Indian Premier League 2024: ಎರಡು ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಚಾಂಪಿಯನ್ ಆಗಿರುವ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಪ್ರಸ್ತುತ ನಡೆಯುತ್ತಿರುವ ಐಪಿಎಲ್ 2024 ರ ಋತುವಿನಲ್ಲಿ ಉತ್ತಮ ಆರಂಭ ಕಂಡಿದೆ. ಈ ತಂಡ ಇದುವರೆಗೂ ಆಡಿದ ಮೂರು ಪಂದ್ಯಗಳಲ್ಲಿ ಮೂರರಲ್ಲಿ ಗೆಲುವು ಸಾಧಿಸಿದೆ. ಹ್ಯಾಟ್ರಿಕ್ ಗೆಲುವು ಸಾಧಿಸಿರುವ ಕೆಕೆಆರ್ ಎಪ್ರಿಲ್ 3ರಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ 106 ರನ್ ಗಳ ಭರ್ಜರಿ ಜಯ ಸಾಧಿಸಿದೆ (IPL 2024 News In Kannada).


COMMERCIAL BREAK
SCROLL TO CONTINUE READING

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೆಕೆಆರ್ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 272 ರನ್ ಗಳಿಸಿತ್ತು, ಇದು ಐಪಿಎಲ್ ಇತಿಹಾಸದಲ್ಲಿ ಎರಡನೇ ಗರಿಷ್ಠ ಸ್ಕೋರ್ ಆಗಿದೆ. ಡೆಲ್ಲಿ ವಿರುದ್ಧದ ಈ ಗೆಲುವಿನ ನಂತರ ಕೆಕೆಆರ್ ಪಾಯಿಂಟ್ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ತಲುಪಿದೆ (Shah Rukh Khan Encouraging KKR Team with his inspiring words).


ಮತ್ತೊಂದೆಡೆ, ಇದೀಗ ತಂಡದ ಗೆಲುವಿನ ಬಗ್ಗೆ ಫ್ರಾಂಚೈಸಿ ಸಹ-ಮಾಲೀಕ ಮತ್ತು ಬಾಲಿವುಡ್ ನಟ ಶಾರುಖ್ ಖಾನ್ ಅವರ ವೀಡಿಯೊ ಇಂಟರ್ನೆಟ್‌ನಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಶಾರುಖ್ ಕೆಕೆಆರ್ ತನ್ನಿಂದಾಗಿ ನಿರಂತರವಾಗಿ ಗೆಲ್ಲುತ್ತಿದೆ ಎಂದು ಹೇಳುತ್ತಿದ್ದಾರೆ.


ಇದನ್ನೂ ಓದಿ-Viral News: ತನ್ನ ಋತುಚಕ್ರದ ರಕ್ತ ಮಾರಾಟ ಮಾಡಿ ಹಣಗಳಿಕೆ ಮಾಡುತ್ತಿದ್ದಾಳೆ ಈ ಯುವತಿ, ಅದರ ಲಾಭವನ್ನು ಹೇಳುತ್ತಿದ್ದಾಳೆ!


ಹಾಗಾದರೆ ಕೆಕೆಆರ್ ನಿರಂತರವಾಗಿ ಪಂದ್ಯಗಳನ್ನು ಗೆಲ್ಲಲು ಶಾರುಖ್ ಕಾರಣವೇ?
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದ ನಂತರ, KKR ತನ್ನ ಅಧಿಕೃತ X ಖಾತೆಯಲ್ಲಿ ಡ್ರೆಸ್ಸಿಂಗ್ ರೂಮ್ ವೀಡಿಯೊವನ್ನು ಹಂಚಿಕೊಂಡಿದೆ. ಈ ವೀಡಿಯೊದಲ್ಲಿ ಶಾರುಖ್ ಹೇಳುತ್ತಾರೆ- ದೇವರು ನಿಮ್ಮೆಲ್ಲರಿಗೆ ಒಳ್ಳೆಯದನ್ನು ಮಾಡಲಿ. ವರುಣ್ (ಚಕ್ರವರ್ತಿ) ಕ್ಯಾಚ್‌ಗಳನ್ನು ಹಿಡಿಯುವುದು ನೋಡಲು ಸಂತೋಷವಾಗುತ್ತದೆ. ಸುನಿಲ್ (ನಾರಾಯಣ) ತುಂಬಾ ಕಷ್ಟಪಟ್ಟು ಓಡುವುದು ನೋಡಿ ಸಂತೋಷವಾಗುತಿದೆ. ನೀವೆಲ್ಲರೂ ನಗುತ್ತಿರುವ ಮತ್ತು ಸಂತೋಷವಾಗಿರುವುದನ್ನು ನೋಡಲು ಸಂತೋಷವಾಗಿದೆ. ಆರೋಗ್ಯದಿಂದ ಇರಿ ಎಂದು ಹೇಳಿದ್ದಾರೆ. 


ಇದನ್ನೂ ಓದಿ-Viral Video: ಪ್ರೇಮಿಯನ್ನು ಮನೆಯಲ್ಲಿಟ್ಟುಕೊಳ್ಳುವಂತೆ ಆಗ್ರಹಿಸಿ ವಿದ್ಯುತ್ ಕಂಬ ಏರಿದ ಪತ್ನಿಯ ಹೈ ವೋಲ್ಟೇಜ್ ಡ್ರಾಮಾ


ಇದಕ್ಕೂ ಮುಂದುವರೆದು ಹೇಳಿರುವ ತಂಡದ ತರಬೇತುದಾರರು ನಾನು ಬರುತ್ತಿದ್ದೇನೆ ಮತ್ತು ನಿಮ್ಮೆಲ್ಲರನ್ನು ಗೆಲ್ಲುವಂತೆ ಮಾಡುತ್ತಿದ್ದೇನೆ ಎಂದು ಹೇಳುತ್ತಿದ್ದಾರೆ. ಆದರೆ, ಮುಂದಿನ ಬಾರಿ ನಾನು ಇಲ್ಲದಿರುವಾಗ, ನಾನಿಲ್ಲದೆ ನೀವು ಕಷ್ಟಪಟ್ಟು ಪ್ರಯತ್ನಿಸುತ್ತೀರಿ. ಪಂದ್ಯದ ಸಮಯದಲ್ಲಿ ನಾನು ಇರಲು ಮತ್ತು ನಿಮಗೆ ಬೆಂಬಲ ನೀಡಲು ನಾನು ಎಲ್ಲವನ್ನೂ ಮಾಡುತ್ತೇನೆ. ನಿಮ್ಮೆಲ್ಲರಿಗೂ ತುಂಬಾ ಧನ್ಯವಾದಗಳು ಎಂದಿದ್ದಾರೆ. 


ಕೆಕೆಆರ್ ಹಂಚಿಕೊಂಡ ವಿಡಿಯೋ ಇಲ್ಲಿದೆ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ