ನವದೆಹಲಿ: ಟೂರ್ನಿ ಪ್ರಾರಂಭವಾಗುವ ಮೊದಲು ವಿಂಬಲ್ಡನ್‌ನ ಕೋರ್ಟ್ ನ್ನು ತನ್ನ ರಾಕೇಟ್‌ನಿಂದ ಹಾನಿಗೊಳಿಸಿದ್ದಕ್ಕಾಗಿ ಸೆರೆನಾ ವಿಲಿಯಮ್ಸ್‌ಗೆ ಆಲ್ ಇಂಗ್ಲೆಂಡ್ ಕ್ಲಬ್ 10,000 ಡಾಲರ್ ದಂಡ ವಿಧಿಸಿದೆ ಎಂದು ಮಾಧ್ಯಮ ವರದಿ ಮಾಡಿದೆ.


COMMERCIAL BREAK
SCROLL TO CONTINUE READING

ಮಂಗಳವಾರ ನಡೆದ ಕ್ವಾರ್ಟರ್ ಫೈನಲ್‌ನಲ್ಲಿ ಸಹ ಆಟಗಾರ ಅಮೆರಿಕನ್ ಅಲಿಸನ್ ರಿಸ್ಕೆ ಅವರನ್ನು ಎದುರಿಸುತ್ತಿರುವ ವಿಲಿಯಮ್ಸ್, ತಮ್ಮ 24 ನೇ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಯನ್ನು ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ, ಆದರೆ ಈಗ ಅವರು ಇನ್ನು ದಂಡದ ಬಗ್ಗೆ ಪ್ರತಿಕ್ರಿಯಿಸಿಲ್ಲ ಎನ್ನಲಾಗಿದೆ.


ಟೆನಿಸ್ ಸ್ಯಾಂಡ್‌ಗ್ರೆನ್ ವಿರುದ್ಧದ ಮೂರನೇ ಸುತ್ತಿನ ಸೋಲಿನ ಸಂದರ್ಭದಲ್ಲಿ ಫ್ಯಾಬಿಯೊ ಫೊಗ್ನಿನಿಗೆ ತಮ್ಮ ಅಸಭ್ಯ ವರ್ತನೆಗಾಗಿ $ 3,000 ದಂಡ ವಿಧಿಸಲಾಯಿತು. ನಿಕ್ ಕಿರ್ಗಿಯೊಸ್ ಅವರ ಮೊದಲ ಮತ್ತು ಎರಡನೇ ಸುತ್ತುಗಳಲ್ಲಿ ಪ್ರತ್ಯೇಕ ಘಟನೆಗಳಿಗಾಗಿ ಅಸಭ್ಯ ವರ್ತನೆಗಾಗಿ ಒಟ್ಟು 8,000 ದಂಡವನ್ನು ವಿಧಿಸಲಾಯಿತು ಎನ್ನಲಾಗಿದೆ.