ʼದೇಶೀಯ ಕ್ರಿಕೆಟ್ ಅನ್ನು ನಿರ್ಲಕ್ಷಿಸಿದವರು ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆʼ ಇಶಾನ್ ಕಿಶನ್ ಗೆ ಜೈ ಶಾ ಎಚ್ಚರಿಕೆ!
Jay shah on Ishan Kishan: ಭಾರತ ಕ್ರಿಕೆಟ್ ತಂಡದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಸದ್ಯದ ಸುದ್ದಿಯಲ್ಲಿದ್ದಾರೆ. ಅವರು ತಮ್ಮ ಸ್ವಂತ ಇಚ್ಛೆಯಿಂದಲೇ ಕ್ರಿಕೆಟ್‌ನಿಂದ ವಿರಾಮ ತೆಗೆದುಕೊಂಡಿದ್ದರು.
Jay shah: ಭಾರತ ಕ್ರಿಕೆಟ್ ತಂಡದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಸದ್ಯದ ಸುದ್ದಿಯಲ್ಲಿದ್ದಾರೆ. ಅವರು ತಮ್ಮ ಸ್ವಂತ ಇಚ್ಛೆಯಿಂದಲೇ ಕ್ರಿಕೆಟ್‌ನಿಂದ ವಿರಾಮ ತೆಗೆದುಕೊಂಡಿದ್ದರು. ಇದರ ನಂತರ ಅವರು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ), ತಂಡದ ನಿರ್ವಹಣೆ, ತರಬೇತುದಾರರು ಮತ್ತು ಅವರ ದೇಶೀಯ ರಣಜಿ ತಂಡಕ್ಕೆ ಯಾವುದೇ ಅಪ್‌ಡೇಟ್‌ನ್ನು ನೀಡಲಿಲ್ಲ.
ಇಶಾನ್ ಪ್ಲಾನ್ ಏನು ಅಂತ ಯಾರಿಗೂ ಗೊತ್ತಿಲ್ಲ. ಆತಿಥೇಯ ತಂಡಕ್ಕಾಗಿ ಅವರು ರಣಜಿ ಟ್ರೋಫಿಯಲ್ಲಿ ಒಂದೇ ಒಂದು ಪಂದ್ಯವನ್ನು ಆಡಲಿಲ್ಲ. ಇಶಾನ್ ವರ್ತನೆಗೆ ಬಿಸಿಸಿಐ ಮತ್ತು ಟೀಮ್ ಮ್ಯಾನೇಜ್‌ಮೆಂಟ್ ತುಂಬಾ ಕೋಪಗೊಂಡಿರುವಂತಿದೆ.
ಇದನ್ನೂ ಓದಿ-IND vs ENG: ರಾಜ್’ಕೋಟ್’ನಲ್ಲಿ ಯಶಸ್ವಿ ಬ್ಯಾಟಿಂಗ್ ಅಬ್ಬರ… ಮತ್ತೊಂದು ಟೆಸ್ಟ್ ಶತಕ ಸಿಡಿಸಿದ ಜೈಸ್ವಾಲ್
ಮತ್ತೊಮ್ಮೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಎಲ್ಲಾ ಆಟಗಾರರಿಗೆ ಪತ್ರ ಬರೆದು ದೇಶೀಯ ಕ್ರಿಕೆಟ್ ಬಹಳ ಮುಖ್ಯ ಎಂದು ವಿವರಿಸಿದ್ದಾರೆ. ಒಬ್ಬ ಆಟಗಾರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಗೆ ಆದ್ಯತೆ ನೀಡಿ ದೇಶೀಯ ಕ್ರಿಕೆಟ್ ಅನ್ನು ನಿರ್ಲಕ್ಷಿಸಿದರೆ ಅದು ಅವರಿಗೆ ಒಳ್ಳೆಯದಲ್ಲ.. ಅದರ ಪರಿಣಾಮಗಳು ಕೆಟ್ಟದಾಗಿರುತ್ತವೆ ಎಂದಿದ್ದಾರೆ..
ದೇಶೀಯ ಕ್ರಿಕೆಟ್ ಆಡದ ಟಾಪ್ ಕ್ರಿಕೆಟಿಗರಿಗೆ ಷಾ ಪತ್ರ ಬರೆದಿದ್ದು, ರಾಷ್ಟ್ರೀಯ ತಂಡದಲ್ಲಿ ಆಯ್ಕೆ ಮಾಡಲು ದೇಶೀಯ ಕ್ರಿಕೆಟ್ ಪ್ರಮುಖ ಮಾನದಂಡವಾಗಿದೆ ಮತ್ತು ಅದರಲ್ಲಿ ಭಾಗವಹಿಸಲು ವಿಫಲವಾದರೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಇದನ್ನೂ ಓದಿ-ಅನುಷ್ಕಾಗೂ ಮೊದಲು ಈ ನಟಿಯರ ಜೊತೆ ಡೇಟಿಂಗ್ ಮಾಡಿದ್ರು ಕೊಹ್ಲಿ! ಅದ್ರಲ್ಲಿ ಒಬ್ಬಳು ಕನ್ನಡದ ಹೆಸರಾಂತ ನಟಿ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ