Shreyas Iyer: ಭಾರತ ಮತ್ತು ಇಂಗ್ಲೆಂಡ್ ನಡುವೆ ಐದು ಪಂದ್ಯಗಳ ಟೆಸ್ಟ್ ಸರಣಿ ನಡೆಯುತ್ತಿದೆ. ಸರಣಿಯ ಮೂರನೇ ಟೆಸ್ಟ್ ಪಂದ್ಯ ಮುಂದಿನ ವಾರ ಫೆಬ್ರವರಿ 15 ಗುರುವಾರದಿಂದ ನಡೆಯಲಿದ್ದು, ಐದು ಪಂದ್ಯಗಳ ಟೆಸ್ಟ್ ಸರಣಿ ಸದ್ಯ 1-1ರಲ್ಲಿ ಸಮಬಲಗೊಂಡಿದೆ. ಹೀಗಿರುವಾಗ ರಾಜ್ ಕೋಟ್ ನಲ್ಲಿ ನಡೆಯಲಿರುವ ಮೂರನೇ ಟೆಸ್ಟ್ ಪಂದ್ಯ ಉಭಯ ತಂಡಗಳಿಗೂ ಅತ್ಯಂತ ಮಹತ್ವದ್ದಾಗಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಆರ್ಥಿಕ ಉದಾರೀಕರಣದ ಹರಿಕಾರ ಮಾಜಿ ಪ್ರಧಾನಿ ಪಿ.ವಿ.ನರಸಿಂಹ ರಾವ್ 


ಆದರೆ ಭಾರತದ ಮಧ್ಯಮ ಕ್ರಮಾಂಕದ ಬ್ಯಾಟರ್ ಶ್ರೇಯಸ್ ಅಯ್ಯರ್ ಗಾಯಗೊಂಡಿರುವ ಕಾರಣ, ಇಂಗ್ಲೆಂಡ್ ವಿರುದ್ಧದ ಉಳಿದ ಮೂರು ಟೆಸ್ಟ್ ಪಂದ್ಯಗಳಿಂದ ಹೊರಗುಳಿಯುವ ಸಾಧ್ಯತೆಯಿದೆ.


ಇಂಡಿಯನ್ ಎಕ್ಸ್‌ಪ್ರೆಸ್‌ ವರದಿಯ ಪ್ರಕಾರ, ಶ್ರೇಯಸ್ ಅಯ್ಯರ್ ತೀವ್ರ ಬೆನ್ನು ಮತ್ತು ತೊಡೆಸಂದು ನೋವಿನಿಂದ ಬಳಲುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ (ಎನ್‌’ಸಿಎ) ಟೆಸ್ಟ್’ಗೆಂದು ಕಳುಹಿಸಲಾಗುತ್ತದೆ.


30ಕ್ಕೂ ಹೆಚ್ಚು ಎಸೆತಗಳನ್ನು ಆಡಿದ ಬಳಿಕ ಶ್ರೇಯಸ್ ಅಯ್ಯರ್, ಬೆನ್ನುನೋವು ಮತ್ತು ಸೊಂಟ ನೋವಿನಿಂದ ಬಳಲಿದ್ದಾರೆ ಎಂದು ಭಾರತ ತಂಡದ ಆಡಳಿತ ಮತ್ತು ವೈದ್ಯಕೀಯ ಸಿಬ್ಬಂದಿ ತಿಳಿಸಿದ್ದಾರೆ. ಶಸ್ತ್ರಚಿಕಿತ್ಸೆಯ ನಂತರ ಅವರು ಮೊದಲ ಬಾರಿಗೆ ಈ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ, ಆದ್ದರಿಂದ ಕೆಲವು ವಾರಗಳ ಕಾಲ ವಿಶ್ರಾಂತಿ ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ.


ಇದನ್ನೂ ಓದಿ: ಇನ್’ಸ್ಟಾಗ್ರಾಂನಲ್ಲಿ ಪರಸ್ಪರ ಅನ್’ಫಾಲೋ ಮಾಡಿದ ರೋಹಿತ್-ಹಾರ್ದಿಕ್! ಕಾರಣವಾಗಿದ್ದು ‘ಆಕೆಯ’ ಪೋಸ್ಟ್


ಹೈದರಾಬಾದ್ ಮತ್ತು ವೈಜಾಗ್‌ನಲ್ಲಿ ಆಡಿದ ಮೊದಲ ಎರಡು ಟೆಸ್ಟ್‌’ಗಳಲ್ಲಿ ಅಯ್ಯರ್ 35, 13, 27, 29 ಸ್ಕೋರ್‌ಗಳನ್ನು ದಾಖಲಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.