ನವದೆಹಲಿ: ಆಸ್ಟ್ರೇಲಿಯಾದ ಖ್ಯಾತ ಸ್ಪಿನ್ನರ್ ಶೇನ್ ವಾರ್ನ್(Shane Warne)ಅನೇಕ ಬಾರಿ ಲೈಂಗಿಕ ಹಗರಣದಲ್ಲಿ ಸಿಲುಕಿಕೊಂಡಿದ್ದಾರೆ. ಇದೇ ಕಾರಣದಿಂದ ಅವರ ವೃತ್ತಿಜೀವನದಲ್ಲಿ ಸಾಕಷ್ಟು ಕುಖ್ಯಾತರಾಗಿದ್ದರು. ಅನೇಕ ಮಹಿಳೆಯರೊಂದಿಗೆ ಲವ್ವಿ ಡವ್ವಿ ಮುಂದುವರಿಸಿದ್ದ ವಾರ್ನ್ ಗೆ ಪತ್ನಿ ವಿಚ್ಚೇದನ ನೀಡಿ ದೂರವಾದ್ದಳು. ಬಹುದಿನಗಳ ಬಳಿಕ ಮತ್ತೆ ಆಸ್ಟ್ರೇಲಿಯಾದ ಮಾಜಿ ಸ್ಪಿನ್ ಮಾಂತ್ರಿಕ ಸುದ್ದಿಯಲ್ಲಿದ್ದಾರೆ. ಈ ಬಾರಿ ಅವರ ವಿರುದ್ಧ ಮಾಡೆಲ್ ವೊಬ್ಬರು ಗಂಭೀರ ಆರೋಪ ಮಾಡಿದ್ದಾರೆ.


COMMERCIAL BREAK
SCROLL TO CONTINUE READING

ಮಾಡೆಲ್ ಗೆ ವಾರ್ನ್ ಅಶ್ಲೀಲ ಸಂದೇಶ


ತಮ್ಮ ಸ್ಪಿನ್‌ ಮೋಡಿಯಿಂದ ವಿಶ್ವದ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳಿಗೆ ನೀರು ಕುಡಿಸಿರುವ ಶೇನ್ ವಾರ್ನ್(Shane Warne) ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಮಾಡೆಲ್ ಮತ್ತು ಟಿವಿ ನಟಿ ಜೆಸ್ಸಿಕಾ ಪವರ್ ಅವರು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ(Australian Cricketer) ವಾರ್ನ್ ತಮಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಇದಷ್ಟೇ ಅಲ್ಲ 52ರ ಹರೆಯದ ವಾರ್ನ್‌ನ ಇಂತಹ ಕೃತ್ಯಕ್ಕೆ ಜೆಸ್ಸಿಕಾ ಕಿಡಿಕಾರಿದ್ದು, ಇದು ಆತನಿಗೆ ಅಂಟಿರುವ ‘ನರರೋಗ’ ಅಂತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶೇನ್ ವಾರ್ನ್ ವಿರುದ್ಧ ಮಹಿಳೆಯೊಬ್ಬರು ದೂರುತ್ತಿರುವುದು ಇದೇ ಮೊದಲಲ್ಲ. ಇದಕ್ಕೂ ಮೊದಲು ವಾರ್ನ್ ತನ್ನ ವರ್ತನೆಗಳಿಂದ ವಿವಾದಗಳಿಗೆ ಸಿಲುಕಿದ್ದರು, ಇದರಿಂದಾಗಿಯೇ ಅವರ ಸಂಸಾರನೌಕೆ ಮುರಿದುಬಿದ್ದಿತ್ತು. 


ಇದನ್ನೂ ಓದಿ: IPL 2022 ರಲ್ಲಿ ಹೊಸ ತಂಡಗಳ ಆಗಮನ : ಇದರಿಂದ ಕ್ರಿಕೆಟ್ ಮತ್ತೆ ಆಟಗಾರರ ಆದಾಯಕ್ಕೆ ಬ್ರೇಕ್!  


ಅಶ್ಲೀಲ ಸಂದೇಶದ ಸ್ಕ್ರೀನ್‌ಶಾಟ್‌ ಹಂಚಿಕೊಂಡ ಮಾಡೆಲ್


ಮಾಡೆಲ್ ಮತ್ತು ಟಿವಿ ನಟಿ ಜೆಸ್ಸಿಕಾ ಪವರ್(Jessika Power) ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಶೇನ್ ವಾರ್ನ್ ಕಳುಹಿಸಿರುವ ಅಶ್ಲೀಲ ಸಂದೇಶಗಳ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಜೆಸ್ಸಿಕಾಳನ್ನು ಹೋಟೆಲ್ ಕೋಣೆಯಲ್ಲಿ ಭೇಟಿಯಾಗುವಂತೆ ವಾರ್ನ್‌ ಹೇಳಿದ್ದಾರೆ. ಇದಕ್ಕೆ ಮಾಡೆಲ್‌ ನಿರಾಕರಿಸಿದರೂ ಬಿಡದ ವಾರ್ನ್ ನಿರಂತರವಾಗಿ ಅವರಿಗೆ ಅನೇಕ ಸಂದೇಶಗಳನ್ನು ಕಳುಹಿಸಿದ್ದಾರೆ. ಇಂಗ್ಲಿಷ್ ರಿಯಾಲಿಟಿ ಶೋ ‘ಬಿಗ್ ಬ್ರದರ್ ವಿಐಪಿ’ಯಲ್ಲಿ ಮಾಡೆಲ್ ಜೆಸ್ಸಿಕಾ ಶೇನ್ ವಾರ್ನ್ ವಿರುದ್ಧ ಈ ಆರೋಪ ಮಾಡಿದ್ದಾರೆ. ‘ನಾನು ಇದನ್ನು ಹುಚ್ಚುತನ ಎಂದು ಹೇಳಿದೆ. ನೀನು ಈ ರೀತಿ ಸಂದೇಶಗಳನ್ನು ಕಳುಹಿಸುತ್ತಿರುವುದು ನನಗೆ ನಂಬಲಾಗುತ್ತಿಲ್ಲ’ವೆಂದು ಅವರು ಶೇನ್ ಗೆ ವಾರ್ನ್ ಮಾಡಿದ್ದಾರೆ.  


ಸದಾ ವಿವಾದಗಳಲ್ಲೇ ಇರುವ ವಾರ್ನ್


30 ವರ್ಷದ ಜೆಸ್ಸಿಕಾ ಪವರ್ ಅವರು ಶೇನ್ ವಾರ್ನ್(Shane Warne) ತನಗೆ ಸಂದೇಶ ಕಳುಹಿಸಿದ್ದರು, ಅದರಲ್ಲಿ ಅವರು ಹೋಟೆಲ್ ಕೋಣೆಯಲ್ಲಿ ಭೇಟಿಯಾಗುವಂತೆ ಹೇಳಿದ್ದರು. ಆದರೆ ತಾನು ವಾರ್ನ್ ಭೇಟಿ ಮಾಡಲು ನಿರಾಕರಿಸಿದ್ದೆ. ಆದರೆ ವಾರ್ನ್ ನನಗೆ ನಿರಂತರವಾಗಿ ಅನೇಕ ಸಂದೇಶಗಳನ್ನು ಕಳುಹಿಸುತ್ತಿದ್ದ. ವಾರ್ನ್ ನಡವಳಿಕೆಯಿಂದ ನನಗೆ ತುಂಬಾ ಬೇಜಾರು ಆಯಿತು ಎಂದು ಮಾಡೆಲ್ ಹೇಳಿಕೊಂಡಿದ್ದಾರೆ. ಈ ಹಿಂದೆಯೂ ವಾರ್ನ್ ಇದೇ ರೀತಿಯ ವಿವಾದಗಳಿಂದ ಅನೇಕ ಬಾರಿ ಸುದ್ದಿಯಾಗಿದ್ದರು.  


ಇದನ್ನೂ ಓದಿ: ಟಿ-20 ಕ್ರಿಕೆಟ್ ನಾಯಕತ್ವಕ್ಕೆ ಈ ಆಟಗಾರನೇ ಬೆಸ್ಟ್ ಎಂದ ವೀರೇಂದ್ರ ಸೆಹ್ವಾಗ್ ..!   


ವಿಶ್ವದ ಶ್ರೇಷ್ಠ ಲೆಗ್ ಸ್ಪಿನ್ನರ್


ಶೇನ್ ವಾರ್ನ್ ಅವರು ಆಸ್ಟ್ರೇಲಿಯಾ ಪರ 300ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ವಿಶ್ವದ ಶ್ರೇಷ್ಠ ಲೆಗ್ ಸ್ಪಿನ್ನರ್ ಖ್ಯಾತಿ ಹೊಂದಿರುವ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ 708 ವಿಕೆಟ್‌ಗಳನ್ನು ಪಡೆದಿದ್ದಾರೆ. ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 293 ವಿಕೆಟ್‌ಗಳನ್ನು ಪಡೆದಿದ್ದಾರೆ. ಇದಲ್ಲದೆ ಅವರು ಐಪಿಎಲ್ ಸೀಸನ್ ಒಂದರಲ್ಲಿ ಪ್ರಶಸ್ತಿ ಗೆದ್ದ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕರಾಗಿದ್ದರು.         


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ