ಬೆಂಗಳೂರು: ಐಪಿಎಲ್ 2022 ರ ಮೆಗಾ ಹರಾಜಿನ (IPL 2022 Mega Auction) 2 ನೇ ದಿನದಂದು ಭಾರತದ ಆಲ್ ರೌಂಡರ್ ಶಿವಂ ದುಬೆ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್  (CSK) 4 ಕೋಟಿ ರೂ.ಗೆ ಖರೀದಿಸಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: IPL 2022 Mega Auction:ಇಯಾನ್ ಮಾರ್ಗನ್, ಆರನ್ ಫಿಂಚ್ ಅನ್ ಸೋಲ್ಡ್!


ಶಿವಂ ದುಬೆ (Shivam Dube) ಅವರನ್ನು ಮುಂದಿನ ಯುವರಾಜ್ ಸಿಂಗ್ ಎಂದು ಬಿಂಬಿಸಲಾಯಿತು. ಆದರೆ ಅವರು ನಿರೀಕ್ಷೆಗಳಿಗೆ ತಕ್ಕಂತೆ ಆಡಲು ವಿಫಲರಾದರು. ಅಲ್ಲೊಂದು ಇಲ್ಲೊಂದು ತಮ್ಮ ಸಾಮರ್ಥ್ಯದ ಝಲಕ್ ತೋರಿದರೂ, ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ.


ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಭಾಗವಾಗಿದ್ದಾಗ ದುಬೆ ಐಪಿಎಲ್‌ನಲ್ಲಿ (IPL) ಧೂಳೆಬ್ಬಿಸಿದರು. ಅಲ್ಲಿ ಅವರು ಹೆಚ್ಚಾಗಿ ಫಿನಿಶರ್ ಮತ್ತು ಆರನೇ ಬೌಲರ್ ಆಗಿ ಆಡಿದರು. 


ಚೆನ್ನೈ ಸೂಪರ್ ಕಿಂಗ್ಸ್, ಪಂಜಾಬ್ ಕಿಂಗ್ಸ್ (Punjab Kings) ಮತ್ತು ಮುಂಬೈ ಇಂಡಿಯನ್ಸ್ (MI) ನಡುವೆ ಇವರ ಖರೀದಿಗೆ ಪೈಪೋಟಿ ನಡೆಯಿತು. ಇವರ ಮೂಲ ಬೆಲೆ 50 ಲಕ್ಷ ರೂಪಾಯಿ ಆಗಿತ್ತು. ಅಂತಿಮವಾಗಿ ಚೆನ್ನೈ ಸೂಪರ್ ಕಿಂಗ್ಸ್ ಶಿವಂ ದುಬೆ ಅವರನ್ನು 4 ಕೋಟಿ ರೂಪಾಯಿಗೆ ಖರೀದಿ ಮಾಡಿದೆ.  


ಇದನ್ನೂ ಓದಿ: IPL 2022 Mega Auction:KKR ತಂಡ ಸೇರಿದ ರಹಾನೆ.. ಏಡೆನ್ ಮಾರ್ಕ್ರಾಮ್ ಗೆ SRH ಕೊಟ್ಟ ಮೊತ್ತ ಇಷ್ಟು..


ಶಿವಂ ದುಬೆ 4 ಕೋಟಿ ರೂಪಾಯಿ ಹರಾಜು ಮೊತ್ತ ಪಡೆದ ಖುಷಿ ಒಂದೆಡೆಯಾದ್ರೆ, ಇನ್ನೊಂದೆಡೆ ಅವರ ಪತ್ನಿ ಗಂಡು ಮಗುವಿಗೆ ಇಂದು ಜನ್ಮ ನೀಡಿದ್ದಾರೆ. ಈ ಮೂಲಕ ಆಲ್‌ರೌಂಡರ್ (Allrounder) ದುಬೆಗೆ ಒಂದೇ ದಿನ ಎರಡು ಸಿಹಿ ಸುದ್ದಿ ದೊರೆತಿವೆ. 


ಕಳೆದ ಐಪಿಎಲ್ ಸೀಸನ್‌ನಲ್ಲಿ ರಾಜಸ್ತಾನ್ ರಾಯಲ್ಸ್ (RR) ಪರ ಆಡಿದ್ದರು. ಅದಕ್ಕೂ ಮೊದಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಿದ್ದರು. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.