ಮಿಂಚಿದ ವಾಟ್ಸನ್, ಚೆನ್ನೈಗೆ ಒಲಿದ ಐಪಿಎಲ್ ಕಿರೀಟ
ಮುಂಬೈ: ಭಾನುವಾರದಂದು ಇಲ್ಲಿನ ವಾಂಖೆಡ್ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಐಪಿಎಲ್ ಪಂದ್ಯದಲ್ಲಿ ಚೆನ್ನೈ ತಂಡವು ಹೈದರಾಬಾದ್ ವಿರುದ್ದ ಗೆಲ್ಲುವ ಮೂಲಕ ಮತ್ತೆ ಐಪಿಎಲ್ ನಲ್ಲಿ ಪ್ರಾಬಲ್ಯ ಮೆರೆದಿದೆ. ಆ ಮೂಲಕ ಮೂರನೇ ಬಾರಿಗೆ ಐಪಿಎಲ್ ಟ್ರೋಪಿಯನ್ನು ತನ್ನ ಕೊರಳಿಗೆ ಏರಿಸಿಕೊಂಡಿದೆ.
ಅಂತಿಮ ಗ್ರ್ಯಾಂಡ್ ಫೈನಲ್ ಪಂಧ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಬಿಸಿದ ಶೇನ್ ವಾಟ್ಸನ್ ಅವರ (117; 57ಎ, 11ಬೌಂ, 8ಸಿ) ವೇಗದ ಶತಕದ ನೆರವಿನಿಂದ ಹೈದರಾಬಾದ ತಂಡವು ನೀಡಿದ ಗುರಿಯನ್ನು ಸುಲಭವಾಗಿ ತಲುಪಿತು.
ಮೊದಲು ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಚೆನ್ನೈನ ಕ್ಯಾಪ್ಟನ್ ಕೂಲ್ ಧೋನಿ ಹೈದರಾಬಾದ್ ತಂಡವನ್ನು ಬೃಹತ್ ಮೊತ್ತ ಪೇರಿಸದಂತೆ ನೋಡಿಕೊಂಡರು.ಮೊದಲು ಬ್ಯಾಟ್ ಮಾಡಿದ ಹೈದರಾಬಾದ್ ತಂಡವು 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 178 ರನ್ ಪೇರಿಸಿತು. ಹೈದರಾಬಾದ್ ಪರ ಕೆನ್ ವಿಲಿಯಮ್ಸನ್(47) ಯೂಸಫ್ ಪಠಾಣ 45 ರನ್ ಗಳ ಮೂಲಕ ತಂಡವು ಹೋರಾಟ ಮೊತ್ತ ಗಳಿಸಲು ನೆರವಾದರು.
ಟೂರ್ನಿಯ ಪ್ರಾರಂಭದಿಂದಲೂ ಉತ್ತಮ ಆಟವಾಡಿದ್ದ ಉಭಯ ತಂಡಗಳು ಕೊನೆಗೆ ವಾಟ್ಸನ್ ಅವರ ಬ್ಯಾಟಿಂಗ್ ಕರಾಮತ್ತಿಗೆ ಚೆನ್ನೈ ತಂಡವು ಹೈದರಾಬಾದ್ ವಿರುದ್ದದ ಫೈನಲ್ ಪಂಧ್ಯದಲ್ಲಿ ಮೇಲುಗೈ ಸಾಧಿಸಿತು.ಈ ಹಿಂದೆ ಚೆನ್ನೈ ತಂಡ ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಸಿಲುಕಿದ ನಂತರ ಎರಡು ವರ್ಷಗಳ ಕಾಲ ಐಪಿಎಲ್ ಟೂರ್ನಿಯಿಂದ ನಿಷೇಧಿಸಲಾಗಿತ್ತು.ಆದಾದಂತರ ಇದೇ ಮೊದಲ ಬಾರಿಗೆ ಅದು ಟೂರ್ನಿಯಲ್ಲಿ ಭಾಗವಹಿಸಿತ್ತು.
ಈ ಐಪಿಎಲ್ ಟೂರ್ನಿಯಲ್ಲಿ ಶೇನ್ ವಾಟ್ಸನ್ ಎರಡನೇ ಶತಕ ದಾಖಲಿಸುವ ಮೂಲಕ ವಿರಾಟ್ ಕೊಹ್ಲಿಯವರ ದಾಖಲೆಯನ್ನು ಸರಿಗಟ್ಟಿದರು.ಅಲ್ಲದೆ ಐಪಿಎಲ್ ಟೂರ್ನಿಯಲ್ಲಿ ಈವರೆಗೂ ನಾಲ್ಕು ಶತಕಗಳನ್ನು ಅವರು ಗಳಿಸಿದ್ದಾರೆ.