13 ವರ್ಷಗಳಿಂದ Team Indiaದಲ್ಲಿ ಒಂದೇ ಒಂದು ಅವಕಾಶ ಪಡೆಯದ ಈತ ಇನ್ಮುಂದೆ ಕ್ಯಾಪ್ಟನ್!
Team India Cricket News: ಸೌರಭ್ ಅಕ್ಟೋಬರ್ 20, 2010 ರಂದು ಆಸ್ಟ್ರೇಲಿಯಾ ವಿರುದ್ಧ ತಮ್ಮ ODI ಪಾದಾರ್ಪಣೆ ಮಾಡಿದ್ದಾರೆ. ಚೊಚ್ಚಲ ಪಂದ್ಯ ಸೌರಭ್ ಅವರಿಗೆ ಸ್ಮರಣೀಯವಾಗಿತ್ತು ಎಂದು ಹೇಳಬಹುದು.
Team India Cricket News: ಜುಲೈ 24 ರಿಂದ ಆಗಸ್ಟ್ 3 ರವರೆಗೆ ಪುದುಚೇರಿಯಲ್ಲಿ ನಡೆಯಲಿರುವ ದೇವಧರ್ ಟ್ರೋಫಿ-2023 ಅಂತರ ವಲಯ ಏಕದಿನ ಕ್ರಿಕೆಟ್ ಪಂದ್ಯಾವಳಿಯಲ್ಲಿ ಜಾರ್ಖಂಡ್ ನ ಸೌರಭ್ ತಿವಾರಿ ಪೂರ್ವ ವಲಯವನ್ನು ಮುನ್ನಡೆಸಲಿದ್ದಾರೆ. ಬಂಗಾಳದ ಬ್ಯಾಟ್ಸ್‌ಮನ್ ಅಭಿಮನ್ಯು ಈಶ್ವರನ್ ಅವರನ್ನು ತಂಡದ ಉಪನಾಯಕರನ್ನಾಗಿ ಮಾಡಲಾಗಿದೆ. ರಿಯಾನ್ ಪರಾಗ್, ಶಹಬಾಜ್ ಅಹ್ಮದ್, ಆಕಾಶ್ ದೀಪ್ ಅವರಂತಹ ಆಟಗಾರರು ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ನಾಲ್ಕು ವರ್ಷಗಳ ನಂತರ ದೇವಧರ್ ಟ್ರೋಫಿ ಆಯೋಜಿಸಲಾಗುತ್ತಿದೆ. ಪೂರ್ವ ವಲಯ ತಂಡ ಜುಲೈ 24 ರಂದು ಕೇಂದ್ರ ವಲಯ ವಿರುದ್ಧ ಅಭಿಯಾನ ಆರಂಭಿಸಲಿದೆ.
ಇದನ್ನೂ ಓದಿ: ಬರೋಬ್ಬರಿ 91 ವರ್ಷಗಳ ಬಳಿಕ ಟೆಸ್ಟ್’ನಲ್ಲಿ ಈ ಶ್ರೇಷ್ಠ ದಾಖಲೆ ಬರೆದ Team India! ಕೆರಿಬಿಯನ್ ನಾಡಲ್ಲಿ ‘ಗತವೈಭವ’
ಸೌರಭ್ ಅಕ್ಟೋಬರ್ 20, 2010 ರಂದು ಆಸ್ಟ್ರೇಲಿಯಾ ವಿರುದ್ಧ ತಮ್ಮ ODI ಪಾದಾರ್ಪಣೆ ಮಾಡಿದ್ದಾರೆ. ಚೊಚ್ಚಲ ಪಂದ್ಯ ಸೌರಭ್ ಅವರಿಗೆ ಸ್ಮರಣೀಯವಾಗಿತ್ತು ಎಂದು ಹೇಳಬಹುದು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ 3 ವಿಕೆಟ್ ಗೆ 289 ರನ್ ಗಳಿಸಿತ್ತು. ಮೈಕಲ್ ಕ್ಲಾರ್ಕ್ ಔಟಾಗದೆ 111 ರನ್ ಗಳಿಸಿದ್ದರು. ಸೌರಭ್ 17 ಎಸೆತಗಳಲ್ಲಿ ಎರಡು ಅದ್ಭುತ ಬೌಂಡರಿಗಳ ಸಹಾಯದಿಂದ 12 ರನ್ ಗಳಿಸಿದರು. ತಿವಾರಿ ಬ್ಯಾಟಿಂಗ್ ಗೆ ಬಂದ ಸಮಯದಲ್ಲಿ, ಪಂದ್ಯದಲ್ಲಿ ಭಾರತದ ಸ್ಥಾನವು ತುಂಬಾ ನಿರ್ಣಾಯಕವಾಗಿತ್ತು. ಆದರೆ ಸೌರಭ್ ನಿರಾಸೆ ಮಾಡದೆ ಸುರೇಶ್ ರೈನಾ ಜೊತೆಗೂಡಿ ಭಾರತವನ್ನು ಗೆಲ್ಲಿಸಿದರು.
ಸೌರಭ್ ತಿವಾರಿ ಟೀಂ ಇಂಡಿಯಾ ಪರ ಇದುವರೆಗೆ ಒಟ್ಟು 3 ಪಂದ್ಯಗಳನ್ನಾಡಿದ್ದಾರೆ. ಈ ಮೂರು ಪಂದ್ಯಗಳಲ್ಲಿ ಯಾವುದೇ ಬೌಲರ್ ಅವರನ್ನು ಔಟ್ ಮಾಡಲು ಸಾಧ್ಯವಾಗಲಿಲ್ಲ. ಸೌರಭ್ ತಿವಾರಿ 2010 ರಿಂದ ಟೀಮ್ ಇಂಡಿಯಾದಿಂದ ಹೊರಗಿದ್ದರೂ. ಈ 3 ಏಕದಿನ ಪಂದ್ಯಗಳಲ್ಲಿ ಸೌರಭ್ ತಿವಾರಿ 49 ರನ್ ಗಳಿಸಿದ್ದರು. ಅಷ್ಟೇ ಅಲ್ಲ, ಐಪಿಎಲ್ ನಲ್ಲಿ 93 ಪಂದ್ಯಗಳನ್ನು ಆಡಿದ್ದಾರೆ. ಈ ಪಂದ್ಯಗಳಲ್ಲಿ ಅವರು 1494 ರನ್ ಗಳಿಸಿದ್ದಾರೆ.
ಇದನ್ನೂ ಓದಿ: 44 ವರ್ಷದಿಂದ Team India ಹಂಬಲಿಸುತ್ತಿದ್ದ ಆ ಘಳಿಗೆಯನ್ನು ಒಂದೇ ಹೊಡೆತಕ್ಕೆ ಈಡೇರಿಸಿದ ರೋಹಿತ್-ಜೈಸ್ವಾಲ್!
ದೇವಧರ್ ಟ್ರೋಫಿಗಾಗಿ ಪೂರ್ವ ವಲಯ ತಂಡ:
ಸೌರಭ್ ತಿವಾರಿ (ನಾಯಕ), ಅಭಿಮನ್ಯು ಈಶ್ವರನ್, ಸುದೀಪ್ ಘರಾಮಿ, ಸುಭ್ರಾಂಶು ಸೇನಾಪತಿ, ರಿಷಭ್ ದಾಸ್, ಉತ್ಕರ್ಷ್ ಸಿಂಗ್, ಕುಮಾರ್ ಕುಶಾಗ್ರಾ, ಅಭಿಷೇಕ್ ಪೊರೆಲ್, ವಿರಾಟ್ ಸಿಂಗ್, ರಿಯಾನ್ ಪರಾಗ್, ಶಹಬಾಜ್ ಅಹ್ಮದ್, ಅವಿನಾವ್ ಚೌಧರಿ, ಮಣಿಶಂಕರ್ ಮುರಾ ಸಿಂಗ್, ಮುಕ್ತಾರ್ ಹುಸ್ಸಾನ್.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ