T20 World Cup 2024: ಸೌರಭ್ ನೇತ್ರವಾಲ್ಕರ್, ಈ ಹೆಸರು ಕಳೆದ ಕೆಲ ದಿನಗಳಿಂದ ಭಾರೀ ಸುದ್ದಿಯಾಗುತ್ತಿದೆ. ಆದ್ರೆ ಟಿ20 ವಿಶ್ವಕಪ್‌’ನಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದ ನಂತರ ಈ ಆಟಗಾರ ರಾತ್ರೋರಾತ್ರಿ ಸ್ಟಾರ್ ಆಗಿ ಹೊರಹೊಮ್ಮಿದರು. ಅಷ್ಟೇ ಅಲ್ಲ, ರೋಹಿತ್-ಕೊಹ್ಲಿ ವಿಕೆಟ್ ಕಬಳಿಸುವ ಮೂಲಕ ಭಾರತೀಯ ಪ್ರತಿಭೆ ತನ್ನ ಅದ್ಭುತ ಪ್ರದರ್ಶನವನ್ನು ತೋರಿಸಿದರು.


COMMERCIAL BREAK
SCROLL TO CONTINUE READING

ಅಂದಹಾಗೆ ಸೌರಭ್ ಸಾಫ್ಟ್’ವೇರ್ ಇಂಜಿನಿಯರ್. ಹೀಗಿರುವಾಗ ತನ್ನ ಕೆಲಸ ಮತ್ತು ಕ್ರಿಕೆಟ್ ಅನ್ನು ಹೇಗೆ ನಿಭಾಯಿಸುತ್ತಾರೆ ಎಂಬುದನ್ನು ಅವರ ಸಹೋದರಿ ನಿಧಿ ವಿವರಿಸಿದ್ದಾರೆ.


ಇದನ್ನೂ ಓದಿ: ವಿಶ್ವದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ ಕ್ರಿಕೆಟಿಗ ಇವರೇ: ಕೊಹ್ಲಿ, ರೋಹಿತ್’ರನ್ನೂ ಮೀರಿಸಿದ ಈತ ಈ ವರ್ಷವೇ ಘೋಷಿಸಲಿದ್ದಾನೆ ನಿವೃತ್ತಿ!


ಸೌರಭ್ ನೇತ್ರವಾಲ್ಕರ್ ಹುಟ್ಟಿದ್ದು ಮುಂಬೈನಲ್ಲಿ. ಸದ್ಯ ಅವರು ಅಮೆರಿಕದಲ್ಲಿ ದುಡಿಯುತ್ತಿದ್ದು, ಅದೇ ದೇಶದ ಪರವಾಗಿ ಕ್ರಿಕೆಟ್ ಆಡುತ್ತಿದ್ದಾರೆ. ನೇತ್ರವಲ್ಕರ್ ಅಮೆರಿಕದ ಆಟಗಾರರಲ್ಲದೆ, ಒರಾಕಲ್ ಕಂಪನಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಹುದ್ದೆಯಲ್ಲಿದ್ದಾರೆ. ಕಂಪನಿಯು ಅವನಿಗೆ ಎಲ್ಲಿ ಬೇಕಾದರೂ ಕೆಲಸ ಮಾಡುವ ಸ್ವಾತಂತ್ರ್ಯವನ್ನು ನೀಡಿದ್ದು, ಈ ಹಿನ್ನೆಲೆಯಲ್ಲಿ ಕೆಲಸ ಮತ್ತು ಕ್ರೀಡೆಯನ್ನು ನಿಭಾಯಿಸಲು ಸುಲಭವಾಗುತ್ತದೆ. ಕ್ರೀಡೆಗೆ ಸಮಯ ನೀಡಿದ ಬಳಿಕ ಕೆಲಸವನ್ನು ಹೋಟೆಲ್‌’ನಿಂದ ನಿರ್ವಹಿಸುತ್ತಾರೆ ಎಂದು ಅವರ ಸಹೋದರಿ ಹೇಳಿದ್ದಾರೆ.


ಸೌರಭ್ ಅವರ ಸಹೋದರಿ ನಿಧಿ ಮಾತನಾಡಿದ್ದು, “ಕ್ರಿಕೆಟ್ ಆಡದೇ ಇದ್ದಾಗ ತನ್ನ ಕೆಲಸದ ಮೇಲೆ ಸಂಪೂರ್ಣ ಗಮನಹರಿಸಬೇಕು ಎಂಬುದು ಅವರಿಗೆ ಗೊತ್ತು. ಅವನು ಎಲ್ಲಿಗೆ ಹೋದರೂ, ತನ್ನ ಲ್ಯಾಪ್ಟಾಪ್ ಅನ್ನು ತೆಗೆದುಕೊಂಡು ಹೋಗುತ್ತಾನೆ. ಭಾರತಕ್ಕೆ ಬಂದರೂ ಲ್ಯಾಪ್ ಟಾಪ್ ತರುತ್ತಾನೆ” ಎಂದಿದ್ದಾರೆ


ಇದನ್ನೂ ಓದಿ: ಈ ಯುವತಿ ಕೊರಳಲ್ಲಿದೆ ವಿರಾಟ್ ಕೊಹ್ಲಿ ಪೆಂಡೆಂಟ್! ಅನುಷ್ಕಾಗಿಂತ ಸದ್ದು ಮಾಡ್ತಿರೋ ಈ 'ಗರ್ಲ್' ಯಾರು ಗೊತ್ತಾ?


ಅಂದಹಾಗೆ ಸೌರಭ್ ಭಾರತದ ಪರ ಅಂಡರ್-19 ವಿಶ್ವಕಪ್‌ ಆಡಿದ್ದಾರೆ. ಆದರೆ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಅಮೆರಿಕಕ್ಕೆ ತೆರಳಿದ ಅವರು, ಅಲ್ಲೇ ನೆಲೆಸಿದ್ದಾರೆ. ಇನ್ನು ಅವರ ಕುಟುಂಬ ಮುಂಬೈನಲ್ಲಿ ನೆಲೆಸಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.