Virat Kohli shocking video leak : ಭಾನುವಾರ (ಅಕ್ಟೋಬರ್ 31) ಪರ್ತನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ T20 ವಿಶ್ವಕಪ್ 2022 ಸೂಪರ್ 12 ಪಂದ್ಯದ ನಂತರ ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರ ಖಾಸಗಿತನಕ್ಕೆ ಸಂಬಂಧಪಟ್ಟ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಕೊಹ್ಲಿ ತಮ್ಮ ಹೊಟೇಲ್‌ನ ಕೊಠಡಿಯಲ್ಲಿ ಇಲ್ಲದಿದ್ದಾಗ ಅಭಿಮಾನಿಯೊಬ್ಬರು ಕಿಂಗ್‌ ಕೊಹ್ಲಿ ರೂಮ್‌ ಪ್ರವೇಶಿಸಿ ಅಭಿಮಾನಿಯೊಬ್ಬ ವೀಡಿಯೊ ಮಾಡಿ ಇಂಟರ್‌ನೆಟ್‌ನಲ್ಲಿ ಹರಿಬಿಟ್ಟಿದ್ದಾನೆ.


COMMERCIAL BREAK
SCROLL TO CONTINUE READING

ವಿಡಿಯೋ ನೋಡಿದ ಕೊಹ್ಲಿ ಶಾಕ್‌ಗೆ ಒಳಗಾಗಿದ್ದಾರೆ. ಈ ರೀತಿಯ ಕೆಲಸ ಒಳ್ಳೆಯದಲ್ಲ. ಖಾಸಗಿತನದ ಆಕ್ರಮಣ ಸರಿಯಿಲ್ಲ ಎಂದು ಕೊಹ್ಲಿ ಅಭಿಮಾನಿಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೌದು.. ವೈರಲ್‌ ವಿಡಿಯೋ ಶೇರ್‌ ಮಾಡಿರುವ ಕೊಹ್ಲಿ, ಅಭಿಮಾನಿಗಳು ತಮ್ಮ ನೆಚ್ಚಿನ ಆಟಗಾರರನ್ನು ನೋಡಿದಾಗ ತುಂಬಾ ಸಂತೋಷ ಮತ್ತು ಉತ್ಸುಕರಾಗುತ್ತಾರೆ ಹಾಗೂ ಅವರನ್ನು ಭೇಟಿ ಮಾಡಲು ಬಯಸುತ್ತಾರೆ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ. ಅದನ್ನು ನಾನು ಪ್ರಶಂಸಿಸುತ್ತೇನೆ. ಆದರೆ ಈ ವೀಡಿಯೊ ಭಯಾನಕವಾಗಿದೆ ಎಂದಿದ್ದಾರೆ.


ಇದನ್ನೂ ಓದಿ : 20 World Cup: ಡೇಂಜರ್ ಝೋನ್ ನಲ್ಲಿ ಟೀಂ ಇಂಡಿಯಾ... ಸೆಮಿಸ್ ಲೆಕ್ಕಾಚಾರ ಉಲ್ಟಾಪಲ್ಟಾ!


 

 

 

 



 

 

 

 

 

 

 

 

 

 

 

A post shared by Virat Kohli (@virat.kohli)


ಅಲ್ಲದೆ, ಇದು ನನ್ನ ಗೌಪ್ಯತೆಗೆ ಸಂಬಂಧಪಟ್ಟ ವಿಚಾರ. ನನ್ನ ಸ್ವಂತ ಹೋಟೆಲ್ ಕೋಣೆಯಲ್ಲಿ ನಾನು ಗೌಪ್ಯತೆ ಕಾಪಾಡಲು ಸಾಧ್ಯವಾಗದಿದ್ದರೆ, ಬೇರೆ ಸ್ಥಳದಲ್ಲಿ ಖಾಸಗಿತನವನ್ನು ಹೇಗೆ ನಿರೀಕ್ಷಿಸಲಿ.? ಈ ರೀತಿಯ ಕೆಲಸ ಸರಿಯಲ್ಲ. ದಯವಿಟ್ಟು ಜನರ ಖಾಸಗಿತನವನ್ನು ಗೌರವಿಸಿ ಮತ್ತು ಅವರನ್ನು ಮನರಂಜನೆಯ ಸರಕು ಎಂದು ಪರಿಗಣಿಸಬೇಡಿ ಎಂದು ಕೊಹ್ಲಿ ಮನವಿ ಮಾಡಿಕೊಂಡಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ