Shikhar Dhawan Love Story: ಟೀಂ ಇಂಡಿಯಾದ ಸ್ಟಾರ್ ಓಪನರ್ ಶಿಖರ್ ಧವನ್‌ ಅವರು ಆಯೇಷಾ ಮುಖರ್ಜಿ ಅವರನ್ನು 2012 ರಲ್ಲಿ ವಿವಾಹವಾದರು. ಆಯೇಷಾ ಮುಖರ್ಜಿ ಶಿಖರ್ ಧವನ್‌ ಅವರಿಗಿಂತ 10 ವರ್ಷ ದೊಡ್ಡವರಾಗಿದ್ದರು. ಫೇಸ್ ಬುಕ್ ಮೂಲಕ ಶಿಖರ್ ಧವನ್ ಮತ್ತು ಆಯೇಷಾ ಮುಖರ್ಜಿ ಸ್ನೇಹಿತರಾಗಿದ್ದರು. ಕೆಲವೇ ದಿನಗಳಲ್ಲಿ ಇವರ ನಡುವೆ ಗಾಢ ಸ್ನೇಹ ಬೆಳೆಯಿತು. ನಂತರ ಈ ಸ್ನೇಹವೇ ಪ್ರೇಮವಾಗಿ ಬದಲಾಯಿತು. ಇಬ್ಬರೂ ಒಬ್ಬರನ್ನೊಬ್ಬರು ಬಿಟ್ಟಿರದಷ್ಟು ಪ್ರೀತಿಸಲು ಆರಂಭೀಸಿದರು.


COMMERCIAL BREAK
SCROLL TO CONTINUE READING

ಆಯೇಷಾ ಅವರಿಗೆ ಆಗಲೇ ಒಂದು ಮದುವೆಯಾಗಿತ್ತು. ಮೊದಲ ಪತಿಯಿಂದ ವಿಚ್ಛೇದನ ಪಡೆದಿದ್ದರು. ಈ ಡಿವೋರ್ಸ್‌ ವಿಚಾರವನ್ನು ಧವನ್‌ ಬಳಿ ಆಯೇಷಾ ಹೇಳಿಕೊಂಡರು. ಆಯೇಷಾಗೆ ಇಬ್ಬರು ಮಕ್ಕಳೂ ಇದ್ದರು. ಈ ವಿಚಾರ ಸಹ ತಿಳಿಸಿದರು. ಇದರಿಂದ ಶಿಖರ್ ಧವನ್‌ ಗೆ ಆಯೇಷಾ ಮೇಲಿನ ಪ್ರೀತಿ ಕೊಂಚವೂ ಕಡಿಮೆಯಾಗಲಿಲ್ಲ. 


ಇದನ್ನೂ ಓದಿ: ಗಂಡು ಮಗುವಿನ ಪೋಷಕರಾದ ಅಭಿಷೇಕ್ - ಅವಿವಾ ನಡುವಿರುವ ವಯಸ್ಸಿನ ಅಂತರವೆಷ್ಟು ಗೊತ್ತಾ?


ಆಯೇಷಾ 10 ವರ್ಷ ದೊಡ್ಡವಳಾಗಿದ್ದರೂ ಶಿಖರ್ ಧವನ್‌ ಮದುವೆ ಆಗಲು ಬಯಸಿದರು. 2009ರಲ್ಲಿ ಶಿಖರ್ ಧವನ್‌ ಮತ್ತು ಆಯೇಷಾ ಮುಖರ್ಜಿ ಎಂಗೇಜ್‌ಮೆಂಟ್‌ ನಡೆಯಿತು. ಅಕ್ಟೋಬರ್ 30, 2012 ರಂದು ಶಿಖರ್ ಧವನ್‌ ಮತ್ತು ಆಯೇಷಾ ಮದುವೆಯಾದರು. 


ಆಯೇಷಾ ಅವರ ಮೊದಲ ಪತಿ ಉದ್ಯಮಿ ಆಗಿದ್ದರು. ಅವರಿಗೆ ರಿಯಾ ಮತ್ತು ಅಲಿಯಾ ಎಂಬ ಇಬ್ಬರು ಮಕ್ಕಳಿದ್ದಾರೆ. ಇಬ್ಬರೂ ಹುಡುಗಿಯರು ಶಿಖರ್ ಧವನ್ ಜೊತೆ ವಾಸಿಸುತ್ತಿದ್ದರು. ಆಯೇಷಾ ಮುಖರ್ಜಿ ಮತ್ತು ಶಿಖರ್‌ ಧವನ್ ಅವರು 2014 ರಲ್ಲಿ‌ ಗಂಡು ಮಗುವಿನ ಪೋಷಕರಾದರು. ಶಿಖರ್‌ ಧವನ್ ಮಗನ ಹೆಸರು ಜೋರಾವರ್.  


ಆಯೇಷಾ ಮುಖರ್ಜಿ ವೃತ್ತಿಯಲ್ಲಿ ಬಾಕ್ಸರ್ ಆಗಿದ್ದರು. ಭಾರತದಲ್ಲಿ ಜನಿಸಿದರೂ, ಅವರು ಆಸ್ಟ್ರೇಲಿಯಾಕ್ಕೆ ತೆರಳಿದರು. 2023 ರಲ್ಲಿ ಟೀಂ ಇಂಡಿಯಾದ ಸ್ಟಾರ್ ಓಪನರ್ ಶಿಖರ್ ಧವನ್ ಜೊತೆ ಪತ್ನಿ ಆಯೇಷಾ ಮುಖರ್ಜಿ ಡಿವೋರ್ಸ್‌ ಪಡೆದರು. 


ಇದನ್ನೂ ಓದಿ: ಹೊರ ಹೋಗುವ ನಿರ್ಧಾರ ಮಾಡಿದ್ದೇಕೆ ಧರ್ಮ ಕೀರ್ತಿರಾಜ? ಬಿಗ್‌ ಬಾಸ್‌ ನಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.