ನವದೆಹಲಿ: ಮುಂಬರುವ ವೆಸ್ಟ್ ಇಂಡೀಸ್ ಸರಣಿಗೂ ಮುನ್ನ ಭಾರತಕ್ಕೆ ಗಾಯದ ಸಮಸ್ಯೆ ತಲೆದೂರಿದೆ.ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ ಮತ್ತು ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ಅವರು ಆಡುವಾಗ ಗಾಯಗೊಂಡಿದ್ದರಿಂದಾಗಿ ಈಗ ತಂಡದಿಂದ ಹೊರಗೆ ಉಳಿದಿದ್ದಾರೆ.


COMMERCIAL BREAK
SCROLL TO CONTINUE READING

ಡಿಸೆಂಬರ್ 6, 2019 ರಿಂದ ಪ್ರಾರಂಭವಾಗುವ ವೆಸ್ಟ್ ಇಂಡೀಸ್ ವಿರುದ್ಧದ ಟಿ-20 ಸರಣಿಯಲ್ಲಿ ಶಿಖರ್ ಧವನ್ ಭಾಗವಹಿಸುವುದಿಲ್ಲ ಮತ್ತು ವೃದ್ಧಿಮಾನ್ ಸಹಾ ಅವರ ಬಲ ಉಂಗುರದ ಬೆರಳಿಗೆ ಶಸ್ತ್ರಚಿಕಿತ್ಸೆ ಮಾಡಲಾಯಿತು. ಅಖಿಲ ಭಾರತ ಹಿರಿಯ ಆಯ್ಕೆ ಸಮಿತಿ ಮೂರು ಪಂದ್ಯಗಳ ವೆಸ್ಟ್ ಇಂಡೀಸ್ ಟಿ 20 ಐ ಸರಣಿಗೆ ಧವನ್ ಅವರ ಬದಲಿಯಾಗಿ ಸಂಜು ಸ್ಯಾಮ್ಸನ್ ಅವರನ್ನು ಹೆಸರಿಸಿದೆ.


ಸೂರತ್‌ನಲ್ಲಿ ಮಹಾರಾಷ್ಟ್ರ ವಿರುದ್ಧದ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಪಂದ್ಯದ ವೇಳೆ ಧವನ್ ಅವರ ಎಡ ಮೊಣಕಾಲಿಗೆ  ಗಂಭೀರ್ ಗಾಯವಾಗಿತ್ತು.ಇದರಿಂದಾಗಿ ಅವರಿಗೆ ಅನೇಕ ಹೋಲಿಗೆ ಗಳನ್ನು ಹಾಕಿದ್ದಾರೆ. ಬಿಸಿಸಿಐ ವೈದ್ಯಕೀಯ ತಂಡವು ಮಂಗಳವಾರ ಧವನ್ ಅವರ ಗಾಯಗಳನ್ನು ಪರಿಶೀಲಿಸಿ ಅವರ ಗಾಯವು ಸಂಪೂರ್ಣವಾಗಿ ಗುಣವಾಗಲು ಇನ್ನೂ ಸ್ವಲ್ಪ ಸಮಯ ಬೇಕು ಎಂದು ಸಲಹೆ ನೀಡಿದರು. ಇತ್ತೀಚೆಗೆ ಬಾಂಗ್ಲಾದೇಶ ವಿರುದ್ಧ ಕೋಲ್ಕತ್ತಾದಲ್ಲಿ ನಡೆದ ಪಿಂಕ್ ಬಾಲ್ ಟೆಸ್ಟ್ ಪಂದ್ಯದ ವೇಳೆ ಸಹಾ ಬಲಗೈ ಬೆರಳಿಗೆ ಗಾಯವಾಗಿದೆ.