ಮತ್ತು ದೇಶದ ಉಳಿದ ಆಟಗಾರರನ್ನು ಒಳಗೊಂಡಿರುವ ತಂಡ (ರೆಸ್ಟ್ ಆಫ್ ಇಂಡಿಯಾ)ಗಳ ನಡುವೆ ನಡೆಯುತ್ತದೆ. ಇರಾನಿ ಕಪ್ 2024ರಲ್ಲಿ ಸರ್ಫರಾಜ್ ಅವರ ದ್ವಿಶತಕದಿಂದಾ ಮುಂಬೈ 9 ವಿಕೆಟ್ ನಷ್ಟಕ್ಕೆ 536 ರನ್ ಗಳಿಸಿದೆ. 


COMMERCIAL BREAK
SCROLL TO CONTINUE READING

ಇರಾನಿ ಕಪ್‌ನಲ್ಲಿ ಮುಂಬೈ ಪರ ದ್ವಿಶತಕ ಸಿಡಿಸಿದ ಮೊದಲ ಆಟಗಾರ


ಇರಾನಿ ಕಪ್‌ನಲ್ಲಿ ರೆಸ್ಟ್ ಆಫ್ ಇಂಡಿಯಾ ವಿರುದ್ಧ ಮುಂಬೈ ಉತ್ತಮ ಆರಂಭವನ್ನು ಹೊಂದಿರಲಿಲ್ಲ. ಪೃಥ್ವಿ ಶಾ ಮತ್ತು ಆಯುಷ್ ಮ್ಹಾತ್ರೆ ಬೇಗನೆ ಪೆವಿಲಿಯನ್‌ಗೆ ಮರಳಿದರು. ಇದಾದ ಬಳಿಕ ಹಾರ್ದಿಕ್ ತಮೋರ್ ಖಾತೆ ತೆರೆಯದೆ ಔಟಾದರು. ನಂತರ ನಾಯಕ ಅಜಿಂಕ್ಯ ರಹಾನೆ ಮತ್ತು ಸರ್ಫರಾಜ್ ಖಾನ್ ಅತ್ಯುತ್ತಮ ಜೊತೆಯಾಟ ನಡೆಸಿದರು. ರಹಾನೆ 97 ರನ್ ಗಳಿಸಿ ಔಟಾದರು ಮತ್ತು ಕೇವಲ 3 ರನ್‌ಗಳಿಂದ ತಮ್ಮ ಶತಕವನ್ನು ತಪ್ಪಿಸಿಕೊಂಡರು. ಆದರೆ ಸರ್ಫರಾಜ್ ಒಂದು ತುದಿಯಿಂದ ರನ್ ಗಳಿಸುವುದನ್ನು ಮುಂದುವರೆಸಿದರು ಮತ್ತು ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶಿಸಿದರು. ಇಲ್ಲಿಯವರೆಗೆ ಅವರು 276 ಎಸೆತಗಳಲ್ಲಿ 24 ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ಗಳನ್ನು ಒಳಗೊಂಡಂತೆ ಅಜೇಯ 221 ರನ್ ಗಳಿಸಿದ್ದಾರೆ. ಇರಾನಿ ಕಪ್‌ನಲ್ಲಿ ಮುಂಬೈ ತಂಡದ ಪರ ದ್ವಿಶತಕ ಸಿಡಿಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಸರ್ಫರಾಜ್ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ಇರಾನಿ ಕಪ್‌ನಲ್ಲಿ ಯಾವುದೇ ಮುಂಬೈ ಆಟಗಾರ ದ್ವಿಶತಕ ಸಿಡಿಸಿರಲಿಲ್ಲ. 


ಕ್ರಿಕೆಟ್ ಚರಿತ್ರೆಯ ಶ್ರೇಷ್ಠ ದಾಖಲೆ ಸರ್ಫರಾಜ್ ಹೆಸರಿಗೆ... ಸಚಿನ್, ರೋಹಿತ್‌ ಕೂಡ ಮುಟ್ಟಲು ಸಾಧ್ಯವಾಗದ ಶ್ರೇಷ್ಠ ದಾಖಲೆಯಿದು! 65 ವರ್ಷಗಳಲ್ಲಿ ಇದೇ ಮೊದಲು


ಇರಾನಿ ಕಪ್‌ನಲ್ಲಿ ಐದನೇ ಗರಿಷ್ಠ ಸ್ಕೋರ್!  


ಸರ್ಫರಾಜ್ ಖಾನ್ ಇರಾನಿ ಕಪ್ ಪಂದ್ಯದಲ್ಲಿ 221 ರನ್ ಗಳಿಸುವ ಮೂಲಕ ಐದನೇ ಅತಿ ಹೆಚ್ಚು ಸ್ಕೋರರ್ ಎನಿಸಿಕೊಂಡಿದ್ದಾರೆ. ಅವರು ಅನುಭವಿ ರವಿಶಾಸ್ತ್ರಿ ಮತ್ತು ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಅವರನ್ನು ಹಿಂದಿಕ್ಕಿದ್ದಾರೆ. ಇರಾನಿ ಕಪ್‌ನಲ್ಲಿ ಶಾಸ್ತ್ರಿ 1990ರಲ್ಲಿ ರೆಸ್ಟ್ ಆಫ್ ಇಂಡಿಯಾ ಪರ 217 ರನ್‌ಗಳ ಇನ್ನಿಂಗ್ಸ್ ಆಡಿದ್ದರು ಮತ್ತು 2023ರಲ್ಲಿ ರೆಸ್ಟ್ ಆಫ್ ಇಂಡಿಯಾ ಪರ ಯಶಸ್ವಿ ಜೈಸ್ವಾಲ್ 213 ರನ್‌ಗಳ ಇನ್ನಿಂಗ್ಸ್ ಆಡಿದ್ದರು. ಈಗ 3ನೇ ದಿನದಲ್ಲಿ ಸರ್ಫರಾಜ್ ಹೆಚ್ಚು ರನ್ ಗಳಿಸಿದರೆ, ಅವರು ಪ್ರವೀಣ್ ಆಮ್ರೆ ಮತ್ತು ಸುರೇಂದ್ರ ಅಮರನಾಥ್‌ರನ್ನು ಹಿಂದಿಕ್ಕಿಬಹುದು. ಇರಾನಿ ಕಪ್‌ನಲ್ಲಿ ಅತಿ ದೊಡ್ಡ ಇನ್ನಿಂಗ್ಸ್ ಆಡಿದ ದಾಖಲೆಯನ್ನು ವಾಸಿಂ ಜಾಫರ್ ಹೊಂದಿದ್ದಾರೆ. ಅವರು 2018ರಲ್ಲಿ ರೆಸ್ಟ್ ಆಫ್ ಇಂಡಿಯಾ ಪರ 286 ರನ್‌ಗಳ ಇನ್ನಿಂಗ್ಸ್‌ ಆಡಿದ್ದರು.


ಇರಾನಿ ಕಪ್‌ನಲ್ಲಿ ಅತಿಹೆಚ್ಚು ಸ್ಕೋರ್‌ ಮಾಡಿದ ಬ್ಯಾಟ್ಸ್‌ಮನ್‌ಗಳು


  • ವಾಸಿಂ ಜಾಫರ್- 286 ರನ್

  • ಮುರಳಿ ವಿಜಯ್- 266 ರನ್

  • ಪ್ರವೀಣ್ ಆಮ್ರೆ- 246 ರನ್

  • ಸುರೇಂದ್ರ ಅಮರನಾಥ್- 235 ರನ್

  • ಸರ್ಫರಾಜ್ ಖಾನ್- 221 ರನ್

  • ರವಿಶಾಸ್ತ್ರಿ- 217 ರನ್

  • ಯಶಸ್ವಿ ಜೈಸ್ವಾಲ್- 213 ರನ್


ಇದನ್ನೂ ಓದಿ: ಭಾರತದ ಜೊತೆಗಿನ ಪ್ರತಿ ಪಂದ್ಯವೂ ಫಿಕ್ಸ್...‌ ಮ್ಯಾಚ್‌ ಫಿಕ್ಸಿಂಗ್‌ ಆರೋಪ ಹೊರಿಸಿದ ಪಾಕ್‌ ಆಟಗಾರ! ಆತ ಯಾರು ಗೊತ್ತಾ?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.