ವಿರಾಟ್ ಕೊಹ್ಲಿ ಬಗ್ಗೆ ಮಹತ್ವದ ಕಾಮೆಂಟ್ ಮಾಡಿದ ಶಿಖರ್ ಧವನ್!
Shikhar Dhawan On Virat Kohli : ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಯ ಮೂಲಕ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಭಾರತ ತಂಡಕ್ಕೆ ಮರಳಿದ್ದಾರೆ.
Shikhar Dhawan On Virat Kohli : ಬಹಳ ಸಮಯದ ನಂತರ ರೋಹಿತ್ ಮತ್ತು ಕೊಹ್ಲಿ ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ T20I ಸರಣಿಗೆ ಆಯ್ಕೆಯಾಗಿದ್ದಾರೆ. ಭಾರತದ ಅನುಭವಿ ಆರಂಭಿಕ ಆಟಗಾರ ಶಿಖರ್ ಧವನ್ ಅವರು ಟಿ20 ವಿಶ್ವಕಪ್ ತಂಡಕ್ಕೆ ಕೊಹ್ಲಿ ಮರಳುವ ಬಗ್ಗೆ ಮಾತನಾಡಿದ್ದಾರೆ. ಅಲ್ಲದೇ, ಭಾರತ ತಂಡದಲ್ಲಿ ವಿರಾಟ್ ಕೊಹ್ಲಿ ಭವಿಷ್ಯದ ಬಗ್ಗೆ ಚರ್ಚಿಸಿದ್ದಾರೆ.
ಶಿಖರ್ ಧವನ್ ಕೊನೆಯದಾಗಿ 2022 ರಲ್ಲಿ ಬಾಂಗ್ಲಾದೇಶದ ವಿರುದ್ಧ ಜಹೂರ್ ಅಹ್ಮದ್ ಚೌಧರಿ ಕ್ರೀಡಾಂಗಣದಲ್ಲಿ ಅಂತರಾಷ್ಟ್ರೀಯ ಪಂದ್ಯದಲ್ಲಿ ಆಡಿದ್ದರು. ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ, ಶಿಖರ್ ಧವನ್ ಆಡಲು ಸಿದ್ಧರಾಗಿದ್ದಾರೆ. ಧವನ್ ಪಂಜಾಬ್ ಕಿಂಗ್ಸ್ ನಾಯಕತ್ವ ವಹಿಸಲಿದ್ದಾರೆ. ವೈಟ್-ಬಾಲ್ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಎಡಗೈ ಆಟಗಾರರಲ್ಲಿ ಒಬ್ಬರಾದ ಧವನ್ ಮೂರು ವಿಭಿನ್ನ ನಾಯಕರ ಅಡಿಯಲ್ಲಿ ಟೀಮ್ ಇಂಡಿಯಾದಲ್ಲಿ ಆಡಿದ್ದಾರೆ.
ಇದನ್ನೂ ಓದಿ: ಈ ಆಟಗಾರನನ್ನು ಟೀಂ ಇಂಡಿಯಾದಿಂದ ಹೊರಗಿಟ್ಟರೆ ಬಹಳ ಕಷ್ಟವಾಗುತ್ತದೆ!ಸುನಿಲ್ ಗವಾಸ್ಕರ್ ಹೇಳಿದ್ದು ಯಾವ ಆಟಗಾರನ ಬಗ್ಗೆ ?
ಶಿಖರ್ ಧವನ್ ಇತ್ತೀಚಿನ ಸಂದರ್ಶನವೊಂದರಲ್ಲಿ ವಿರಾಟ್ ಕೊಹ್ಲಿ ಭಾರತ ತಂಡದ ಪ್ರಬಲ ಆಟಗಾರ ಎಂದು ಹೊಗಳಿದ್ದಾರೆ. ಕೊಹ್ಲಿ ಕಂಡೀಷನಿಂಗ್ ಮತ್ತು ದೈಹಿಕ ಸಾಮರ್ಥ್ಯಕ್ಕೆ ಹೆಚ್ಚಿನ ಒತ್ತು ನೀಡುತ್ತಾರೆ. ಅವರ ನಾಯಕತ್ವದಲ್ಲಿ, ದೈಹಿಕ ಸಾಮರ್ಥ್ಯಕ್ಕೆ ಒತ್ತು ನೀಡುವುದು ತಂಡದ ಪ್ರಮುಖ ಭಾಗವಾಗಿ ಬೆಳೆದಿದೆ. ಕೊಹ್ಲಿ ಅವರ ಅವರ ಬ್ಯಾಟಿಂಗ್ ಸ್ಟೈಲ್ ತಂಡಕ್ಕೆ ಪ್ಲಸ ಪಾಯಿಂಟ್ ಆಗಿದೆ ಎಂದು ಧವನ್ ಹೇಳಿದರು.
ಭಾರತ ತಂಡದ ನಾಯಕ ಎಂಎಸ್ ಧೋನಿ ನಾಯಕತ್ವದಲ್ಲಿ ಆಡಿದ್ದನ್ನು ಧವನ್ ನೆನಪಿಸಿಕೊಂಡಿದ್ದಾರೆ. ಐಪಿಎಲ್ 2024 ರಲ್ಲಿ ಭಾರತದ ಮಾಜಿ ನಾಯಕ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕತ್ವ ವಹಿಸಲಿದ್ದಾರೆ. ಅವರ ನಾಯಕತ್ವವು ಯಾವಾಗಲೂ ಉತ್ತಮವಾಗಿರುತ್ತದೆ. ಧೋನಿ ಭಾಯ್ ನಿರ್ಧಾರಗಳನ್ನು ತೆಗೆದುಕೊಳ್ಳುವ ಅವರ ಸಹಜ ಸಾಮರ್ಥ್ಯಕ್ಕಾಗಿ ಆಗಾಗ್ಗೆ ಪ್ರಶಂಸಿಸಲ್ಪಡುತ್ತಾರೆ. ಅವರು ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಎಂದು ಧವನ್ ಹೇಳಿದರು.
ಭಾನುವಾರ ಇಂದೋರ್‌ನಲ್ಲಿ ನಡೆದ ಅಫ್ಘಾನಿಸ್ತಾನ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಕೊಹ್ಲಿ 16 ಎಸೆತಗಳಲ್ಲಿ 29 ರನ್ ಗಳಿಸಿದ್ದರು.
ಇದನ್ನೂ ಓದಿ: Yuvraj Sigh: ಮುಂಬೈ ಇಂಡಿಯನ್ಸ್ ನಾಯಕತ್ವ ಬದಲಾವಣೆಗೆ ಇದುವೇ ಪ್ರಮುಖ ಕಾರಣ: ಯುವರಾಜ್ ಸಿಂಗ್ ಹೇಳಿದ ಸತ್ಯವೇನು?
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.